ಬಾಂಗ್ಲಾದೇಶೀಯರು ಕೇವಲ ಪೋಹಾ(ಅವಲಕ್ಕಿ) ತಿನ್ನುತ್ತಾರಂತೆ| ಅವರ ಆಹಾರ ಪದ್ಧತಿಯಿಂದಲೇ ಅವರನ್ನು ಸುಲಭವಾಗಿ ಗುರುತಿಸಬಹುದಂತೆ| ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ವಿವಾದಾತ್ಮಕ ಹೇಳಿಕೆ| ತಮ್ಮ ಮನೆ ನಿರ್ಮಾಣಕ್ಕೆ ಬಂದಿದ್ದ ಬಾಂಗ್ಲಾದೇಶಿ ವಲಸಿಗರು ನಿತ್ಯವೂ ಪೋಹಾ ತಿನ್ನುತ್ತಿದ್ದರು ಎಂದ ಕೈಲಾಶ್| ಕೈಲಾಶ್ ವಿಜಯವರ್ಗೀಯ ಹೇಳಿಕೆಗೆ ತೀವ್ರ ವಿರೋಧ|

ಇಂಧೋರ್(ಜ.24): ಅಕ್ರಮ ಬಾಂಗ್ಲಾದೇಶೀಯರನ್ನು ಅವರು ತಿನ್ನುವ ಆಹಾರದಿಂದಲೇ ಸುಲಭವಾಗಿ ಗುರುತಿಸಬಹುದು ಎಂಧು ಬಿಜೆಪಿ ನಾಯಕ ಹಾಗೂ ಪ.ಬಂಗಾಳ ಉಸ್ತುವಾರಿ ಕೈಲಾಶ್ ವಿಜಯವರ್ಗೀಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಾಂಗ್ಲಾದೇಶೀಯರು ಕೇವಲ ಪೋಹಾ(ಅವಲಕ್ಕಿ) ತಿನ್ನುತ್ತಾರೆ. ಅವರ ಈ ಆಹಾರ ಪದ್ದತಿಯಿಂದಲೇ ಅವರನ್ನು ಸುಲಭವಾಗಿ ಗುರುತಿಸಬಹುದು ಎಂದು ಕೈಲಾಶ್ ವಿಜಯವರ್ಗೀಯ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ಅಕ್ರಮ ಬಾಂಗ್ಲನ್ನರ ಲೆಕ್ಕವೇ ಇಲ್ಲ!

ತಮ್ಮ ಮನೆ ನಿರ್ಮಾಣ ಕೆಲಸಕ್ಕೆ ಬಂದಿದ್ದ ಕೆಲವು ಕಾರ್ಮಿಕರು ನಿತ್ಯವೂ ಊಟಕ್ಕೆ ಕೇವಲ ಪೋಹಾ ತಿನ್ನುತ್ತಿದ್ದರು. ಅವರ ಈ ಆಹಾರ ಪದ್ಧತಿ ತಮಗೆ ಅನುಮಾನ ಬರುವಂತೆ ಮಾಡಿತು. ಈ ಕುರಿತು ಪರಿಶೀಲನೆ ನಡೆಸಿದಾಗ ಅವರು ಅಕ್ರಮ ಬಾಂಗ್ಲಾದೇಶೀಯರು ಎಂಬುದು ಗೊತ್ತಾಯಿತು ಎಂದು ಕೈಲಾಶ್ ವಿಜಯವರ್ಗೀಯ ಹೇಳಿದ್ದಾರೆ.

Scroll to load tweet…

ಸಿಎಎ ಪರ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಕೈಲಾಶ್ ವಿಜಯವರ್ಗೀಯ, ಅಕ್ರಮ ಭಾಂಗ್ಲಾ ವಲಸಿಗರ ಆಹಾರ ಪದ್ಧತಿಯಿಂದ ಅವರನ್ನು ಸುಲಭವಾಗಿ ಗುರುತಿಸಿ ಹೊರ ಹಾಕಬಹುದಾಗಿದೆ ಎಂದು ಹೇಳಿದರು.

1 ಕೋಟಿ ಬಾಂಗ್ಲಾ ಮುಸ್ಲಿಂರನ್ನು ಹೊರ ದಬ್ಬುತ್ತೇವೆ: ಬಿಜೆಪಿಗ

ಆದರೆ ಬಾಂಗ್ಲಾದೇಶೀಯರಿಗೆ ಪೋಹಾ(ಅವಲಕ್ಕಿ) ಆಹಾರ ಗೊತ್ತೇ ಇಲ್ಲ ಎಂದು ಕೆಲವರು ವಾದಿಸಿದ್ದು, ತಮ್ಮ ರಾಜಕೀಯ ಲಾಭಕ್ಕಾಗಿ ಆಹಾರ ಪದ್ಧತಿಯನ್ನು ಎಳೆದು ತಂದಿದ್ದು ಸರಿಯಲ್ಲ ಎಂದು ಕೈಲಾಶ್ ವಿಜಯವರ್ಗೀಯ ವಿರುದ್ಧ ಹರಿಹಾಯ್ದಿದ್ದಾರೆ.