ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ಮುಸ್ಲಿಮರಿಂದ ಪ್ರತಿಭಟನೆಯಲ್ಲಿ ಹಿಂಸೆ ದೇಶಾದ್ಯಂತ ಹಿಂಸೆ ಹಾಗೂ ಸಂಘರ್ಷ, ಹಿಂದೂ ಸಂಘಟನೆಗಳ ಆಕ್ರೋಶ ಮುಸ್ಲಿಮ್ ಮೂಲಭೂತವಾದಿಗಳ ಪ್ರತಿಭಟನೆ ವಿರೋಧಿಸಿ ಬಜರಂಗದಳ ಪ್ರತಿಭಟನೆ
ನವದೆಹಲಿ(ಜೂ.14): ಬಿಜೆಪಿ ನಾಯಕಿ ನೂಪುರ್ ಶರ್ಮಾ ಹೇಳಿಕೆ ಖಂಡಿಸಿ, ಬಂಧನಕ್ಕೆ ಆಗ್ರಹಿಸಿ ಮುಸ್ಲಿಮರು ದೇಶಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಸಂಘರ್ಷಕ್ಕೆ ಕಾರಣವಾಗಿತ್ತು.ಕಲ್ಲು ತೂರಾಟ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ, ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು. ಇಸ್ಲಾಮಿಕ್ ಜಿಹಾದಿ ಮೂಲಭೂತವಾದಿಗಳಿಂದ ದೇಶದಲ್ಲೇ ಉಗ್ರಗಾಮಿ ಘಟನೆಗಳು ಹೆಚ್ಚಾಗುತ್ತಿರುವುದನ್ನು ಖಂಡಿಸಿ ಇದೀಗ ಬಜರಂಗದಳ ಜೂನ್ 16ಕ್ಕೆ ದೇಶವ್ಯಾಪಿ ಪ್ರತಿಭಟನೆಗೆ ಕರೆನೀಡಿದೆ.
ದೇಶದಲ್ಲಿ ಇಸ್ಲಾಮಿಕ್ ಜಿಹಾದಿಗಳಿಂದ ಆತಂಕದ ವಾತಾವರಣ ನಿರ್ಮಾಣವಾಗುತ್ತಿದೆ. ಜಗತ್ತಿಗೆ ಕೆಟ್ಟ ಸಂದೇಶವನ್ನು ಭಾರತ ನೀಡುವಂತಾಗಿದೆ.ಮುಸ್ಲಿಮರು ತಮ್ಮ ಆಕ್ರೋಶವನ್ನು ತೀರಿಸಲು ಪ್ರತಿಭಟನೆಯಲ್ಲಿ ಕಲ್ಲು ತೂರಾಟ ಸಾಮಾನ್ಯವಾಗಿದೆ. ಇತ್ತ ಸತ್ಯವನ್ನೇ ಹೇಳಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಬಜರಂಗದಳ ಪ್ರತಿಭಟನೆ ನಡೆಸಲಿದೆ ಎಂದು ವಿಶ್ವಹಿಂದೂ ಪರಿಷತ್ ಹೇಳಿದೆ.
ನೂಪುರ್ ಶರ್ಮ ವಿರುದ್ಧ ದೇಶಾದ್ಯಂತ ಭಾರೀ ಪ್ರತಿಭಟನೆ, ಕರ್ನಾಟಕದಲ್ಲೂ ಹಿಂಸಾಚಾರ
ಜೂನ 16ಕ್ಕೆ ದೇಶಾದ್ಯಂತ ಬಜರಂಗದಳ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಲಿದ್ದಾರೆ. ಪ್ರತಿಭಟನ ವೇಳೆ ಹನುಮಾನ್ ಚಾಲೀಸಾ ಪಠಿಸಲಿದ್ದಾರೆ. ಇಷ್ಟೇ ಅಲ್ಲ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ.
ದೇಶದೆಲ್ಲೆಡೆ ನೂಪರ್ ಶರ್ಮಾ ವಿರುದ್ಧ ಪ್ರತಿಭಟನೆ ಇನ್ನೂ ಮುಗಿದಿಲ್ಲ. ಸದ್ಯ ಹಿಂಸಾರೂಪಕ ಪ್ರತಿಭಟನೆ ಕೈಬಿಡಲು ಮುಸ್ಲಿಮ್ ಸಂಘಟನೆಗಳು ಸೂಚಿಸಿದೆ. ಹೀಗಾಗಿ ಆಯಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಸಾಂಕೇತಿಕ ಪ್ರತಿಭಟನೆಗೆ ಮುಸ್ಲಿಮ್ ಸಂಘಟನೆಗಳು ಮುಂದಾಗಿದೆ.
ನೂಪುರ್ ಶರ್ಮಾ ವಿರುದ್ಧ ಕ್ರಮಕ್ಕೆ ಆಗ್ರಹ
ಪ್ರವಾದಿ ಹಜರತ್ ಮಹಮ್ಮದ್ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ನೂಪುರ್ ಶರ್ಮಾ ಹಾಗೂ ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ನವೀನ್ ಜಿಂದಾಲ್ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಅಂಜುಮನ್ ಖಿದ್ಮಿತೆ ಮುಸ್ಲಿಮೀನ್ ಸಂಸ್ಥೆ ವತಿಯಿಂದ ಸೋಮವಾರ ಎಸ್ಪಿ ಮತ್ತು ಡಿಸಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ನೂಪುರ್ ಶರ್ಮಾ ಪ್ರತಿಕೃತಿ ನಡುರಸ್ತೆಯಲ್ಲೇ ನೇತು ಹಾಕಿದ ಕಿಡಿಗೇಡಿಗಳು: ಹಿಂದೂಪರ ಸಂಘಟನೆಗಳ ಆಕ್ರೋಶ
ದೇಶದ ಶಾಂತಿ ಕದಡುವ ಉದ್ದೇಶದಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಭಾರತದ ಮುಸ್ಲಿಮರು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಮತ್ತು ಬಡವರು ದೀನದಲಿತರಿಗಾಗಿ ಮೀಸಲಿಟ್ಟಪುಣ್ಯ ಪ್ರವಾದಿ ಹಜರತ್ ಮಹ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ, ಮುಸ್ಲಿಮರ ಭಾವನೆಗೆ ನೋವುಂಟು ಮಾಡುವ ಹಾಗೂ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ದೇಶದಲ್ಲಿ ಶಾಂತಿ, ಸೌಹಾರ್ದಕ್ಕೆ ಧಕ್ಕೆ ತರುವ ಇಂಥವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು. ಅಲ್ಲದೆ ದೇಶದಲ್ಲಿ ಇಂಥ ಹೇಳಿಕೆಯನ್ನು ನೀಡಿ, ಧಾರ್ಮಿಕ ಭಾವನೆಗೆ ಧಕ್ಕೆ ತರುವ ವ್ಯಕ್ತಿ, ಶಕ್ತಿ ಮತ್ತು ಪಕ್ಷದ ವಿರುದ್ಧ ಕಠಿಣ ಕಾನೂನು ಜಾರಿ ಮಾಡಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಸಂಸ್ಥೆಯ ಅಧ್ಯಕ್ಷರಾದ ಹುಸೇನ್ ಪಿರಾಂ ಮುಜಾವರ್, ಸಾದಿಕ್ ಹುಸೇನ್ ಅತ್ತಾರ, ಜಿಲಾನ್ ಮೈ ಲೈಕ್, ಸಲಿಂ ಮಂಡಲಗಿರಿ, ಸಲಿಂ ಗೊಂಡಬಾಳ, ಮುಫ್ತಿ ನಜೀರ್ ಅಹ್ಮದ್‌ಸಾಬ್, ಬಾಷುಸಾಬ್, ಖತೀಬ್ ಹುಸೇನ್‌ಪೀರಾ, ಮುಜಾವರ್ ಚಿಕನ್, ಕಾಟಾನ್ ಪಾಷಾ, ಮಾನ್ವಿಪಾಷಾ, ಅಮ್ಜದ್ ಪಟೇಲ್, ಕೆ.ಎಂ. ಸಯ್ಯದ್, ಇಕ್ಬಾಲ್ ಸಿದ್ದಕಿ, ಅಕ್ಬರ್ ಪಲ್ಟನ್, ಅಜೀಂ ಅತ್ತಾರ್, ಸೈಯದ್ ನಾಸೀರ್, ಸಲೀಂ ಅಳವಂಡಿ, ಹಾಮೀದ್ ಸಿದ್ದಕಿ ಮೊದಲಾದವರು ಇದ್ದರು.
