ಅಯೋಧ್ಯೆಯಲ್ಲಿ ತ್ರೇತಾಯುಗ: ಪ್ರತಿ ಮನೆಯ ಗೋಡೆಗಳೂ ಹೇಳುತ್ತಿವೆ ಶ್ರೀರಾಮನ ಕತೆ!
ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಆಗಸ್ಟ್ 5 ದಂದ ಭೂಮಿ ಪೂಜೆ ನಡೆಯಲಿದ್ದು, ಖುದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬೆಳ್ಳಿ ಇಟ್ಟಿಗೆ ಇಟ್ಟು ಶಂಕು ಸ್ಥಾಪನೆ ಮಾಡಲಿದ್ದಾರೆ. ಈ ಕ್ಷಣಕ್ಕಾಗಿ ಶ್ರೀರಾಮ ಭಕ್ತರೆಲ್ಲಾ ಕಾತುರದಿಂದ ಕಾಯುತ್ತಿದ್ದಾರೆ. ಸದ್ಯ ಈ ಶುಭ ಕಾರ್ಯಕ್ಕಾಗಿ ಶ್ರೀರಾಮನ ಊರು ಅಯೋಧ್ಯೆ ಸಜ್ಜಾಗುತ್ತಿದೆ. ಸಾಕೇತ್ ಡಿಗ್ರಿ ಕಾಲೇಜಿನಿಂದ ರಾಮ ಜನ್ಮ ಭೂಮಿವರೆಗೆಗಿರುವ ಪ್ರತಿ ಮನೆಯ ಗೋಡೆಗಳೂ ಶ್ರೀರಾಮನ ಚಿತ್ರಗಳನ್ನು ಬಿಡಿಸಲಾಗಿದೆ. ಇದನ್ನು ನೋಡಿದರೆ ಈ ಗೋಡೆಗಳೆಲ್ಲವೂ ರರಾಮನ ಕತೆಯನ್ನು ಹೇಳುತ್ತಿರುವಂತೆ ಭಾಸವಾಗುತ್ತಿವೆ. ಸದ್ಯ ಈ ಅಪರೂಪದ ಕ್ಷಣಕ್ಕಾಗಿ ಬಹುತೇಕ ಎಲ್ಲಾ ತಯಾರಿಗಳೂ ಪೂರ್ಣಗೊಂಡಿವೆ. ಸದ್ಯ ಅಯೋಧ್ಯೆ ತ್ರೇತಾಯುಗದಂತೆ ಕಾಣುತ್ತಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಕೂಡಾ ಭೂಮಿ ಪೂಜೆಯನ್ನು ಅವಿಸ್ಮರಣೀಯವಾಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ಆಗಸ್ಟ್ 3 ರಿಂದ 5ರವರೆಗೆ ದೀಪೋತ್ಸವ ಆಚರಿಸುವ ಬಗ್ಗೆಯೂ ಮಾತುಗಳನ್ನಾಡಿಸಿದ್ದಾರೆ. ಇಲ್ಲಿದೆ ನೋಡಿ ರಾಮನೂರಿನ ವೈಭವ!

ಮದುವಣಗಿತ್ತಿಯಂತೆ ಸಜ್ಜಾಗಿದೆ ಅಯೋಧ್ಯೆ ದ್ವಾರ
ಮದುವಣಗಿತ್ತಿಯಂತೆ ಸಜ್ಜಾಗಿದೆ ಅಯೋಧ್ಯೆ ದ್ವಾರ
ಸಾಕೇತ್ ಡಿಗ್ರಿ ಕಾಲೇಜಿನಿಂದ ರಾಮ ಜನ್ಮಭೂಮಿವರೆಗಿನ ಪ್ರತಿ ಮನೆಯ ಗೋಡೆಗಳ ಮೇಲೆ ಶ್ರೀರಾಮನ ಚಿತ್ರ ಬಿಡಿಸಲಾಗುತ್ತಿದೆ.
ಸಾಕೇತ್ ಡಿಗ್ರಿ ಕಾಲೇಜಿನಿಂದ ರಾಮ ಜನ್ಮಭೂಮಿವರೆಗಿನ ಪ್ರತಿ ಮನೆಯ ಗೋಡೆಗಳ ಮೇಲೆ ಶ್ರೀರಾಮನ ಚಿತ್ರ ಬಿಡಿಸಲಾಗುತ್ತಿದೆ.
ರಾಮ ಜನ್ಮಭೂಮಿ ಭೂಮಿ ಪೂಜೆಗೂ ಮುನ್ನ ಹೀಗೆ ಸಜ್ಜಾಗುತ್ತಿದೆ ರಾಮಲಲ್ಲಾನ ನಗರ.
ರಾಮ ಜನ್ಮಭೂಮಿ ಭೂಮಿ ಪೂಜೆಗೂ ಮುನ್ನ ಹೀಗೆ ಸಜ್ಜಾಗುತ್ತಿದೆ ರಾಮಲಲ್ಲಾನ ನಗರ.
ರಾಮ ಮಂದಿರದ ಶಿಲಾನ್ಯಾಸಕ್ಕೆ ಧರ್ಮ ರಕ್ಷಾ ಸಂಘದ ಮೂಲಕ ತಯಾರಿಸಲಾದ ರಜತ ಇಟ್ಟಿಗೆ. ಇದನ್ನು ಖುದ್ದು ಪಿಎಂ ಮೋದಿ ಇಡಲಿದ್ದಾರೆ.
ರಾಮ ಮಂದಿರದ ಶಿಲಾನ್ಯಾಸಕ್ಕೆ ಧರ್ಮ ರಕ್ಷಾ ಸಂಘದ ಮೂಲಕ ತಯಾರಿಸಲಾದ ರಜತ ಇಟ್ಟಿಗೆ. ಇದನ್ನು ಖುದ್ದು ಪಿಎಂ ಮೋದಿ ಇಡಲಿದ್ದಾರೆ.
ಅಯೋಧ್ಯೆಯಲ್ಲಿ ತ್ರೇತಾಯುಗದಂತ ಚಿತ್ರಗಳು. ರಾಮಾಯಣ ಕಾಲದ ಪ್ರಸಂಗಗಳನ್ನು ಚಿತ್ರದ ಮೂಲಕ ಬಿಡಿಸಲಾಗುತ್ತಿದೆ.
ಅಯೋಧ್ಯೆಯಲ್ಲಿ ತ್ರೇತಾಯುಗದಂತ ಚಿತ್ರಗಳು. ರಾಮಾಯಣ ಕಾಲದ ಪ್ರಸಂಗಗಳನ್ನು ಚಿತ್ರದ ಮೂಲಕ ಬಿಡಿಸಲಾಗುತ್ತಿದೆ.
ಗುಲಾಬಿ ಬಣ್ಣದಿಂದ ಕಂಗೊಳಿಸುತ್ತಿದೆ ರಾಮ್ ಕೀ ಪೈಡೀ
ಗುಲಾಬಿ ಬಣ್ಣದಿಂದ ಕಂಗೊಳಿಸುತ್ತಿದೆ ರಾಮ್ ಕೀ ಪೈಡೀ
ರಾಮ ಜನ್ಮೂ ಭೂಮಿ ಪೂಜೆಗೂ ಮುನ್ನ ಸಿಂಗಾರಗೊಳ್ಳುತ್ತಿದೆ ಅಯೋಧ್ಯೆ. ಶ್ರೀರಾಮನ ಚಿತ್ರಕ್ಕೆ ಅಂತಿಮ ರೂಪ ನೀಡುತ್ತಿರುವ ಕಲಾವಿದ.
ರಾಮ ಜನ್ಮೂ ಭೂಮಿ ಪೂಜೆಗೂ ಮುನ್ನ ಸಿಂಗಾರಗೊಳ್ಳುತ್ತಿದೆ ಅಯೋಧ್ಯೆ. ಶ್ರೀರಾಮನ ಚಿತ್ರಕ್ಕೆ ಅಂತಿಮ ರೂಪ ನೀಡುತ್ತಿರುವ ಕಲಾವಿದ.
ಸರಯೂ ಆರತಿಯ ವಿಹಂಗಮ ನೋಟ. ಆರತಿ ನಡೆಸುತ್ತಿರುವ ಶ್ರೀರಾಮ ಭಕ್ತರು.
ಸರಯೂ ಆರತಿಯ ವಿಹಂಗಮ ನೋಟ. ಆರತಿ ನಡೆಸುತ್ತಿರುವ ಶ್ರೀರಾಮ ಭಕ್ತರು.
ಹೀಗೆ ಸಜ್ಜಾಗ್ತಿದೆ ರಾಮನೂರು.
ಹೀಗೆ ಸಜ್ಜಾಗ್ತಿದೆ ರಾಮನೂರು.
ಇಲ್ಲಿದೆ ನೋಡಿ ಹನುಮಾನ್ ಗಡೀಯಲ್ಲಿರುವ ಬಜರಂಗ ಮೂರ್ತಿ. ಸಂಪ್ರದಾಯದಂತೆ ಇಲ್ಲಿ ಅನುಮತಿ ಪಡೆದು ಶ್ರೀರಾಮನ ಜನ್ಮಭೂಮಿಗೆ ಪಿಎಂ ಮೋದಿ ತೆರಳಲಿದ್ದಾರೆ.
ಇಲ್ಲಿದೆ ನೋಡಿ ಹನುಮಾನ್ ಗಡೀಯಲ್ಲಿರುವ ಬಜರಂಗ ಮೂರ್ತಿ. ಸಂಪ್ರದಾಯದಂತೆ ಇಲ್ಲಿ ಅನುಮತಿ ಪಡೆದು ಶ್ರೀರಾಮನ ಜನ್ಮಭೂಮಿಗೆ ಪಿಎಂ ಮೋದಿ ತೆರಳಲಿದ್ದಾರೆ.
ಸಾಕೇತ್ ಡಿಗ್ರಿ ಕಾಲೇಜಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಹೆಲಿಪ್ಯಾಡ್. ಇಲ್ಲೇ ಪಿಎಂ ಮೋದಿ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತೆ.
ಸಾಕೇತ್ ಡಿಗ್ರಿ ಕಾಲೇಜಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಹೆಲಿಪ್ಯಾಡ್. ಇಲ್ಲೇ ಪಿಎಂ ಮೋದಿ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತೆ.
ಅಯೋಧ್ಯೆಯಲ್ಲಿರುವ ಶ್ರೀರಾಮನ ಮಂದಿರ.
ಅಯೋಧ್ಯೆಯಲ್ಲಿರುವ ಶ್ರೀರಾಮನ ಮಂದಿರ.
ಕೇಸರಿಮಯವಾಗಿದೆ ಅಯೋಧ್ಯೆಯ ಪ್ರತಿ ಮನೆಯ ಗೋಡೆಗಳು.
ಕೇಸರಿಮಯವಾಗಿದೆ ಅಯೋಧ್ಯೆಯ ಪ್ರತಿ ಮನೆಯ ಗೋಡೆಗಳು.
ಅಯೋಧ್ಯೆಯ ರಸ್ತೆ ಬದಿಯಲ್ಲಿರುವ ಮನೆಗಳ ಗೋಡೆಗಳ ಮೇಲೆ ಶ್ರೀರಾಮನ ಕತೆಯನ್ನು ಹೇಳುತ್ತಿರುವ ಚಿತ್ರಗಳು.
ಅಯೋಧ್ಯೆಯ ರಸ್ತೆ ಬದಿಯಲ್ಲಿರುವ ಮನೆಗಳ ಗೋಡೆಗಳ ಮೇಲೆ ಶ್ರೀರಾಮನ ಕತೆಯನ್ನು ಹೇಳುತ್ತಿರುವ ಚಿತ್ರಗಳು.
ಅಯೋಧ್ಯೆಯ ರಸ್ತೆ ಬದಿಯಲ್ಲಿರುವ ತಡೆಗೋಡೆಗಳ ಮೇಲೂ ರಾಮಾಯಣದ ಕತೆಗಳು.
ಅಯೋಧ್ಯೆಯ ರಸ್ತೆ ಬದಿಯಲ್ಲಿರುವ ತಡೆಗೋಡೆಗಳ ಮೇಲೂ ರಾಮಾಯಣದ ಕತೆಗಳು.
ಋಷಿ-ಮುನಿಗಳ ಚಿತ್ರಗಳೂ ಇಲ್ಲಿವೆ.
ಋಷಿ-ಮುನಿಗಳ ಚಿತ್ರಗಳೂ ಇಲ್ಲಿವೆ.
ವನವಾಸ ಮುಗಿಸಿ ಶ್ರೀರಾಮ ಅಯೋಧ್ಯೆಗೆ ಮರಳಿದ ವೈಭವ ಸಾರಿ ಹೇಳುತ್ತಿದೆ ಈ ಚಿತ್ರ.
ವನವಾಸ ಮುಗಿಸಿ ಶ್ರೀರಾಮ ಅಯೋಧ್ಯೆಗೆ ಮರಳಿದ ವೈಭವ ಸಾರಿ ಹೇಳುತ್ತಿದೆ ಈ ಚಿತ್ರ.
ಕಲಾವಿದರ ಕುಂಚದಲ್ಲಿ ಅರಳುತ್ತಿರುವ ಚಿತ್ರಗಳು.
ಕಲಾವಿದರ ಕುಂಚದಲ್ಲಿ ಅರಳುತ್ತಿರುವ ಚಿತ್ರಗಳು.
ಹನುಮಂತ ಪರ್ವತವನ್ನು ಹೊತ್ತು ತಂದ ದೃಶ್ಯ.
ಹನುಮಂತ ಪರ್ವತವನ್ನು ಹೊತ್ತು ತಂದ ದೃಶ್ಯ.
ಗೋಡೆಗಳ ಮೇಲೆ ಚಿತ್ರ ಬರೆಯುತ್ತಿರುವ ಕಲಾವಿದರು.
ಗೋಡೆಗಳ ಮೇಲೆ ಚಿತ್ರ ಬರೆಯುತ್ತಿರುವ ಕಲಾವಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ