Asianet Suvarna News Asianet Suvarna News

ಬೆನ್ನಿಗೆ ಚೂರಿ ಇರಿಯುವ ಪವಾರ್ ನಮ್ಮ ಗುರುವಾಗಲು ಸಾಧ್ಯವಿಲ್ಲ: ಶಿವಸೇನೆ ನಾಯಕ!

* ಶರದ್ ಪವಾರ್ ವಿರುದ್ಧ ಗುಡುಗಿದ ಶಿವಸೇನೆ ನಾಯಕ

* ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ಸರ್ಕಾರದಲ್ಲಿ ಭಿನ್ನಾಭಿಪ್ರಾಯ

* ಬೆನ್ನಿಗೆ ಚೂರಿ ಇರಿಯುವ ಶರದ್ ಪವಾರ್ ನಮ್ಮ ಗುರುವಾಗಲು ಸಾಧ್ಯವಿಲ್ಲ ಎಂದ ಗೀತೆ

Backstabber Sharad Pawar can not be our guru MVA government just adjustment Sena leader Anant Geete pod
Author
Bangalore, First Published Sep 21, 2021, 3:09 PM IST

ನವದೆಹಲಿ(ಸೆ.21). ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ಸರ್ಕಾರದಲ್ಲಿ ಭಿನ್ನಾಭಿಪ್ರಾಯಗಳು ಮೂಡಲಾರಂಭಿಸಿವೆ. ಶಿವಸೇನೆ, ಕಾಂಗ್ರೆಸ್ ಮತ್ತು NCP ಈ ಮೂರೂ ಪಕ್ಷಗಳು ಒಟ್ಟಾಗಿ ಸರ್ಕಾರವ ನಡೆಸುತ್ತಿವೆಯಾದರೂ, ಕಾಲಕಾಲಕ್ಕೆ ಈ ಪಕ್ಷಗಳ ನಾಯಕರ ನಡುವಿನ ಅಸಮಾಧಾನ ಬಹಿರಂಗಗೊಳ್ಳುತ್ತಿದೆ. ಸದ್ಯ ಮಾಜಿ ಕೇಂದ್ರ ಸಚಿವ ಮತ್ತು ಶಿವಸೇನಾ ನಾಯಕ ಅನಂತ್ ಗೀತೆ, ಎನ್‌ಸಿಪಿ ನಾಯಕ ಶರದ್ ಪವಾರ್(Shaarad pawar) ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಎಂಇಎಸ್‌, ಮರಾಠಿ ಜಗಳ ಬಿಜೆಪಿಗೆ ಲಾಭ: ಸತೀಶ ಜಾರಕಿಹೊಳಿ

ಬೆನ್ನಿಗೆ ಚೂರಿ  ಹಾಕುವವರು ನನ್ನ ಗುರುವಲ್ಲ

ಶಿವಸೇನೆ ನಾಯಕ ಅನಂತ್ ಗೀತೆ(Anant Geete), ಶರದ್ ಪವಾರ್‌ರನ್ನು ಬೆನ್ನಿಗೆ ಚೂರಿ ಹಾಕುವ ವ್ಯಕ್ತಿ , ಅವರು ಗುರುವಾಗಲು ಸಾಧ್ಯವಿಲ್ಲ ಎಂದಿದ್ದಾರೆ. ಮಹಾರಾಷ್ಟ್ರದ ರಾಯಗಡದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತತನಾಡಿದ ಗೇತೆ, ಮುಂದಿನ ಪಂಚಾಯತ್ ಚುನಾವಣೆಯಲ್ಲಿ ಶಿವಸೇನೆ ತನ್ನ ಅಭ್ಯರ್ಥಿಯನ್ನು ಏಕಾಂಗಿಯಾಗಿ ಕಣಕ್ಕಿಳಿಸುತ್ತದೆ ಎಂದು ಹೇಳಿದ್ದಾರೆ. ಶಿವಸೇನೆಯ ಗಮನ ಗ್ರಾಮ ಪಂಚಾಯತ್, ಪಂಚಾಯತ್ ಸಮಿತಿ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳ ಮೇಲೆ ಕೇಂದ್ರೀಕೃತವಾಗಿದೆ ಎಂಬುವುದು ಉಲ್ಲೇಖನೀಯ.

ಸರ್ಕಾರ ಕೇವಲ ಒಂದು ಒಪ್ಪಂದ

ಪಿಟಿಐ ಸುದ್ದಿ ಈ ಬಗ್ಗೆ ವರದಿ ಮಾಡಿದ್ದು, ಮಹಾವಿಕಾಸ್ ಅಘಾಡಿ ಕೇವಲ ಒಪ್ಪಂದವಾಗಿದೆ. ಎಲ್ಲರೂ ಜೊತೆಗಿರುವವರೆಗೆ, ಈ ಸರ್ಕಾರ ನಡೆಯುತ್ತಿರುತ್ತದೆ. ಶರದ್ ಪವಾರ್(Sharad pawar) ಕಾಂಗ್ರೆಸ್‌ಗೆ ದ್ರೋಹ ಮಾಡಿ ತಮ್ಮ ಪಕ್ಷ ಸ್ಥಾಪಿಸಿದ್ದಾರೆ ಎಂದು ಗೀತೆ ನೇರವಾಗಿ ತಿವಿದಿದ್ದಾರೆ. ಕಾಂಗ್ರೆಸ್ ಮತ್ತು ಎನ್‌ಸಿಪಿ ಒಗ್ಗಟ್ಟಾಗದಿದ್ದರೆ, ಶಿವಸೇನೆ ಕೂಡ ಕಾಂಗ್ರೆಸ್‌ನ ಮಾರ್ಗವನ್ನು ಸಂಪೂರ್ಣವಾಗಿ ಅನುಸರಿಸಲು ಸಾಧ್ಯವಿಲ್ಲ ಎಂದೂ ತಿಳಿಸಿದ್ದಾರೆ.

ಎನ್‌ಸಿಪಿಯಿಂದ ಸೋತಿದ್ದಾರೆ ಅನಂತ್ ಗೀತೆ 

2019 ರ ಲೋಕಸಭಾ ಚುನಾವಣೆಯಲ್ಲಿ ಅನಂತ ಗೀತೆ ಅವರು NCP ಅಭ್ಯರ್ಥಿ ಸುನೀಲ್ ತತ್ಕರೆ ವಿರುದ್ಧ ಕಡಿಮೆ ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ ಎಂಬುವುದು ಉಲ್ಲೇಖನೀಯ. ಪ್ರಸ್ತುತ ತತ್ಕರೆ ಮಗಳು ಅದಿತಿ ಮಹಾರಾಷ್ಟ್ರ ಸರ್ಕಾರದಲ್ಲಿ ರಾಜ್ಯ ಸಚಿವರಾಗಿದ್ದಾರೆ. 

ಬೆಳಗಾವಿಯಲ್ಲಿ ಎಂಇಎಸ್‌ಗೆ ಹೀನಾಯ ಸೋಲು: ಮತ್ತೆ ಉದ್ಧಟತನ ಮೆರೆದ ಶಿವಸೇನೆ

ಸರ್ಕಾರದ ವಿರುದ್ಧ ಯಾವುದೇ ಕೆಟ್ಟ ಉದ್ದೇಶಗಳಿಲ್ಲ

ಇದೇ ವೇಳೆ ಗೀತೆ ಅವರು ಸರ್ಕಾರದ ಬಗ್ಗೆ ಯಾವುದೇ ಕೆಟ್ಟ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು. ಸರ್ಕಾರ ಮುಂದುವರೆಯಬೇಕೆನ್ನುವುದೇ ಅವರ ಆಶಯವಾಗಿದೆ. 2019 ರ ವಿಧಾನಸಭಾ ಚುನಾವಣೆಯ ನಂತರ ಶಿವಸೇನೆ ಮತ್ತು ಬಿಜೆಪಿ ನಡುವಿನ ಸಂಬಂಧ ಹದಗೆಟ್ಟಿರುವುದು ಗಮನಾರ್ಹವಾಗಿದೆ. 2014 ರಿಂದ 2019 ರವರೆಗೆ ಶಿವಸೇನೆ ಮತ್ತು ಬಿಜೆಪಿ ಒಟ್ಟಾಗಿ ಸರ್ಕಾರ ನಡೆಸಿದ್ದವು.

Follow Us:
Download App:
  • android
  • ios