Election Results ಉತ್ತರ ಪ್ರದೇಶದಲ್ಲಿ ಎಣ್ಣೆ ಅಂಗಡಿಗಳು ಕ್ಲೋಸ್!

ಇಡೀ ಉತ್ತರ ಪ್ರದೇಶದಲ್ಲಿ ಮದ್ಯದಂಗಡಿಗಳು ಕ್ಲೋಸ್

ಇಡೀ ದಿನ ಮದ್ಯದಂಗಡಿಯ ಮೇಲೆ ಪೊಲೀಸರ ನಿಗಾ

ಚುನಾವಣಾ ಫಲಿತಾಂಶದ ಹಿನ್ನಲೆಯಲ್ಲಿ ಕ್ರಮ

bad news for liquor lovers beer and wine shop will close on election result day san

ಲಕ್ನೋ (ಮಾ.9): ಕುತೂಹಲದಿಂದ ಕಾಯುತ್ತಿರುವ ಪಂಚ ರಾಜ್ಯ ಚುನಾವಣೆಯ (Five State Elections) ಫಲಿತಾಂಶ ಗುರುವಾರ ಪ್ರಕಟವಾಗಲಿದೆ. ಆದರೆ, ಜಯದ ಗೆಲುವಿನ ಸಂಭ್ರಮ ಆಚರಿಸಲು, ಸೋಲಿನ ದುಃಖ ಮರೆಯಲು "ನಶೆ" ಇರುವುದಿಲ್ಲ. ಅಂದರೆ, ಚುನಾವಣಾ ಫಲಿತಾಂಶದ ದಿನವಾಗಿರುವ ಕಾರಣ ರಾಜ್ಯ ಎಲ್ಲಾ ಮದ್ಯದಂಗಡಿಗಳು ಹಾಗೂ ಬಾರ್ ಗಳನ್ನು (Bar And Liquor Shops) ಮುಚ್ಚುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದ್ದು, ಇಡೀ ದಿನ ಯಾವುದೇ ಕಾರಣಕ್ಕೂ ಮದ್ಯದ ಅಂಗಡಿಗಳನ್ನು ತೆರೆಯುವಂತಿಲ್ಲ ಎಂದು ಅಬಕಾರಿ ಇಲಾಖೆ (Excise Department) ಸುತ್ತೋಲೆಯಲ್ಲಿ ತಿಳಿಸಿದೆ. ನಿಯಮ ಉಲ್ಲಂಘಿಸಿದವರ (violators) ಮೇಲೆ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಇದರಲ್ಲಿ ನೀಡಲಾಗಿದೆ.

ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಲಕ್ನೋ ಬಿಡಿ ರಾಮ್ ತಿವಾರಿ (Additional Chief Electoral Officer Lucknow BD Ram Tiwari ) ಈ ಕುರಿತಂತೆ ಮಾಹಿತಿ ನೀಡಿದ್ದು, ಮಾರ್ಚ್ 10 ರಂದು ಮತ ಎಣಿಕೆಗೆ ಸಂಬಂಧಿಸಿದಂತೆ, ಎಲ್ಲಾ ಮತ ಎಣಿಕೆ ಕೇಂದ್ರಗಳಲ್ಲಿನ ಸ್ಟ್ರಾಂಗ್ ರೂಮ್‌ಗಳಿಗೆ ಮೂರು ಲೇಯರ್ ಸಿಎಪಿಎಫ್ ಭದ್ರತೆ ಇದೆ. ಮೊದಲ ಅಂಚೆ ಮತಪತ್ರದ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ. ಅದೇ ಸಮಯದಲ್ಲಿ, ಇವಿಎಂ ಮೂಲಕ ಚಲಾವಣೆಯಾದ ಮತಗಳ ಎಣಿಕೆಯು ಬೆಳಿಗ್ಗೆ 8:30 ರಿಂದ ಪ್ರಾರಂಭವಾಗಲಿದೆ.

ಫಲಿತಾಂಶ ದಿನವಾದ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಿರುವ ನಿಟ್ಟಿನಿಂದ ಅಬಕಾರಿ ಇಲಾಖೆ ಮದ್ಯದಂಗಡಿಗಳನ್ನು ಮುಚ್ಚುವಂತೆ ಸೂಚನೆ ನೀಡಲಾಗಿದೆ.  ಈ ಆದೇಶವನ್ನು ಎಲ್ಲ ಮದ್ಯದಂಗಡಿ ಮಾಲೀಕರಿಗೆ ನೀಡಲಾಗಿದೆ. ಇದರೊಂದಿಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಮುಚ್ಚಿದ ಮದ್ಯ ಮತ್ತು ಮಾದಕ ವಸ್ತುಗಳ ಅಂಗಡಿಗಳ ಮೇಲೆ ನಿಗಾ ಇಡಲಿದ್ದಾರೆ. ಅಬಕಾರಿ ಇಲಾಖೆಯ ಆದೇಶದಲ್ಲಿ ಮತ ಎಣಿಕೆ ಮುಗಿದು ಚುನಾವಣಾ ಫಲಿತಾಂಶ ಹೊರಬೀಳುವವರೆಗೂ ಮದ್ಯದ ಗುತ್ತಿಗೆಗಳನ್ನು ಸಂಪೂರ್ಣ ಬಂದ್ ಮಾಡಲಾಗುವುದು ಎಂದು ಹೇಳಲಾಗಿದೆ. ಮತ ಎಣಿಕೆ ವೇಳೆ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಎಲ್ಲ ಮದ್ಯದಂಗಡಿಗಳಿಗೆ ಮತ ಎಣಿಕೆಗೂ ಮುನ್ನ ಹಾಗೂ ಮತ ಎಣಿಕೆ ಮುಗಿಯುವವರೆಗೂ ಅಂಗಡಿ ತೆರೆಯದಂತೆ ಸೂಚನೆ ನೀಡಲಾಗಿದೆ.

ಈ ಆದೇಶದಲ್ಲಿ ಮಾರ್ಚ್ 10 ರಂದು ಎಲ್ಲಾ ದೇಶೀಯ ಮತ್ತು ವಿದೇಶಿ ಮದ್ಯದ ಅಂಗಡಿಗಳು, ಗೋಡೌನ್‌ಗಳು, ಬಾರ್‌ಗಳು, ಕ್ಯಾಂಟೀನ್‌ಗಳನ್ನು ಸಂಪೂರ್ಣವಾಗಿ ಮುಚ್ಚಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಇದರೊಂದಿಗೆ, ಎಲ್ಲಾ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಹೋಟೆಲುಗಳು, ಅಂಗಡಿಗಳು ಮತ್ತು ಇತರ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಸ್ಥಳದಲ್ಲಿ ಸ್ಪಿರಿಟ್ ಹೊಂದಿರುವ, ಆಲ್ಕೊಹಾಲ್ ಇರುವ ಮಾದಕ ವಸ್ತುಗಳ ಸಾಗಣೆ ಅಥವಾ ವಿತರಣೆ ಇರುವುದಿಲ್ಲ ಎನ್ನಲಾಗಿದೆ.

ಯುಪಿಯಲ್ಲಿ ಮತದಾನ ಮುಗಿದ ನಂತರ ಎಕ್ಸಿಟ್ ಪೋಲ್‌ಗಳು (Exit Poll )  ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಮತ್ತೊಂದು ಅವಧಿಗೆ ಪ್ರಚಂಡ ಬಹುಮತದಿಂದ ಗೆಲ್ಲುವ ಸಾಧ್ಯತೆಯಿದೆ ಎಂದು ಹೇಳಿವೆ. ಎಕ್ಸಿಟ್ ಪೋಲ್‌ಗಳ ಒಟ್ಟು ಮೊತ್ತವು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಿಗೆ ರಾಜ್ಯದ 403 ಸ್ಥಾನಗಳಲ್ಲಿ 241 ಸ್ಥಾನಗಳನ್ನು ನೀಡುತ್ತದೆ ಎಂದು ಹೇಳಿದ. ಉತ್ತರ ಪ್ರದೇಶದಲ್ಲಿ ಅಧಿಕಾರ ಹಿಡಿಯಲು ಬಹುಮತದ ಮಾರ್ಕ್ 202 ಆಗಿದೆ. ಈ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಸವಾಲಾಗಿದ್ದ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವು 142 ಸ್ಥಾನಗಳೊಂದಿಗೆ ಎರಡನೇ ಸ್ಥಾನ ಗಳಿಸಲಿದೆ ಎಂದು ಭವಿಷ್ಯ ನುಡಿದಿದೆ.

Latest Videos
Follow Us:
Download App:
  • android
  • ios