Asianet Suvarna News Asianet Suvarna News

Ayodhya Verdict: ರಾಮ ಜನ್ಮಭೂಮಿ ತೀರ್ಪು ನನ್ನದಲ್ಲ, ಸುಪ್ರೀಂ ಕೋರ್ಟಿದ್ದು: ಮಾಜಿ CJI ಗೊಗೋಯ್!

* ಮಾಜಿ ಸಿಜೆಐ ರಂಜನ್ ಗೊಗೊಯ್ ನೇತೃತ್ವದ ಪೀಠದಿಂದ ಅಯೋಧ್ಯೆ ತೀರ್ಪು

* ಅಯೋಧ್ಯೆ ತೀರ್ಪಿನ ಬಗ್ಗೆ ಗೊಗೊಯ್ ಮಾತು

* ರಾಮ ಜನ್ಮಭೂಮಿ ಬಗೆಗಿನ ತೀರ್ಪು ನಾನು ಕೊಟ್ಟದ್ದಲ್ಲ, ಅದು ಸುಪ್ರೀಂ ಕೋರ್ಟ್‌ದ್ದು

Ayodhya Verdict Is Not My Decision It is Given By SC On the Basis of Law and Constitution Says Former CJI ranjan Gogoi pod
Author
Bangalore, First Published Nov 30, 2021, 11:02 AM IST

ವಾರಾಣಸಿ(ನ.30): ನ್ಯಾಯಮೂರ್ತಿಗಳು ಧರ್ಮದ ಆಧಾರದ ಮೇಲಲ್ಲ, ಸಂವಿಧಾನದ (Constitution) ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಮತ್ತು ಸಂಸದ ರಂಜನ್ ಗೊಗೋಯ್ (Former CJI Of Supreme Court And MP Ranjan Gogoi) ಹೇಳಿದ್ದಾರೆ. ಇದೇ ವೇಳೆ ಸಂವಿಧಾನದ ಪ್ರಕಾರ ನಡೆಯುವಂತೆ ಕರೆ ನೀಡಿದ್ದಾರೆ. ವಾರಣಾಸಿಯಲ್ಲಿ (Varanasi) ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಮಜನ್ಮಭೂಮಿ ನಿರ್ಧಾರ ತಮ್ಮದಲ್ಲ, ಸುಪ್ರೀಂ ಕೋರ್ಟ್‌ನ ತೀರ್ಪು. ಮಾಜಿ ಸಿಜೆಐ ನೇತೃತ್ವದ ಪೀಠವೇ ಅಯೋಧ್ಯೆ ಭೂ ವಿವಾದ ಪ್ರಕರಣದ ತೀರ್ಪು (Ayodhya Verdict) ನೀಡಿದೆ. ಐವರು ನ್ಯಾಯಾಧೀಶರ ಪೀಠವು ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮ ಮಂದಿರ (Ram mandir) ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತ್ತು ಎಂದಿದ್ದಾರೆ.

ವಾರಣಾಸಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಮಜನ್ಮಭೂಮಿ (ram Janm Bhoomi) ನಿರ್ಧಾರ ತಮ್ಮದಲ್ಲ, ಸುಪ್ರೀಂ ಕೋರ್ಟ್‌ನ ತೀರ್ಪು. ಈ ನಿರ್ಧಾರವನ್ನು ಧರ್ಮದ ಆಧಾರದಲ್ಲಿ ತೆಗೆದುಕೊಳ್ಳದೆ ಕಾನೂನಿನ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು. ನ್ಯಾಯಮೂರ್ತಿಯೊಬ್ಬರ ಧರ್ಮ ಹಾಗೂ ಭಾಷೆ ಎರಡೂ ಸಂವಿಧಾನವಾಗಿದೆ. ಎಂದಿದ್ದಾರೆ. ಭಾರತದ ಮಾಜಿ ಸಿಜೆಐ ರಂಜನ್ ಗೊಗೋಯ್ ಅವರು ವಾರಣಾಸಿಯ ಕೇದಾರಘಾಟ್‌ನಲ್ಲಿರುವ ಶ್ರೀ ಕರ್ಪಾತ್ರಿ ಧಾಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು ಎಂಬುವುದು ಉಲ್ಲೇಖನೀಯ.

ರಾಮಜನ್ಮಭೂಮಿತೀರ್ಪಿನ ಬಗ್ಗೆ ರಂಜನ್ ಗೊಗೋಯ್ ಹೇಳಿದ್ದೇನು?

ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ, ನ್ಯಾಯಮೂರ್ತಿಗೆ ಧರ್ಮವಿಲ್ಲ, ಯಾವುದೇ ಭಾಷೆ ಅಥವಾ ಜಾತಿ ಇಲ್ಲ. ನ್ಯಾಯಧೀಶರ ಧರ್ಮ ಮತ್ತು ಭಾಷೆ ಸಂವಿಧಾನವಾಗಿದೆ. ರಾಮ ಜನ್ಮಭೂಮಿಯ ನಿರ್ಧಾರವು ರಂಜನ್ ಗೊಗೋಯ್ ಅವರದ್ದಲ್ಲ, ಆದರೆ ಭಾರತದ ಸುಪ್ರೀಂ ಕೋರ್ಟ್‌ನದ್ದು ಎಂದಿದ್ದಾರೆ.

'ಕಾನೂನು ಮತ್ತು ಸಂವಿಧಾನದ ಆಧಾರದ ಮೇಲೆ ಬರೆಯಲಾಗಿದೆ, ಧರ್ಮದ ಆಧಾರದ ಮೇಲೆ ಅಲ್ಲ'

ಐವರು ನ್ಯಾಯಾಧೀಶರು 3-4 ತಿಂಗಳ ಕಾಲ ಕುಳಿತು ವಿಚಾರಣೆ ನಡೆಸಿದ ನಂತರ 900 ಪುಟಗಳ ಈ ತೀರ್ಪನ್ನು ಬರೆದಿದ್ದಾರೆ ಎಂದು ಮಾಜಿ ಮುಖ್ಯ ನ್ಯಾಯಮೂರ್ತಿ ಮತ್ತು ಸಂಸದ ರಂಜನ್ ಗೊಗೊಯ್ ಹೇಳಿದ್ದಾರೆ. ಈ ತೀರ್ಪು ಒಂದು ಅಭಿಪ್ರಾಯವಾಗಿದೆ. ಇದರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇದನ್ನು ಧರ್ಮದ ಆಧಾರದ ಮೇಲೆ ಬರೆಯಲಾಗಿಲ್ಲ ಆದರೆ ಕಾನೂನು ಮತ್ತು ಸಂವಿಧಾನದ ಆಧಾರದ ಮೇಲೆ ಬರೆಯಲಾಗಿದೆ.

Follow Us:
Download App:
  • android
  • ios