ಅಹ್ಮದಾಬಾದ್‌(ಆ.01): ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣಕ್ಕೆ ನಿರ್ಧರಿಸಲಾಗಿರುವ ರಾಮ ಮಂದಿರವು ಈಗಾಗಲೇ ವಿನ್ಯಾಸಗೊಳಿಸಿದ್ದಕ್ಕಿಂತಲೂ 2 ಪಟ್ಟು ಹೆಚ್ಚು ವಿಸ್ತೀರ್ಣ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿದೆ ಎಂದು ದೇಗುಲ ನಿರ್ಮಾಣದ ವಾಸ್ತುಶಿಲ್ಪಿ ಚಂದ್ರಕಾಂತ್‌ ಸೋಂಪುರ ತಿಳಿಸಿದ್ದಾರೆ. 

ಈ ಬಗ್ಗೆ ಶುಕ್ರವಾರ ಮಾತನಾಡಿದ ವಾಸ್ತುಶಿಲ್ಪಿ ಚಂದ್ರಕಾಂತ್‌ ಅವರು, ಈ ಹಿಂದೆ ನಗರ ಶೈಲಿಯಲ್ಲಿ ನಿರ್ಮಾಣವಾಗಲಿದ್ದ ರಾಮಮಂದಿರಕ್ಕೆ ಕೇವಲ 2 ಗೋಪುರಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ಆದರೆ, ಹೆಚ್ಚಿನ ಭಕ್ತರಿಗೆ ರಾಮನ ದರ್ಶನ ಕಲ್ಪಿಸುವ ಸಲುವಾಗಿ ಐದು ಗೋಪುರ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ

ಅಯೋಧ್ಯೆಯಲ್ಲಿ ತ್ರೇತಾಯುಗ: ಪ್ರತಿ ಮನೆಯ ಗೋಡೆಗಳೂ ಹೇಳುತ್ತಿವೆ ಶ್ರೀರಾಮನ ಕತೆ!

ಅಲ್ಲದೆ, ಗರ್ಭಗುಡಿಯ ಮೇಲೆ ಸ್ತಂಭವೊಂದನ್ನು ಹಾಕಲಾಗುತ್ತದೆ. ಜೊತೆಗೆ, ದೇಗುಲದ ಎತ್ತರವನ್ನು ಸಹ ಇದೀಗ ಮತ್ತಷ್ಟು ಎತ್ತರಿಸಲಾಗಿದೆ. ಆ.5ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಯೋಧ್ಯೆ ರಾಮಮಂದಿರಕ್ಕೆ ಭೂಮಿ ಪೂಜೆ ನೆರವೇರಲಿದ್ದು, ಆ ನಂತರ ದೇಗುಲ ನಿರ್ಮಾಣದ ಕಾರ್ಯ ಆರಂಭವಾದ 3 ವರ್ಷಗಳಲ್ಲಿ ರಾಮಮಂದಿರ ದೇವಸ್ಥಾನ ತಲೆ ಎತ್ತಲಿದೆ ಎಂದು ಹೇಳಿದ್ದಾರೆ.

ರಾಮ ಮಂದಿರವ ನಾಗರ ಶೈಲಿಯಲ್ಲಿರಲಿದ್ದು, ಕೆಲಸ ಆರಂಭವಾದ ದಿನದಿಂದ ಮೂರು ವರ್ಷದೊಳಗಾಗಿ ಮಂದಿರ ಪೂರ್ಣಗೊಳ್ಳುವ ವಿಶ್ವಾಸ ವ್ತಕ್ತಪಡಿಸಿದ್ದಾರೆ.