ಕಾಂಗ್ರೆಸ್ ಆಡಳಿತದ ಹಿಮಾಚಲದಲ್ಲಿಯೂ ಇಂದು ರಜೆ: ಮನೆ ಮನೆಗಳಲ್ಲಿ ದೀಪ ಬೆಳಗಲೂ ಸಿಎಂ ಸುಖು ಕರೆ

ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶ ಸರ್ಕಾರ ಜ.22ರ ಸೋಮವಾರ ಸಾರ್ವತ್ರಿಕ ರಜೆ ಘೋಷಿಸಿದೆ.

Ayodhya Rama Mandir Inauguration Public holiday in Congress ruled Himachal today: CM Sukhum calls to lit lamps in homes akb

ಶಿಮ್ಲಾ: ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶ ಸರ್ಕಾರ ಜ.22ರ ಸೋಮವಾರ ಸಾರ್ವತ್ರಿಕ ರಜೆ ಘೋಷಿಸಿದೆ.

ಕಾಂಗ್ರೆಸ್‌ ಆಡಳಿತದ ರಾಜ್ಯವೊಂದು ರಾಮ ಮಂದಿರದ ಉದ್ಘಾಟನೆಗೆ ರಜೆ ಘೋಷಣೆ ಮಾಡಿದ ಮೊದಲ ಪ್ರಕರಣ ಇದಾಗಿದೆ. ಭಾನುವಾರ ರಾಜ್ಯದ ರಾಮಮಂದಿರಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸುಖವಿಂದ‌ರ್ ಸಿಂಗ್ ಸುಖು, 'ರಾಮ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ ವ್ಯಕ್ತಿಯಲ್ಲ. ಆತ ಎಲ್ಲರಿಗೂ ಮಾದರಿ ವ್ಯಕ್ತಿ' ಎಂದರು. ಜೊತೆಗೆ 'ಎಲ್ಲಾ ನಾಗರಿಕರಿಗೂ ಮನೆಗಳಲ್ಲೂ ದೀಪ ಬೆಳಗುವಂತೆ' ಕರೆ ನೀಡಿದರು.

ರಜೆ ಪ್ರಶ್ನಿಸಿದ್ದ ವಿದ್ಯಾರ್ಥಿಗಳಿಗೆ ತಪರಾಕಿ: ಸೋಮವಾರ ರಜೆ ನೀಡಿದ್ದನ್ನು ಪ್ರಶ್ನಿಸಿ ಮಹಾರಾಷ್ಟ್ರ, ಗುಜರಾತ್‌ನ ನಾಲ್ವರು ವಿದ್ಯಾರ್ಥಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾ ಮಾಡಿದೆ. ಇದೊಂದು ರಾಜಕೀಯ ಪ್ರೇರಿತ ಮತ್ತು ದುರುದ್ದೇಶ ಹೊಂದಿದ ಅರ್ಜಿಯಾಗಿದೆ. ಬೇರೆಯವರು ಅರ್ಜಿ ಸಲ್ಲಿಸಿದ್ದರೆ ದಂಡ ಹಾಕುತ್ತಿದ್ದೆವು ಎಂದು ಎಚ್ಚರಿಸಿದೆ.

Latest Videos
Follow Us:
Download App:
  • android
  • ios