ಬೆಂಗಳೂರಿನ ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಗಳ ವಿಸ್ತರಣೆ ಗಾಗಿ ರಾಜ್ಯ ಸರ್ಕಾರ ವಶಪಡಿಸಿಕೊಂಡ 15 ಎಕರೆ 75 ಸೆಂಟ್ ಜಾಗಕ್ಕೆ ಈ ಟಿಡಿಆರ್ ಹಣ ನೀಡಬೇಕು ಎಂದು ತೀರ್ಪು ನೀಡಿದೆ.  

ನವದೆಹಲಿ (ಮೇ.23): ರಾಜ್ಯ ಸರ್ಕಾರಕ್ಕೆ ಬಿಗ್ ಶಾಕ್ ನೀಡಿರುವ ಸುಪ್ರೀಂಕೋರ್ಟ್, ಬೆಂಗಳೂರು ಅರಮನೆ ಮೈದಾನದ ಭೂಮಿಯ ಬಳಕೆಗೆ ಸಂಬಂಧಿಸಿದಂತೆ 3,400 ಕೋಟಿ ರು.ಗಳ ಟಿಡಿಆರ್ ಹಣವನ್ನು ಮೈಸೂರು ರಾಜ ಮನೆತನಕ್ಕೆ ನೀಡಲು ಆದೇಶಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಅರವಿಂದ ಕುಮಾರ್‌ ನೇತೃತ್ವದ ದ್ವಿಸದಸ್ಯ ಪೀಠ, ಈ ಆದೇಶ ಹೊರಡಿಸಿದೆ. 

ಬೆಂಗಳೂರಿನ ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಗಳ ವಿಸ್ತರಣೆ ಗಾಗಿ ರಾಜ್ಯ ಸರ್ಕಾರ ವಶಪಡಿಸಿಕೊಂಡ 15 ಎಕರೆ 75 ಸೆಂಟ್ ಜಾಗಕ್ಕೆ ಈ ಟಿಡಿಆರ್ ಹಣ ನೀಡಬೇಕು ಎಂದು ತೀರ್ಪು ನೀಡಿದೆ.  ಇದರಿಂದಾಗಿ ಬೆಂಗಳೂರು ಅರಮನೆ ಮೈದಾನದ ಭೂಮಿಯ ವಿಷಯವಾಗಿ ರಾಜ್ಯ ಸರ್ಕಾರ ಮತ್ತು ಮೈಸೂರು ರಾಜಮನೆತನದ ನಡುವೆ ನಡೆಯುತ್ತಿರುವ ಕಾನೂನು ಸಮರದಲ್ಲಿ ಮೈಸೂರು ರಾಜವಂಶಸ್ಥರು ಮೇಲುಗೈ ಸಾಧಿಸಿದ್ದು, ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ. 3,400 ಕೋಟಿ ಟಿಡಿಆರ್ (ವರ್ಗಾವಣೆ ಮಾಡಬಹು ದಾದ ಅಭಿವೃದ್ಧಿ ಹಕ್ಕುನ್ನು ರಾಜ್ಯ ಸರ್ಕಾರ ಠೇವಣಿ ಇಟ್ಟಿತ್ತು. 

ಸುಪ್ರೀಂ ಕೋರ್ಟ್‌ನ ರಿಜಿಸ್ಟಾರ್‌ನಲ್ಲಿ ಟಿಡಿಆರ್ ಇಡಲಾಗಿತ್ತು. ಅದನ್ನು ರಾಜವಂಶಸ್ಥರಿಗೆ ಹಸ್ತಾಂತರಿಸಬಾರದು ಎಂದು ಮಧ್ಯಂ ತರ ಅರ್ಜಿಯಲ್ಲಿ ಮನವಿ ಮಾಡಿತ್ತು. ರಾಜವಂಶಸ್ಥರ ಪರ ವಕೀಲರು ಇದನ್ನು ವಿರೋಧಿಸಿದ್ದರು. ಈ ಪ್ರಕರಣದಲ್ಲಿ ಕರ್ನಾಟಕ ಸರ್ಕಾರ ನ್ಯಾಯಾಂಗ ನಿಂದನೆ ಎದುರಿಸುತ್ತಿತ್ತು. ಈಗ ಈ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತೀರ್ಪು ರಾಜವಂಶಸ್ಥರ ಪರ ಹೊರಬಿದ್ದಿದೆ. 1993ರಲ್ಲಿ ದಾಖಲಿಸಲಾಗಿರುವ ಈ ಪ್ರಕರಣದ ಮುಖ್ಯ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಇನ್ನೂ ಬಾಕಿ ಇದೆ.

ಬೆಂಗ್ಳೂರಿಗೆ 4500 ಎಲೆಕ್ಟ್ರಿಕ್ ಬಸ್‌: ಕೇಂದ್ರ ಸಚಿವ ಎಚ್‌ಡಿಕೆ ಬಂಪರ್!

ಟಿಡಿಆರ್: ಇದು ಹಣ ಅಲ್ಲ, ಸರ್ಟಿಫಿಕೆಟ್ ಮಾರಿದವರಿಗೆ ಸಿಗುತ್ತೆ ಹಣ ಟಿಡಿಆರ್ ಎಂದರೆ ವರ್ಗಾಹಿಸಬಹುದಾದ ಅಭಿವೃದ್ಧಿ ಹಕ್ಕು. ಭೂಸ್ವಾಧೀನ ವೇಳೆ ನಗದು ಬದಲು ನೀಡುವ ಪ್ರಮಾಣ ಪತ್ರ ರೂಪದ ಪರ್ಯಾಯ ಪರಿಹಾರ. ಈ ಪ್ರಮಾಣ ಪತ್ರವನ್ನು ಮಾರ್ಗಸೂಚಿ ದರಕ್ಕೆ ಮಾರಬಹುದು. ಖರೀದಿಸಿದವರು ತಮ್ಮ ಕಟ್ಟಡವನ್ನು ನಿಗದಿತ ಎತ್ತರಕ್ಕಿಂತ ಹೆಚ್ಚಿನ ಎತ್ತರಕ್ಕೆ ಏರಿಕೆ ಅಧಿಕಾರ ಪಡೆಯುತ್ತಾರೆ.