ಚಂಡೀಗಢ[ನ.28]: ಹರ್ಯಾಣ ಸರ್ಕಾರ ಐಎಎಸ್‌ ಅಧಿಕಾರಿ ಅಶೋಕ್‌ ಖೇಮ್ಕಾ ಅವರನ್ನು ಮತ್ತೊಮ್ಮೆ ವರ್ಗಾವಣೆ ಮಾಡಿದೆ. ಇದು 28 ವರ್ಷಗಳ ಅವರ ವೃತ್ತಿ ಜೀವನದಲ್ಲಿ 53ನೇ ವರ್ಗಾವಣೆ ಆಗಿದೆ.

ತಮ್ಮ ವರ್ಗಾವಣೆ ಬಗ್ಗೆ ಖಡಕ್‌ ಪ್ರತಿಕ್ರಿಯೆ ನೀಡಿರುವ ಖೇಮ್ಕಾ, ‘ಪ್ರಮಾಣಿಕತೆಗೆ ಪ್ರತಿಫಲವೆಂದರೆ ಅವಮಾನ. ಮತ್ತೊಮ್ಮೆ ವರ್ಗಾವಣೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಮಾಚ್‌ರ್‍ನಲ್ಲಷ್ಟೇ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಖೇಮ್ಕಾ ನೇಮಕಗೊಂಡದ್ದರು. ಈಗ ಅವರನ್ನು ಪುರಾತತ್ವ ಮತ್ತು ವಸ್ತುಸಂಗ್ರಹಾಲಯ ಇಲಾಖೆಗೆ ವರ್ಗಾಯಿಸಲಾಗಿದೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್‌ ವಾದ್ರಾರ ಹಗರಣ ಬಯಲಿಗೆಳೆಯುವ ಮೂಲಕ ಖೇಮ್ಕಾ ಪ್ರಸಿದ್ಧರಾಗಿದ್ದರು.