ನವದೆಹಲಿ [ನ.09]: ದೇಶ ಕಾತರದಿಂದ ಕಾಯುತ್ತಿದ್ದ ಐತಿಹಾಸಿಕ ಅಯೋಧ್ಯೆ ತೀರ್ಪು ಪ್ರಕಟವಾಗಿದೆ.   ವಿವಾದಿತ 2.77 ಎಕರೆ ಜಾಗವನ್ನು ರಾಮಲಲ್ಲಾಗೆ ವಹಿಸಿ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದೆ. ರಾಮಮಂದಿರ ನಿರ್ಮಾಣಕ್ಕೆ ಅವಕಾಶ ನೀಡಿದೆ. ಬಾಬರಿ ಮಸೀದಿ ನಿರ್ಮಾಣಕ್ಕೆ ಪ್ರತ್ಯೇಕ ಜಾಗ ಕಲ್ಪಿಸಲು ಕೋರ್ಟ್ ಸೂಚನೆ ನೀಡಿದೆ. 

134 ವರ್ಷಗಳ ಅಯೋಧ್ಯೆಯ ರಾಮಜನ್ಮ ಭೂಮಿ ವಿವಾದ ಕೊನೆಗೂ ಬಗೆಹರಿದಿದ್ದು,  ಅನೇಕ ವರ್ಷಗಳ ಕಾಲ ಎಳೆಯುತ್ತಲೇ ಬಂದಿತ್ತು. ಇಂದು ಸುಪ್ರೀಂತೀರ್ಪು ನೀಡಿ ಅಂತ್ಯಹಾಡಿದೆ. ಆದರೆ ಇದರ ಮೂಲ ಪತ್ತೆ ಮಾತ್ರ ಅತ್ಯಂತ ಕ್ಲಿಷ್ಟಕರವಾಗಿತ್ತು.  ಈ ಐತಿಹಾಸಿಕ ವಿಚಾರ ನಡೆದು ಬಂದ ದಾರಿಯಲ್ಲಿ ಪ್ರತಿಯೊಂದು ಅರ್ಜಿದಾರರ ಸಮೂಹದ ಹಿಂದೆಯೂ ಕೂಡ ಇತಿಹಾಸವೇ ಅಡಗಿದೆ. ರಾಮಜನ್ಮ ಭೂಮಿಗಾಗಿ ಸತತವಾಗೊ ಹೋರಾಡಿದ ಮಹಂತರ ಪರಿಚಯ ಇಲ್ಲಿದೆ.

ಮಂದಿರ ನಿರ್ಮಾಣದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಂತರು ಯಾರು? 

ಮಹಂತ್ ರಘುಬರ್ ದಾರ್ 

1857 ಮೊದಲ ಬಾರಿ ಬಾಬ್ರಿ ಮಸೀದಿ ವಿಚಾರ ತಲೆ ಎತ್ತಿದ್ದು ಈ ವೇಳೆ ಮುಸ್ಲಿಂ ಪಕ್ಷಗಳು ಜಿಲ್ಲಾ ನ್ಯಾಯಾಲಯದ ಮೊರೆ ಹೋದವು.  1883 ರಲ್ಲಿ ಮಹಂತ್ ರಘುಬರ್ ದಾಸ್ ವಿವಾದಿತ ಸ್ಥಳದಲ್ಲಿ ಮಂದಿರ ನಿರ್ಮಾಣ ಆರಂಭಿಸಿದರು. ಇದಕ್ಕೆ ಮುಸ್ಲಿಂ ಪಾರ್ಟಿಗಳು ಪ್ರಶ್ನೆ ಮಾಡಿದ್ದರಿಂದ ಜಿಲ್ಲಾ ನ್ಯಾಯಾಲಯವನ್ನು ಮಂದಿರ ನಿರ್ಮಾಣಕ್ಕೆ ತಡೆ ನೀಡಿತು.  ಆದರೆ ಇಲ್ಲಿಗೆ ಸುಮ್ಮನಾಗದ ರಘುಬರ್ ದಾರ್ ಸ್ಥಳದ ಮಾಲಿಕತ್ವಕ್ಕಾಗಿ ಫೈಜಾಬಾದ್ ಕೋರ್ಟ್ ಮೊರೆ ಹೋದರು.  ಆದರೆ ಇಲ್ಲಿನ ಉಪ ನ್ಯಾಯಧೀಶರು ನಿರಾಕರಿಸಿದರು. ಬಳಿಕ ಜುಡಿಶಿಯಲ್ ಕಮಿಶನರ್ ಮೊರೆ ಹೋಗಿದ್ದು ಇಲ್ಲಿಂದಲೂ ಮಾಲಿಕತ್ವಕ್ಕೆ ಅವಕಾಶ ನಿರಾಕರಿಸಲಾಯಿತು. ಬಳಿಕ 1934ರವರೆಗೂ ಪ್ರಕರಣ ಯಾವುದೇ ಸದ್ದಾಗಲಿಲ್ಲ.  

ರಾಮನಿಗೆ ದೊರೆತ ಅಯೋಧ್ಯೆ: ಶತಮಾನಗಳ ನಂಬಿಕೆಗೆ ಸುಪ್ರೀಂ ತೀರ್ಪಿನ ನೈವೇದ್ಯೆ!...

ಮಹಂತ್ ರಾಮಚಂದ್ರ ಪರಮಹಂಸ

ರಾಮಚಂದ್ರ ಪರಮಹಂಸರು ಬಾಬ್ರಿ ಮಸೀದಿ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಡಿದವರಲ್ಲಿ ಪ್ರಮುಖರು. ರಾಮಜನ್ಮಭೂಮಿ ನ್ಯಾಸ ಸಮಿತಿ ಮುಖ್ಯಸ್ಥರಾಗಿ  ರಾಮಜನ್ಮ ಭೂಮಿ ಚಳುವಳಿ ಎಂದು ಸಮಿತಿಯೊಂದನ್ನು ರಚಿಸಿದರು.  ಒಟ್ಟು 50 ವರ್ಷಗಳ ಕಾಲ ಮಂದಿರ ನಿರ್ಮಾಣಕ್ಕಾಗಿ ತಮ್ಮ ಹೋರಾಟ ನಡೆಸಿದರು. ಒಂದು ವೇಳೆ ರಾಮ ಬಂದು ನಾನಿಲ್ಲಿ ಹುಟ್ಟಲಿಲ್ಲ ಎಂದರೂ ನಾನು ನಂಬಲ್ಲ ಎಂದಿದ್ದರು.  1934ರಲ್ಲಿ ಮಸೀದಿ ಮೇಲೆ ಹಿಂದೂಗಳಿಂದ ನಡೆದ ದಾಳಿಯಲ್ಲಿ ಪರಮಹಂಸ ಅವರು ಪ್ರಮುಖ ಪಾತ್ರ ವಹಿಸಿದ್ದರು.  ಬಾಬ್ರಿ ಮಸೀದಿ ಅಡಿಯಲ್ಲೇ ರಾಮಲಲ್ಲಾ ವಜ್ರಮಾನ್ ಮೂರ್ತಿಯನ್ನು ಇಲ್ಲಿ ಪ್ರತಿಷ್ಟಾಪಿಸಿದರು. ಮತ್ತೆ 1949ರಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ಆರಂಭಿಸಿದರು. 

ಮಹಂತ್ ದಿಗ್ವಿಜಯ್ ನಾಥ್

ರಾಮಮಂದಿರ ವಿಚಾರದ ಇತಿಹಾಸದಲ್ಲೇ ಪ್ರಮುಖ ಎನಿಸಿಕೊಂಡವರು ದಿಗ್ವಿಜಯ್ ನಾಥ್. ದಿಗ್ವಿಜಯ್ ನಾಥ್ 1894ರಲ್ಲಿ ಜನಿಸಿದ್ದು ಮಠದಲ್ಲಿ ಬೆಳೆದರು.  1937ರಲ್ಲಿ ಹಿಂದೂ ಮಹಾ ಸಭಾ ನೇತೃತ್ವವನ್ನು ವೀರಸಾವರ್ಕರ್ ವಹಿಸಿಕೊಂಡ ಸಂದರ್ಭದಲ್ಲಿ ದಿಗ್ವಿಜಯ್ ನಾಥ್ ಅವರು ಹಿಂದೂ ಮಹಾ ಸಭಾ ಸೇರಿದರು.  ಇದೇ ವೇಳೆ ಹಿಂದೂ ಧರ್ಮದ  ಇತಿಹಾಸದಲ್ಲಿ ಅಯೋಧ್ಯೆ ವಿಚಾರದ ಮಹತ್ವ ಅರಿತ ನಾಥ್ ಅಖಿಲ ಭಾರತೀಯ ರಾಮಾಯಣಮಹಾಸಭಾ ಸೇರಿದರು. ಈ ಸಂದರ್ಭದಲ್ಲಿ 9 ದಿನಗಳ ಕಾಲ ಬಾಬ್ರಿ ಮಸೀದಿ ಎದುರಲ್ಲೇ ರಾಮಚರಿತ ಮಾನಸ ಪಠಿಸಿದರು.  ಇದೇ ವೇಳೆ ಹಿಂದೂ ರಾಷ್ಟ್ರೀಯವಾದಿಗಳು ಬಾಬ್ರಿ ಮಸೀದಿ ಪ್ರವೇಶಿಸಿ ರಾಮ ಹಾಗೂ ಸೀತಾ ದೇವಿಯ  ಮೂರ್ತಿ ಸ್ಥಾಪಿಸಿದರು. ಗೋರಕ್ ಪುರ ಸಂಸದರಾಗಿಯೂ ಆಯ್ಕೆಯಾದರು. 1969ರಲ್ಲಿ ನಿಧನರಾದರು. 

ಮಹಂತ್ ಅವೈದ್ಯನಾಥ್ 

ಮಹಂತ್ ಅವೈದ್ಯನಾಥ್ ಅಯೋಧ್ಯಾ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು. ದಿಗ್ವಿಜಯ್ ನಾಥ್ ಅವರನ್ನು ತಮ್ಮ ಆಧ್ಯಾತ್ಮಿಕ ಗುರುವೆಂದು ಪರಿಗಣಿಸಿದ್ದು, ರಾಮಜನ್ಮ ಭೂಮಿ ಚಳುವಳಿಯ ನೇತೃತ್ವ ವಹಿಸಿದರು.  ಇವರ ಅವಧಿಯಲ್ಲಿ 1984ರಲ್ಲಿ ರಾಮಜನ್ಮಭೂಮಿ ಮುಕ್ತಿ ಯಜ್ಞಾ ಸಮಿತಿ ರಚಿಸಿದರು. ಹಿಂದೂ ರಾಷ್ಟ್ರೀಯವಾದಿಗಳಲ್ಲಿ ಹೋರಾಟದ ಕಿಚ್ಚು ಹಚ್ಚಿ ಅನೇಕ ಮೆರವಣಿಗೆಗಳನ್ನು ಮಾಡಿದರು. 1992 ಡಿಸೆಂಬರ್ ನಲ್ಲಿ ನಡೆದ ಬಾಬ್ರಿ ಮಸೀದಿ ಕೆಡವುವ ವೇಳೆ ನೇತೃತ್ವ ವಹಿಸಿದರು. ನಾಲ್ಕು ಬಾರಿ ಗೋರಕ್ ಪುರ ಕ್ಷೇತ್ರದ ಸಂಸದರಾದ  ಅವೈದ್ಯನಾಥ್ 2014ರಲ್ಲಿ ನಿಧನರಾದರು. 

ಧರಮ್ ದಾಸ್ 

ನಿರ್ಮೋಹಿ ಅಖಾರದ ಬಹುದೊಡ್ಡ ನಾಯಕ ಎಂದು ಕರೆಸಿಕೊಂಡವರು ಧರಮ್ ದಾಸ್. ಅಯೋಧ್ಯೆ ಪ್ರಕರಣದಲ್ಲಿ ಎರಡನೆ ಸ್ಥಾನದ ಹಿಂದೂ ಪಾರ್ಟಿ ಎನಿಸಿಕೊಂಡ ನಿರ್ಮೋಹಿ ಅಖಾರದ ಪ್ರಾಥಮಿಕ ಅರ್ಜಿದಾರರೇ ಇವರು.  ಧರಮ್ ದಾಸ್ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುವವರೆಗೂ ತಮ್ಮ ಪಟ್ಟು ಬಿಡುವುದಿಲ್ಲ ಎಂದ ಮಹಂತರದಲ್ಲಿ ಇವರ ಸ್ಥಾನವು ಪ್ರಮುಖವಾದುದು.  ಭಗವಾನ್ ರಾಮನ ವಿಗ್ರಹವನ್ನು ಬಾಬರಿ ಮಸೀದಿಯಲ್ಲಿ ಇರಿಸಿದ್ದಕ್ಕೆ 1949 ರಲ್ಲಿ ದಾಖಲಾದ ಪ್ರಕರಣದ ಪ್ರಮುಖ ಆರೋಪಿ ಅಭಿರಾಮ್ ಬಾಬಾ ದಾಸ್ ಅವರ ಏಕೈಕ ಉತ್ತರಾಧಿಕಾರಿ ಎಂದು ಇವರನ್ನು ಕರೆಯಲಾಗಿದೆ.