ನರ್ಸರಿ ಶಾಲೆಯಲ್ಲಿ ಪುಟ್ಟ ಕಂದಮ್ಮಗಳ ಬಲತ್ಕಾರಗೈದ ಆರೋಪಿ ಎನ್‌ಕೌಂಟರ್ ಮಾಡಿದ ಪೊಲೀಸ್!

ಬದ್ಲಾಪುರದ ನರ್ಸಲಿ ಶಾಲೆಯಲ್ಲಿ 4 ವರ್ಷದ ಇಬ್ಬರು ಪುಟ್ಟ ಕಂದಮ್ಮಗಳ ಬಲತ್ಕಾರ ಗೈದ ಆರೋಪಿಯನ್ನು ಮುಂಬೈ ಪೊಲೀಸರು ಗುಂಡಿಕ್ಕಿ ಹತ್ಯೆಗೈದಿದ್ದಾರೆ.  

Badlapur sexual assault prime accuse shot dead in gunfire with thane police ckm

ಮುಂಬೈ(ಸೆ.23) ಬದ್ಲಾಪುರದಲ್ಲಿ ನಡೆದ ಬಲಾತ್ಕಾರ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾದ ಘಟನೆ. ಆಗಸ್ಟ್ 17 ರಂದು ಮಹಾರಾಷ್ಟ್ರದ ಪ್ರತಿಷ್ಠಿತ ನರ್ಸರಿ ಶಾಲೆಯಲ್ಲಿ 4 ವರ್ಷದ ಇಬ್ಬರು ಹೆಣ್ಣುಮಕ್ಕಳ ಮೇಲೆ ಶಾಲಾ ಸಿಬ್ಬಂದಿ ಬಲತ್ಕಾರ ಮಾಡಿದ್ದ. ಶಾಲಾ ಶೌಚಾಲಯದಲ್ಲಿ ಈ ಘಟನೆ ನಡೆದಿತ್ತು. ಮಾಹಿತಿ ಹೊರಬೀಳುತ್ತಿದ್ದಂತೆ ಪೋಷಕರು ಸೇರಿದಂತೆ ಸ್ಥಳೀಯರು ಶಾಲೆಗೆ ಮುತ್ತಿಗೆ ಹಾಕಿದ್ದರು. ಘಟನೆ ಬೆನ್ನಲ್ಲೇ ಪೊಲೀಸರು ಆರೋಪಿ ಅಕ್ಷಯ್ ಶಿಂಧೆಯನ್ನು ಬಂಧಿಸಿದ್ದರು. ಇದೀಗ ಈ ಆರೋಪಿಗೆ ಥಾಣೆ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 

ಈ ಪ್ರಕರಣದ ಗಂಭೀರತೆ ಹಾಗೂ ಆರೋಪಿಯನ್ನು ಪರಿಗಣಿಸಿದ ಥಾಣೆ ಪೊಲೀಸರು ಬೇರೆ ಜೈಲಿಗೆ ವರ್ಗಾವಣೆ ಮಾಡಲು ಪೊಲೀಸ್ ವಾಹನದಲ್ಲಿ ಕರೆದೊಯ್ಯಲಾಗಿತ್ತು. ಈ ವೇಳೆ ಆರೋಪಿ ಅಕ್ಷಯ್ ಶಿಂಧೆ ಪೊಲೀಸರ ರಿವಾಲ್ವರ್ ವಶಪಡಿಸಿಕೊಂಡು ಗುಂಡು ಹಾರಿಸಿದ್ದಾನೆ. ಮೂರು ಸುತ್ತಿನ ಗುಂಡಿನಲ್ಲಿ ಒಂದು ಗುಂಡು ಪೊಲೀಸ್ ಅಧಿಕಾರಿಗೆ ತಾಗಿ ಗಾಯಗೊಂಡಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಗಾಯಗೊಂಡ ಆರೋಪಿ ಬಳಿಕ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾನೆ.

 ನರ್ಸರಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಭುಗಿಲೆದ್ದ ಹಿಂಸಾಚಾರ, ಥಾಣೆ ಸಂಘರ್ಷದಲ್ಲಿ ಹಲವರಿಗೆ ಗಾಯ!

ಬದ್ಲಾಪುರ್ ಬಲತ್ಕಾರ ಆರೋಪಿ ಹತ್ಯೆ ಸುದ್ದಿಗೆ ಹಲವರು ಸಂಭ್ರಮಪಟ್ಟಿದ್ದಾರೆ. ಬಲಾತ್ಕಾರ ಆರೋಪಿಗೆ ಇದುವೇ ಶಿಕ್ಷೆಯಾಗಬೇಕು ಎಂದು ಹಲವರು ಹೇಳಿದ್ದಾರೆ. ಈ ಘಟನೆ ಮಹಾರಾಷ್ಟ್ರ ಸರ್ಕಾರಕ್ಕೂ ತೀವ್ರ ಹಿನ್ನಡೆ ತಂದಿತ್ತು. 

ಘಟನೆ ಕುರಿತು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ. ಆರೋಪಿ ರಿವಾಲ್ವರ್ ಕಸಿದುಕೊಂಡು ಏಕಾಏಕಿ ದಾಳಿ ನಡೆಸಿದ್ದಾನೆ. ಹೀಗಾಗಿ ಓರ್ವ ಪೊಲೀಸ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಿವಾಲ್ವರ್‌ನಿಂದ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ನಾಲ್ಕನೇ ಗುಂಡು ಹಾರಿಸುವ ವೇಳೆ ಪೊಲೀಸರು ಪ್ರತಿ ದಾಳಿ ನಡೆಸಿದ್ದಾರೆ. ಹೀಗಾಗಿ ಪೊಲೀಸರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕಮಿಷನರ್ ಹೇಳಿದ್ದಾರೆ. 

4 ವರ್ಷದ ಪುಟ್ಟ ಮಕ್ಕಳನ್ನು ಶಾಲಾ ಗುಮಾಸ್ತಾ ಬಳಸಿಕೊಂಡಿದ್ದ. ಇದೇ ರೀತಿ ಹಲವು ಬಾರಿ ಹಲವು ಮಕ್ಕಳನ್ನು ಈತ ಬಳಸಿಕೊಂಡಿದ್ದಾನೆ ಅನ್ನೋ ತನಿಖೆಯಿಂದ ಬಹಿರಂಗವಾಗಿತ್ತು. ಮಕ್ಕಳು ತೀವ್ರ ನೋವಿನಿಂದ ಪೋಷಕರ ಬಳಿ ಹೇಳಿಕೊಂಡಿದ್ದಾರೆ. ಪೋಷಕರು, ಕುಟುಂಬಸ್ಥರು ಶಾಲೆಗೆ ಆಗಮಿಸುತ್ತಿದ್ದಂತೆ ಈ ಮಾಹಿತಿ ಸ್ಥಳೀಯರಿಗೆ ಹಬ್ಬಿದೆ. ಶಾಲೆಗೆ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿ ಮುತ್ತಿಗೆ ಹಾಕಿದ್ದರು. ಮಹಾರಾಷ್ಟ್ರದಲ್ಲಿ ಭಾರಿ ಪ್ರತಿಭಟನೆ ನಡೆದಿತ್ತು. ವಿಪಕ್ಷಗಳು ಮಹಾರಾಷ್ಟ್ರ ಬಂದ್‌ಗೆ ಕರೆ ಕೊಟ್ಟಿತ್ತು. 

ಘಟನೆ ಬಳಿಕ ಹಲವು ಲೋಪಗಳು ಕಂಡು ಬಂದಿತ್ತು. ದೂರು ದಾಖಲಿಸಿದ ಬಳಿಕವೂ ಶಾಲಾ ಆಡಳಿತ ಮಂಡಳಿ ಕನಿಷ್ಠ ಸಂತ್ರಸ್ತ ಪೋಷಕರ ಭೇಟಿಯಾಗಿರಲಿಲ್ಲ. ಇಷ್ಟೇ ಅಲ್ಲ ಪ್ರಕರಣ ಮುಚ್ಚಿಹಾಕಲು ಭಾರಿ ಪ್ರಯತ್ನ ನಡೆಸಿತ್ತು. ಮಕ್ಕಳಿಗೆ 12 ಗಂಟೆ ಚಿಕಿತ್ಸೆ ನೀಡಲು ಸ್ಥಳೀಯ ಆಸ್ಪತ್ರೆ ವಿಳಂಬ ಮಾಡಿತ್ತು. ಪ್ರತಿಷ್ಠಿತ ಶಾಲೆ ಘಟನೆಯನ್ನು ಮುಚ್ಚಿಹಾಕಲು ನಡೆಸಿದ ಪ್ರಯತ್ನಗಳು ಸ್ಥಳೀಯರ ಆಕ್ರೋಶ ಮತ್ತಷ್ಟು ಹೆಚ್ಚಿಸಿತ್ತು. ಹೀಗಾಗಿ ಶಾಲೆಗೆ ಮುತ್ತಿಗೆ ಹಾಕಿ ದಾಂಧಲೆ ನಡೆಸಲಾಗಿತ್ತು.

ನರ್ಸರಿ ಮಕ್ಕಳಿಗೆ ಲೈಂಗಿಕ ದೌರ್ಜನ್ಯ: ಥಾಣೆಯಲ್ಲಿ ಶಾಲಾ ಕಟ್ಟಡ ಧ್ವಂಸ, ರೈಲು ತಡೆ
 

Latest Videos
Follow Us:
Download App:
  • android
  • ios