ಬಾಂಗ್ಲಾದ ಶೇಖ್ ಹಸೀನಾ ಭಾರತ ಬಿಟ್ಟು ಹೋಗ್ತಾರಂತೆ! ಎಲ್ಲಿಗೆ ಹೋಗ್ತಾರೆ
ಮೀಸಲಾತಿ ಹೋರಾಟದ ನಂತರ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಬೇರೆ ದೇಶಕ್ಕೆ ಕಳುಹಿಸಲು ಪ್ರಯತ್ನ ನಡೆಯುತ್ತಿದೆ. ಭಾರತವು ಈ ಸಂಬಂಧ ಮಾತುಕತೆ ಆರಂಭಿಸಿದೆ ಎನ್ನಲಾಗಿದೆ.
ಢಾಕಾ (ಸೆ.2): ಮೀಸಲಾತಿ ಕೋಟಾಗಾಗಿ ಬಾಂಗ್ಲಾದೇಶದಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದವು. ಪ್ರತಿಭಟನಾಕಾರರ ಬೇಡಿಕೆಯ ಮೇರೆಗೆ ಮಧ್ಯಂತರ ಸರ್ಕಾರ ರಚನೆಯಾಯಿತು. ಬಾಂಗ್ಲಾದ ಮಧ್ಯಂತರ ಸರ್ಕಾರದ ಅಧ್ಯಕ್ಷ ಮುಹಮ್ಮದ್ ಯೂನಸ್ ಆಗಿದ್ದಾರೆ. ಸದ್ಯ ಭಾರತದ ಆಶ್ರಯದಲ್ಲಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಬೇರೆ ದೇಶಕ್ಕೆ ಕಳುಹಿಸಲು ಪ್ರಯತ್ನ ನಡೆಯುತ್ತಿದೆ. ಭಾರತದಲ್ಲಿ ಅರಾಜಕತೆ ಸೃಷ್ಟಿಯಾದಾಗ ಹಸೀನಾ ಪರಾರಿಯಾಗಿ ಆಗಸ್ಟ್ 5 ರಂದು ಭಾರತಕ್ಕೆ ಆಗಮಿಸಿದ್ದರು.
ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ನಂತರ ಶೇಖ್ ಹಸೀನಾ ಯಾವುದೇ ದೇಶದಲ್ಲಿ ಉಳಿಯಲು 'ಲಿಖಿತ ಅರ್ಜಿ' ಸಲ್ಲಿಸಿಲ್ಲ. ಕಳೆದ ಗುರುವಾರ ರಾಜ್ಯ ಅತಿಥಿ ಗೃಹದಲ್ಲಿ ಸಲಹಾ ಮಂಡಳಿಯ ಸಭೆ ನಡೆಯಿತು. ಆ ಸಭೆಯ ನಂತರ, ಮಧ್ಯಂತರ ಸರ್ಕಾರವು ಹಿಂದಿನ ಶೇಖ್ ಹಸೀನಾ ಸರ್ಕಾರವು ವಿಶೇಷ ಕಾನೂನನ್ನು ಜಾರಿಗೆ ತಂದಿದೆ ಎಂದು ತಿಳಿಸಿತು. ಮಧ್ಯಂತರ ಸರ್ಕಾರದ ಮುಖ್ಯ ಸಲಹಾ ಮಂಡಳಿಯು ಆದೇಶದ ಕರಡನ್ನು ಅನುಮೋದಿಸಿದೆ.
ಜಗತ್ತನ್ನು ಬೆಚ್ಚಿಬೀಳಿಸಿದ ಭಾರತದ ರಾಜಕೀಯ ನಾಯಕರ ಹತ್ಯೆಗಳು!
ವಿಶೇಷ ಮೂಲಗಳ ಪ್ರಕಾರ, ಶೇಖ್ ಹಸೀನಾ ಅವರಿಗೆ ಆಶ್ರಯ ನೀಡುವ ಬಗ್ಗೆ ಭಾರತವು ಕತಾರ್ ಜೊತೆ ಮಾತುಕತೆ ಆರಂಭಿಸಿದೆ. ಸಾಮಾನ್ಯವಾಗಿ, ರಾಜತ್ವ ಹುದ್ದೆ ಕಳೆದುಕೊಂಡ ರಾಜಕೀಯ ವ್ಯಕ್ತಿಗಳು ಪರ್ಷಿಯನ್ ಕೊಲ್ಲಿ ಮತ್ತು ಕೆಂಪು ಸಮುದ್ರದ ದೇಶಗಳಿಗೆ ತೆರಳುತ್ತಾರೆ ಶೇಖ್ ಹಸೀನಾ ಕೂಡ ಕತಾರ್‌ಗೆ ತೆರಳುತ್ತಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ದೇಶಕ್ಕೆ ಕಳುಹಿಸಿ ಎಂದು ಬಾಂಗ್ಲಾ ಆಗ್ರಹ: ಬಾಂಗ್ಲಾದೇಶದಲ್ಲಿ ಹಸೀನಾ ವಿರುದ್ಧ "ಹಲವಾರು ಪ್ರಕರಣಗಳು ಇರುವುದರಿಂದ, ದೇಶದ ಗೃಹ ಮತ್ತು ಕಾನೂನು ಸಚಿವಾಲಯಗಳು ಅವಳನ್ನು ಹಸ್ತಾಂತರಿಸಲು ವಿನಂತಿಸಬಹುದು" ಬಾಂಗ್ಲಾದೇಶದಿಂದ ಬೇಡಿಕೆ ಬಂದರೆ ಅದು ಭಾರತ ಸರ್ಕಾರಕ್ಕೆ ಮುಜುಗರದ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ ಎಂದು ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಮೊಹಮ್ಮದ್ ತೌಹಿದ್ ಹೊಸೈನ್ ಹೇಳಿದ್ದಾರೆ.
ಬಾಂಗ್ಲಾದ ಮಾಧ್ಯಮಗಳ ವರದಿ ಪ್ರಕಾರ ಹಸೀನಾ ಮತ್ತು ಇತರ 24 ಜನರ ವಿರುದ್ಧ ನೆದರ್ಲ್ಯಾಂಡ್ಸ್‌ನ ಹೇಗ್‌ನಲ್ಲಿರುವ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ನಲ್ಲಿ (ಐಸಿಸಿ) ಮಾನವ ಹಕ್ಕುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ದೂರು ದಾಖಲಿಸಲಾಗಿದೆ. ಹಸೀನಾ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಮರಳಿ ಕಳುಹಿಸಿ ಎಂದು ಬಾಂಗ್ಲಾ ಹೇಳಿದೆ.
ಚಿಕ್ಕಮಗಳೂರು: ಯೋಗ ಕಲಿಯಲು ಬಂದ ವಿದೇಶಿ ವೈದ್ಯೆಯ ಮೇಲೆ ಯೋಗಗುರು ಅತ್ಯಾಚಾರ!
ಹಿಂದೂಗಳು ಸೇರಿದಂತೆ 49 ಅಲ್ಪಸಂಖ್ಯಾತ ಶಿಕ್ಷಕರಿಂದ ಬಲವಂತದ ರಾಜೀನಾಮೆ:
ಶೇಖ್ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ, ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿದಂತೆ ಸುಮಾರು 49 ಅಲ್ಪಸಂಖ್ಯಾತ ಶಿಕ್ಷಕರಿಂದ ಬಲವಂತವಾಗಿ ರಾಜೀನಾಮೆ ತೆಗೆದುಕೊಳ್ಳಲಾಗಿದೆ ಬಾಂಗ್ಲಾದ ಅಲ್ಪಸಂಖ್ಯಾತ ಸಂಘಟನೆಗಳು ಆರೋಪಿಸಿವೆ. ಬಾಂಗ್ಲಾದಲ್ಲಿನ ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿ ಸಂಘಟನೆಯಾಗಿರುವ ಛತ್ರ ಒಕಿಯಾ ಪರಿಷತ್ ಈ ಕುರಿತು ಆರೋಪ ಮಾಡಿದೆ. ‘ವಿದ್ಯಾರ್ಥಿಗಳ ಹಿಂಸಾಚಾರದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಶಿಕ್ಷಕರ ಮೇಲೆ ದೈಹಿಕವಾಗಿಯೂ ಹಲ್ಲೆ ಮಾಡಲಾಗಿದೆ’ ಎಂದು ಹೇಳಿದೆ. ಹಸೀನಾ ರಾಜೀನಾಮೆ ಬಳಿಕ ಹಿಂದೂ ದೇಗುಲ, ಹಿಂದೂಗಳು, ಹಿಂದೂಗಳ ಮನೆ ಮೇಲೆ ದಾಳಿ ನಡೆಸಲಾಗಿತ್ತು.
ಉಗ್ರಸಂಘಟನೆ ಮೇಲೆ ಹಸೀನಾ ಹೇರಿದ್ದ ನಿಷೇಧ ತೆರವು
ಉಗ್ರಸಂಘಟನೆ ಎಂಬ ಪಟ್ಟಕಟ್ಟಿ ಹಸೀನಾ ಸರ್ಕಾರದಿಂದ ನಿಷೇಧಕ್ಕೊಳಗಾಗಿದ್ದ ಜಮಾತ್ ಎ ಇಸ್ಲಾಮಿ ಸಂಘಟನೆ ಮೇಲಿನ ನಿಷೇಧವನ್ನು ಬಾಂಗ್ಲಾದೇಶದ ಮುಹಮ್ಮದ್ ಯೂನಸ್ ಅವರ ಮಧ್ಯಂತರ ತೆರವುಗೊಳಿಸಿದೆ. ಮಾತ್ ಮೇಲಿದ್ದ ಭಯೋತ್ಪಾನೆ ಕೃತ್ಯ ಆರೋಪಗಳಿಗೆ ಯಾವುದೇ ಸಾಕ್ಷಿಗಳು ಇಲ್ಲದ ಕಾರಣ ತೆರವು ಮಾಡಲಾಗಿದೆ ಎಂದು ಬಾಂಗ್ಲಾದೇಶದ ಗೃಹ ಇಲಾಖೆ ಹೇಳಿದೆ. ಆ.1ರಂದು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷ ಭಯೋತ್ಪಾದನೆ ಮತ್ತು ಉಗ್ರವಾದ ಆರೋಪ ಹೊರಿಸಿ ಜಮಾತ್ ಸಂಘಟನೆಯನ್ನು ನಿಷೇಧಗೊಳಿಸಿತ್ತು.