Asianet Suvarna News Asianet Suvarna News

ಮಗನನ್ನು ಹೆದರಿಸಲು ಸೇತುವೆಗೆ ನೇತಾಡಿಸಿದ ಅಪ್ಪ, ಕೈತಪ್ಪಿ ನದಿಗೆ ಬಿದ್ದ ಪುತ್ರ ಸಾವು!

* ತಂದೆಯ ತಪ್ಪಿಗೆ ಬಲಿಯಾದ ಮಗ

* ಮಗನನ್ನು ಹೆಸರಿಸಲು ಹೋಗಿ ಶಾಶ್ವತವಾಗಿ ಆತನನ್ನು ಕಳೆದುಕೊಂಡ

* ಕೈತಪ್ಪಿ ನದಿಗೆ ಬಬಿದ್ದ ಮಗ

Bagan river incident father Lost his son while threatening him pod
Author
Bangalore, First Published Mar 4, 2022, 9:47 AM IST | Last Updated Mar 4, 2022, 10:00 AM IST

ಲಕ್ನೋ(ಮಾ.04): ಮಗನನ್ನು ಹೆದರಿಸುವ ಸಲಲುವಾಗಿ ಮಗನನ್ನು ಸೇತುವೆಗೆ ನೇತಾಡಿಸಿದ ತಂದೆ ಈಗ ಶಾಶ್ವತವಾಗಿ ಆತನನ್ನು ಕಳೆದುಕೊಂಡಿದ್ದಾರೆ. ಹೌದು ಬಾಗನ್ ನದಿಯ ಸೇತುವೆಗೆ ಮಗನನ್ನು ನೇತಾಡಿಸಿದ್ದಾರೆ, ದುರಾದೃಷ್ಟವಶಾತ್ ಕೈ ತಪ್ಪಿ ಮಗ ನದಿಗೆ ಬಿದ್ದು, ಮುಳುಗಿ ಸಾವನ್ನಪ್ಪಿದ್ದಾನೆ. ಇಷ್ಟಾದರೂ ತಂದೆ ಮೃತದೇಹವನ್ನು ಮನೆಗೆ ಕೊಂಡೊಯ್ದು ಪೊಲೀಸರಿಗೆ ತಿಳಿಸದೆ ಗ್ರಾಮದಲ್ಲಿ ಹೂತು ಹಾಕಿದ್ದಾರೆ. ಗುರುವಾರ ಈ ಮಾಹಿತಿ ವೈರಲ್ ಆದ ನಂತರ ಪೊಲೀಸರು ವಿಷಯ ತಿಳಿದು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಮಹಾಶಿವರಾತ್ರಿಯ ದಿನದಂದು, ಮಧ್ಯಪ್ರದೇಶದ ಪನ್ನಾದ ಧರಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಮನಗರದಲ್ಲಿ ವಾಸಿಸುವ ವ್ಯಕ್ತಿಯ 12 ವರ್ಷದ ಮಗ, ಮನೆ ಮಂದಿಗೆ ತಿಳಿಸದೆ ನೀಲಕಂಠ ದೇವರ ದರ್ಶನ ಪಡೆಯಲು ಹಾಗೂ ಕಲಿಂಜರ್‌ನಲ್ಲಿನ ಜಾತ್ರೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ಬಾಲಕನ ತಂದೆ ಬುಧವಾರ ಆತನನ್ನು ಹುಡುಕಲು ಅಲ್ಲಿಗೆ ಬಂದಿದ್ದಾರೆ. ಜಾತ್ರೆಯಲ್ಲಿ ತಿರುಗುತ್ತಿದ್ದ ಮಗನನ್ನು ಹಿಡಿದು ತಂದೆ ಥಳಿಸಿದ್ದಾರೆ. ಸಂಜೆ ನಾಲ್ಕು ಗಂಟೆ ಸುಮಾರಿಗೆ ಆತನನ್ನು ತನ್ನೊಂದಿಗೆ ಸೈಕಲ್‌ನಲ್ಲಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಯುಪಿ-ಎಂಪಿ ಗಡಿಯಲ್ಲಿ ಹಾದು ಹೋಗುತ್ತಿದ್ದಾಗ ಬಾಗೇನ್ ನದಿ ಸೇತುವೆಯ ಮೇಲೆ ಸೈಕಲ್ ನಿಲ್ಲಿಸಿ ಮಗನನ್ನು ಹೆದರಿಸಲು ಕೈ ಹಿಡಿದು ನದಿ ಸೇತುವೆಯಿಂದ ಎಸೆಯುವುದಾಗಿ ಬೆದರಿಸಿ ನೇತಾಡಿಸಿದ್ದಾರೆ. ಈ ಭರಾಟೆಯಲ್ಲಿ ಮಗ ಕೈತಪ್ಪಿ ನದಿಗೆ ಬಿದ್ದಿದ್ದಾನೆ. 

ಮಕ್ಕಳು ಆಟವಾಡುತ್ತಿದ್ದ ವೇಳೆ ಜವರಾಯನಂತೆ ಬಂದ ಕಾರು, ಮೂವರ ದುರ್ಮರಣ

ಇನ್ನು ಇಲ್ಲಿನ ಸದ್ದುಗದ್ದಲಕ್ಕೆ ದಾರಿಹೋಕರು ಹಾಗೂ ಸುತ್ತಮುತ್ತಲಿನ ಜನ ಜಮಾಯಿಸಿದ್ದಾರೆ. ಕೂಡಲೇ ನದಿಗಿಳಿದು ಬಾಲಕನನ್ನು ಮೇಲೆ ತರಲಾಗಿದೆ, ಆದರೆ ಅಷ್ಟರಲ್ಲಾಗಲೇ ಆತ ಮುಳುಗಿ ಸಾವನ್ನಪ್ಪಿದ್ದ. ತಂದೆ ಮಗನ ಶವದೊಂದಿಗೆ ಊರಿಗೆ ಬಂದು ಊರ ಹೊರಗೆ ಗುಮಡಿ ತೋಡಿ ತಾನೇ ಸಮಾಧಿ ಮಾಡಿದ್ದಾರೆ. ಗುರುವಾರದಂದು ಗ್ರಾಮಸ್ಥರಿಗೆ ಸಂಪೂರ್ಣ ವಿಷಯ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಂದೆ ಮನೆಯಿಂದ ತಲೆಮರೆಸಿಕೊಂಡಿದ್ದಾರೆ. 

ಕಳಿಂಜರ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಸ್‌ಪಿ ಪಟೇಲ್ ಪ್ರಕಾರ, ಬಾಗೇನ್ ನದಿಯಲ್ಲಿ ಮುಳುಗಿ ಹದಿಹರೆಯದವರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಬಂದಿದೆ. ಈ ಸಂಬಂಧ ಇದುವರೆಗೆ ಯಾವುದೇ ದೂರು ಬಂದಿಲ್ಲ. ತನಿಖೆ ನಡೆಸಲಾಗುತ್ತಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಘಟನೆಯ ಮಾಹಿತಿಯ ಮೇರೆಗೆ ಪನ್ನಾದ ಧರಂಪುರ ಪೊಲೀಸ್ ಠಾಣೆ ಮತ್ತು ಬಂಡಾದ ಕಲಿಂಜರ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಎರಡೂ ಪೊಲೀಸ್ ಠಾಣೆಗಳಲ್ಲಿ ಜಾಗಕ್ಕೆ ಸಂಬಂಧಿಸಿದಂತೆ ಬಹಳ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ. 

Narmada Jayanti: ಪರಶಿವನ ಬೆವರಾಗಿ ನದಿ ನರ್ಮದೆ ಹುಟ್ಟಿದ ದಿನವಿಂದು, ಏನು ಆಕೆಯ ಕತೆ?

ಚಂಬಲ್ ನದಿಗೆ ಬಿದ್ದ ಕಾರು, ವರ ಸೇರಿ 9 ಮಂದಿ ಸಾವು!

ರಾಜಸ್ಥಾನದ ಕೋಟಾದಲ್ಲಿ ಬಹುದೊಡ್ಡ ಅಪಘಾತ ಸಂಭವಿಸಿದೆ, ಮದುವೆಗೆ ಇನ್ನೇನು ಕೆಲ ಸಮಯ ಇದೆ ಎನ್ನುವಷ್ಟರಲ್ಲಿ ವರ ಸೇರಿದಂತೆ 9 ಜನರು ಸಾವನ್ನಪ್ಪಿದ್ದಾರೆ. ಇವರೆಲ್ಲರೂ ರಾಜಸ್ಥಾನದಿಂದ ಮಧ್ಯಪ್ರದೇಶಕ್ಕೆ ಮದುವೆಗೆ ಹೋಗುತ್ತಿದ್ದಾಗ ಕೋಟಾದ ನಯಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೆರವಣಿಗೆಯಲ್ಲಿದ್ದವರ ಕಾರು ಚಂಬಲ್ ನದಿಗೆ ಡಿಕ್ಕಿ ಹೊಡೆದಿದೆ.

ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಪರಿಣಾಮ ಕಾರು ಅಪಘಾತ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಲ್ಲಾ ಕಾರು ಸವಾರರು ಮದುವೆಗೆ ಉಜ್ಜಯಿನಿಗೆ ಹೋಗುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ಹೇಳಿದರು.

ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯ ಚೌತ್ ಕಾ ಬರ್ವಾರಾ ಗ್ರಾಮದಿಂದ ಮಧ್ಯಪ್ರದೇಶದ ಉಜ್ಜಯಿನಿಗೆ ಮೆರವಣಿಗೆ ಸಾಗುತ್ತಿದೆ ಎಂದು ಕೋಟಾ ಎಸ್ಪಿ ತಿಳಿಸಿದ್ದಾರೆ. ನಿದ್ರೆಯ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ’ ಎಂದು ಹೇಳಿದರು. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರದಲ್ಲಿ ಇರಿಸಲಾಗಿದೆ ಎಂದು ಹೇಳಿದರು.

ಘಟನೆ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ''ಚಂಬಲ್ ನದಿಯಲ್ಲಿ ಕಾರು ಬಿದ್ದ ಪರಿಣಾಮ ವರ ಸೇರಿದಂತೆ ಒಂಭತ್ತು ಮಂದಿ ಮದುವೆ ಮೆರವಣಿಗೆಯಲ್ಲಿ ಸಾವನ್ನಪ್ಪಿರುವುದು ಅತ್ಯಂತ ದುಃಖಕರ ಮತ್ತು ದುರದೃಷ್ಟಕರ. ಜಿಲ್ಲಾಧಿಕಾರಿ ಜತೆ ಮಾತನಾಡಿ ಪರಿಸ್ಥಿತಿ ಅವಲೋಕಿಸಿದರು. ಸಂತ್ರಸ್ತರ ಕುಟುಂಬಗಳೊಂದಿಗೆ ನನ್ನ ಆಳವಾದ ಸಹಾನುಭೂತಿ ಇದೆ. ದೇವರು ಅವರಿಗೆ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ. ಅಗಲಿದ ಆತ್ಮಗಳಿಗೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ" ಎಂದಿದ್ದಾರೆ. 

Latest Videos
Follow Us:
Download App:
  • android
  • ios