ನವದೆಹಲಿ(ಜೂ.09): ಸಣ್ಣ ಡಾಬಾದಲ್ಲಿ ವ್ಯಾಪಾರ ಇಲ್ಲದ ಕಾರಣಕ್ಕೆ ಸುದ್ದಿಯಾಗಿ ಕೊನೆಗೆ ಜನರ ನೆರವಿನಿಂದ ರೆಸ್ಟೋರೆಂಟ್‌ ಆರಂಭಿಸಿದ್ದ ದೆಹಲಿಯ ಬಾಬಾ ಕಾ ಡಾಬಾ ಖ್ಯಾತಿಯ ಕಾಂತಾ ಪ್ರಸಾದ್‌ ದಂಪತಿ, ಇದೀಗ ಮರಳಿ ತಮ್ಮ ಡಾಬಾಕ್ಕೆ ಮರಳಿದ್ದಾರೆ.

2020ರಲ್ಲಿ ಯುಟ್ಯೂಬರ್‌ ಒಬ್ಬರು ದೆಹಲಿಯ ಮಾಳವೀಯ ನಗರದಲ್ಲಿದ್ದ ವಯೋವೃದ್ಧ ಕಾಂತಾಪ್ರಸಾದ್‌ ದಂಪತಿಯ ಚಿಕ್ಕ ಪೆಟ್ಟಿಯಂಗಡಿ ಹೋಟೆಲ್‌ ವಿಡಿಯೋ ಹರಿಬಿಟ್ಟಿದ್ದರು. ಅದು ರಾತ್ರೋರಾತ್ರಿ ‘ಬಾಬಾ ಕಾ ಢಾಬಾ’ ಆಗಿ ಭಾರೀ ಫೇಮಸ್‌ ಆಗಿತ್ತು. ನೆರವಿನ ಹಣವೂ ಹರಿದುಬಂದಿತ್ತು. ಇದರಿಂದ ದೊರೆತ ಹಣದಲ್ಲಿ ದಂಪತಿ ಡಿಸೆಂಬರ್‌ನಲ್ಲಿ ಸಣ್ಣ ರೆಸ್ಟೋರೆಂಟ್‌ ಆರಂಭಿಸಿದ್ದರು. ಅದಕ್ಕಾಗಿ 5 ಲಕ್ಷ ಬಂಡವಾಳ ಹೂಡಿದ್ದರು.

ದುರದೃಷ್ಟವಶಾತ್‌ ಕೊರೋನಾ 2ನೇ ಅಲೆ ಕಾರಣ ಲಾಕ್‌ಡೌನ್‌ ಘೋಷಣೆಯಾಯಿತು. ಮೊದಲು ದಿನಕ್ಕೆ 3500 ರು. ವ್ಯಾಪಾರ ಆಗುತ್ತಿದ್ದರೆ ಲಾಕ್‌ಡೌನಿಂದಾಗಿ 1000 ರು. ಗೆ ಇಳಿಕೆಯಾಯಿತು. ತಿಂಗಳಿಗೆ 40,000 ವ್ಯಾಪಾರವಾದರೆ 1 ಲಕ್ಷ ಖರ್ಚಾಗುತ್ತಿತ್ತು. ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದ್ದರಿಂದ ರೆಸ್ಟೋರೆಂಟ್‌ ಮುಚ್ಚಿ ವೃದ್ಧ ದಂಪತಿ ಮತ್ತೆ ರಸ್ತೆ ಬದಿಯ ಪೆಟ್ಟಿಯಂಗಡಿ ಹೋಟೆಲ್‌ ಇಟ್ಟು ಜೀವನ ಸಾಗಿಸಲು ಆರಂಭಿಸಿದ್ದಾರೆ. ರೆಸ್ಟೋರೆಂಟ್‌ ಆರಂಭಿಸಿ ಎಂದು ಕೆಟ್ಟಸಲಹೆ ನೀಡಿದರು ಎಂದು ದೂರುತ್ತಿದ್ದಾರೆ.ಅ