ಆನೆ ಮೇಲೆ ಯೋಗಾಸನ, ಉರುಳಿ ಬಿದ್ದ ಬಾಬಾ ರಾಮ್‌ದೇವ್!
ಪತಂಜಲಿ ಸಂಸ್ಥೆ ಸಂಸ್ಥಾಪಕ ಯೋಗಗುರು ಬಾಬಾ ರಾಮ್‌ದೇವ್| ಆನೆ ಮೇಲೆ ಯೋಗಾಸನ ಮಾಡಲು ಹೋಗಿ ಉರುಳಿ ಬಿದ್ದ ಬಾಬಾ ರಾಮ್‌ದೇವ್!
ನವದೆಹಲಿ(ಅ.14): ಪತಂಜಲಿ ಸಂಸ್ಥೆ ಸಂಸ್ಥಾಪಕ ಯೋಗಗುರು ಬಾಬಾ ರಾಮ್‌ದೇವ್ ಅವರು ಆನೆಯ ಮೇಲೆ ಕುಳಿತು ಯೋಗ ಮಾಡಲು ಹೋಗಿ ಉರುಳಿ ಬಿದ್ದ ಘಟನೆ ನಡೆದಿದೆ.
ಮಥುರಾದಲ್ಲಿ ಆನೆಯ ಮೇಲೆ ಏರಿ ಕುಳಿತುಕೊಂಡಿದ್ದ ಬಾಬಾ ರಾಮ್‌ದೇವ್ ಅವರು ಯೋಗಾಸನ ಮಾಡುತ್ತಿದ್ದರು. ಈ ವೇಳೆ ಆನೆ ತನ್ನ ದೇಹವನ್ನು ಕುಲುಕ್ಕಿದ್ದರಿಂದ ಆಯ ತಪ್ಪಿದ ರಾಮ್‌ದೇವ್ ಅವರು ಆನೆಯ ಮೇಲಿನಿಂದ ಕೆಳಕ್ಕೆ ಉರುಳಿ ಬಿದ್ದಿದ್ದಾರೆ. ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದ್ದು, ಬಾಬಾ ರಾಮ್‌ದೇವ್ ಶೀಘ್ರ ಗುಣಮುಖರಾಗಲಿ ಎಂದು ಹಲವು ನೆಟ್ಟಿಗರು ಹಾರೈಸಿದ್ದಾರೆ.
ಈ ಹಿಂದೆಯೂ ಖಾಲಿ ರಸ್ತೆಯಲ್ಲಿ ಸೈಕಲ್ ತುಳಿಯುತ್ತಿದ್ದಾಗ ರಾಮ್‌ದೇವ್ ಅವರ ಸೈಕಲ್ ಮಳೆ ಬಂದಿದ್ದರಿಂದ ಸ್ಕಿಡ್ ಆಗಿ ಬಿದ್ದಿದ್ದ ವಿಡಿಯೋ ಸಹ ವೈರಲ್ ಆಗಿತ್ತು.