ಅಷ್ಟಧಾತುವಿನಿಂದ ನಿರ್ಮಿಸಲಾದ 620 ಕೆಜಿ ತೂಕದ ಗಂಟೆಯನ್ನು ಅಯೋಧ್ಯೆಯ ರಾಮಮಂದಿರದಲ್ಲಿ ಇರಿಸಲಾಗುವುದು. ಗಂಟೆಯಲ್ಲಿ "ಜೈ ಶ್ರೀರಾಮ್" ಎಂದು ಬರೆಯಲಾಗಿದೆ. ದೇವಸ್ಥಾನದಲ್ಲಿ ನಿರ್ಮಾಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡ ನಂತರ ಇದರ ಸ್ಥಾಪನೆಗೆ ನಿರ್ಧರಿಸಲಾಗಿದೆ. 

ನವದೆಹಲಿ (ಡಿ.28): ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ನಡೆಯುವ ಮುನ್ನ 620 ಕೆಜಿ ತೂಕದ ಗಂಟೆಯನ್ನು ಶ್ರೀರಾಮ ಮಂದಿರದಲ್ಲಿ ಸ್ಥಾಪನೆ ಮಾಡಲಾಗುತ್ತದೆ. ಈ ಗಂಟೆಯನ್ನು ಒಮ್ಮೆ ಬಾರಿಸಿದರೆ, ಇದರಲ್ಲಿ ಓಂ ಎನ್ನುವ ಅನುರಣನ ಕೇಳಿಬರುತ್ತದೆ. ಸದ್ಯ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಭರದ ಸಿದ್ಧತೆ ನಡೆದಿದೆ. ದೇವಾಲಯದ ಒಳಗೆ ಅಳವಡಿಸಲಾಗಿರುವ ಗಂಟೆಯ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ದೇವಸ್ಥಾನದೊಳಗೆ ಅಳವಡಿಸಲಾಗುವ ಗಂಟೆಯ ವಿಡಿಯೋ ಹೊರಬಿದ್ದಿದೆ. ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆಯ ಸಿದ್ಧತೆಯ ನಡುವೆಯೇ ಬೃಹತ್‌ ಚಿತ್ರಗಳು ಜನರಲ್ಲಿ ಭಕ್ತಿಯನ್ನು ತುಂಬಿವೆ. ಈ ಗಂಟೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ನಂತರ, ಅದರ ಬಗ್ಗೆ ಮಾಹಿತಿ ಸಂಗ್ರಹಿಸಲು ಪ್ರಾರಂಭಿಸಿತು. ಈ ಗಂಟೆಯನ್ನು ಉತ್ತರ ಪ್ರದೇಶದ ಜಲೇಸರ್‌ನ ಕುಟುಂಬವು ಸಿದ್ಧಪಡಿಸಿದೆ. ಕುಟುಂಬವು ರಾಮಮಂದಿರ ಟ್ರಸ್ಟ್‌ಗೆ ಗಂಟೆಯನ್ನು ಅರ್ಪಿಸಲಿದೆ.

ರಾಮಮಂದಿರದಲ್ಲಿ ಸ್ಥಾಪಿಸಲಾದ ಈ ಗಂಟೆಯ ತೂಕ 620 ಕೆಜಿ ಎಂದು ಹೇಳಲಾಗುತ್ತದೆ. ಅದರ ಮೇಲೆ 'ಜೈ ಶ್ರೀ ರಾಮ್' ಎಂದು ಇಂಗ್ಲೀಷ್‌ನಲ್ಲಿ ಬರೆಯಲಾಗಿದೆ. ಅಯೋಧ್ಯೆಯ ರಾಮಮಂದಿರದಲ್ಲಿ ಸ್ಥಾಪಿಸಲು ನಿರ್ಮಿಸಲಾದ ಈ ದೊಡ್ಡ ಗಂಟೆಯನ್ನು ಅಷ್ಟಧಾತುಗಳಿಂದ ಮಾಡಲ್ಪಟ್ಟಿದೆ. ಈ ಬೃಹತ್ ಗಂಟೆಯನ್ನು ತಯಾರಿಸಲು ಕಾರ್ಖಾನೆಯೊಂದರಲ್ಲಿ 400 ಉದ್ಯೋಗಿಗಳು ಹಗಲಿರುಳು ಶ್ರಮಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ಈ ಗಂಟೆಯನ್ನು ಶೀಘ್ರದಲ್ಲೇ ದೇವಾಲಯದ ಒಳಗೆ ಸ್ಥಾಪಿಸಲಾಗುವುದು. ಉತ್ತರ ಪ್ರದೇಶದ ಜಲೇಸರ್ ನಲ್ಲಿ ತಯಾರಾದ ಈ ಗಂಟೆ ಅತ್ಯಂತ ವಿಶಿಷ್ಟ ಮತ್ತು ವಿಶೇಷವಾಗಿದೆ.

ರಾಮಮಂದಿರಕ್ಕೆ ಗಂಟೆ ಅರ್ಪಣೆ: ಜಲೇಸರ್‌ನ ಕುಟುಂಬ ಸಿದ್ಧಪಡಿಸಿದ ಈ ಗಂಟೆಯನ್ನು ರಾಮಮಂದಿರದಲ್ಲಿ ಅರ್ಪಿಸಲಾಗಿದೆ. ಒಂದೇ ತುಂಡಿನಲ್ಲಿ ಮಾಡಿರುವ ಈ ಗಂಟೆ ಯಾವಯದೇ ದೇವಸ್ಥಾನದಲ್ಲಿರುವ ಅತ್ಯಂತ ಭಾರಿ ತೂಕದ ಗಂಟೆ ಎನಿಸಿದೆ. ಈ ಗಂಟೆ ವಿಶೇಷವಾಗಿದೆ ಎನ್ನುವ ಸಿದ್ಧಪಡಿಸಿದ ಕಾರ್ಖಾನೆಯ ಮಾಲೀಕರು. ಹೆಚ್ಚಿನ ದೊಡ್ಡ ಗಂಟೆಗಳನ್ನು ಎರಡು ತುಂಡುಗಳಾಗಿ ಅಚ್ಚು ಮಾಡಿ ನಂತರ ಅವುಗಳನ್ನು ಜೋಡಿಸಿ ತಯಾರಿಸಲಾಗುತ್ತದೆ ಎಂದು ಅವರು ಹೇಳಿದರು. ಈ ಗಂಟೆಯಲ್ಲಿ ಯಾವುದೇ ಬೇರೆ ತುಂಡನ್ನು ಸೇರಿಸಲಾಗಿಲ್ಲ. ಇದನ್ನು ಒಂದೇ ತುಣುಕಿನಲ್ಲಿ ನಿರ್ಮಾಣ ಮಾಡಲಾಗಿದೆ

ಜಲೇಸರದ ಮಣ್ಣು ಬಹಳ ವಿಶೇಷವಾಗಿದೆ ಎನ್ನುತ್ತಾರೆ ಗಂಟೆ ತಯಾರಿಸಿರುವ ಕಂಪನಿ. ಅದಕ್ಕಾಗಿಯೇ ಇಲ್ಲಿ ಗಂಟೆಗಳನ್ನು ತಯಾರಿಸಲಾಗುತ್ತದೆ. ನುಡಿಸಿದಾಗ ಗಂಟೆಯೊಳಗಿಂದ ಬರುವ ‘ಓಂ’ ಶಬ್ದ ಜಲೇಸರದ ಮಣ್ಣಿಗೆ ಬರುತ್ತದೆ ಎಂದು ಹೇಳಿದ್ದಾರೆ.

Scroll to load tweet…

Ayodhya Ground Report: ಅಯೋಧ್ಯೆಯಲ್ಲಿರುವ ವ್ಯವಸ್ಥೆಗಳೇನು, ಚಂಪತ್‌ ರೈ ಹೇಳ್ತಾರೆ ಕೇಳಿ..

ಈ ಗಂಟೆ ಹೊರಗಿನಿಂದ 15 ಅಡಿ ಮತ್ತು ಒಳಗಿನಿಂದ 5 ಅಡಿ ಇದೆ. ಇದರ ಎತ್ತರ 8 ಅಡಿ. ಈ ಗಂಟೆ ತಯಾರಿಕೆಗೆ ಸುಮಾರು 25 ಲಕ್ಷ ರೂಪಾಯಿ ಖರ್ಚಾಗಿದೆ. ಉತ್ತರ ಪ್ರದೇಶದ ಜಲೇಸರ್ ಕಣಿವೆಗಳು ಘಂಟೆಗಳ ನಿರ್ಮಾಣಕ್ಕಾಗಿ ದೇಶದಾದ್ಯಂತ ಪ್ರಸಿದ್ಧವಾಗಿದೆ. ಇಲ್ಲಿ ತಯಾರಿಸಲಾದ ಗಂಟೆಗಳನ್ನು ದೇಶದ ಮೂಲೆ ಮೂಲೆಯಲ್ಲಿರುವ ದೇವಾಲಯಗಳಲ್ಲಿ ಸ್ಥಾಪಿಸಲಾಗಿದೆ. ಈಗ ರಾಮಲಲ್ಲಾನ ಭಕ್ತರು ರಾಮಮಂದಿರದಲ್ಲಿಯೂ ಜಲೇಸರ್ ಗಂಟೆಯನ್ನು ಬಾರಿಸುತ್ತಾರೆ.

Ayodhya Ground Report: ಅಯೋಧ್ಯೆ ಭದ್ರತಾ ವ್ಯವಸ್ಥೆ ಹೇಗಿರಲಿದೆ? ಇಲ್ಲಿದೆ ಡೀಟೇಲ್ಸ್‌