Asianet Suvarna News Asianet Suvarna News

ಆಯೋಧ್ಯೆ ರಾಮ ಮಂದಿರದಲ್ಲಿ ಅದ್ಧೂರಿ ಹೋಳಿ ಹಬ್ಬ ಆಚರಣೆಗೆ ಸಿದ್ಧತೆ, ಭಕ್ತರಿಗೆ ವಿಶೇಷ ಪ್ರಸಾದ!

ಆಯೋಧ್ಯೆ ರಾಮಮಂದಿರದಲ್ಲಿ ಶ್ರೀ ರಾಮಲಲ್ಲಾ ಪ್ರಾಣಪ್ರತಿಷ್ಠೆ ಬಳಿಕ ಮೊದಲ ಹೋಳಿ ಹಬ್ಬ ಆಚರಣೆ ಮಾಡಲಾಗುತ್ತಿದೆ. ಅದ್ಧೂರಿಯಾಗಿ ಹೋಳಿ ಹಬ್ಬ ಆಚರಣೆಗೆ ತಯಾರಿ ನಡೆಸಲಾಗಿದೆ. ಭಕ್ತರು ಹೋಳಿ ಹಬ್ಬದಲ್ಲಿ ಪಾಲ್ಗೊಳ್ಳಲು ವಿಶೇಷ ಅವಕಾಶ ಕಲ್ಪಿಸಲಾಗಿದೆ.ಇಷ್ಟೇ ಅಲ್ಲ ಪ್ರಸಾದ ಕೂಡ ವಿತರಿಸಲಾಗುತ್ತದೆ.
 

Ayodhya Ram mandir set to celebrate Holi Festivals says priest Acharya Satyendra Das ckm
Author
First Published Mar 24, 2024, 5:32 PM IST

ಆಯೋಧ್ಯೆ(ಮಾ.24) ಆಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿ ಶ್ರೀ ರಾಮಲಲ್ಲಾ ಪ್ರಾಣಪ್ರತಿಷ್ಟೆ ಬಳಿಕ ಇದೇ ಮೊದಲ ಬಾರಿಗೆ ಅದ್ಧೂರಿ ಹೋಳಿ ಹಬ್ಬ ಆಚರಣೆಗೆ ಸಿದ್ಧತೆ ಮಾಡಲಾಗಿದೆ. ಭವ್ಯ ರಾಮ ಮಂದಿರದಲ್ಲಿ ನಡೆಯುತ್ತಿರುವ ಮೊದಲ ಹೋಳಿ ಹಬ್ಬ ಆಚರಣೆಯಿಂದ ಅದ್ಧೂರಿಯಾಗಿ ಆಚರಿಸಲು ರಾಮಜನ್ಮಭೂಮಿ ಟ್ರಸ್ಟ್ ನಿರ್ಧರಿಸಿದೆ. ಇದಕ್ಕಾಗಿ ಎಲ್ಲಾ ತಯಾರಿ ಮಾಡಿಕೊಂಡಿದೆ. ರಾಮ ಮಂದಿರ ಪ್ರಧಾನ ಅರ್ಚಕ ಅಚಾರ್ಯ ಸತ್ಯೇಂದ್ರ ದಾಸ್ ಈ ಕುರಿತು ಮಾಹಿತಿ ನೀಡಿದ್ದಾರೆ.

ಭವ್ಯ ಮಂದಿರದಲ್ಲಿ ಶ್ರೀರಾಮನಿಗೆ ಮೊದಲ ಹೋಳಿ ಹಬ್ಬ ಆಚರಣೆಯಾಗಿದೆ. ಹೀಗಾಗಿ ವಿಶೇಷವಾಗಿ ಹಾಗೂ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಹೋಳಿ ಹಬ್ಬ ಆಚರಣೆ ವೇಳೆ ರಾಮಲಲ್ಲಾಗೆ ಬಣ್ಣ ಹಚ್ಚಲಾಗುತ್ತದೆ. ಇದೇ ವೇಳೆ ಕಚೋರಿ, ಗುಜಿಯಾ, ಪುರಿ, ಕಡುಬು ಸೇರಿದಂತೆ ಇತರ ಭಕ್ಷ್ಯಗಳನ್ನು ನೈವೇದ್ಯಗಳೊಂದಿಗೆ ಅರ್ಪಿಸಲಾಗುತ್ತದೆ. ವಿಶೇಷ ಪೂಜೆ ಬಳಿಕ ಈ ಪ್ರಸಾದವನ್ನು  ರಾಮ ಭಕ್ತರಿಗೆ ವಿತರಿಸಲಾಗುತ್ತದೆ ಎಂದು ಆತಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ.  

 

ಆಯೋಧ್ಯೆ ರಾಮ ಮಂದಿರ ದಿನದ 24 ಗಂಟೆ ತೆರಯಲು ಸಿಎಂ ಯೋಗಿ ಸೂಚನೆ, ಈ ಮೂರು ದಿನ ಮಾತ್ರ!

ಶಾಸ್ತ್ರೋಕ್ತವಾಗಿ ಹಬ್ಬ ಆಚರಿಸಲಾಗುತ್ತದೆ. ಹೀಗಾಗಿ ಭಕ್ತರು ಸಹಕರಿಸಬೇಕು ಎಂದು ತೀರ್ಥ ಕ್ಷೇತ್ರ ಟ್ರಸ್ಟ್ ಮನವಿ ಮಾಡಿದೆ. ಶ್ರೀರಾಮನ ಪ್ರಾಣಪ್ರತಿಷ್ಠೆ ಬಳಿಕ ಆಗಮಿಸಿರುವ ಮೊದಲ ಹೋಳಿ ಹಬ್ಬವಾಗಿದೆ. ದಶರಥನ ಕಾಲದಲ್ಲಿ ಆಯೋಧ್ಯೆಯಲ್ಲಿದ್ದ ಗತವೈಭವ ಮರುಕಳಿಸಿದೆ. ಈ ಪರಂಪರೆಯನ್ನು ಉಳಿಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ಆಚಾರ್ಯರು ಹೇಳಿದ್ದಾರೆ. 

ಈಗಾಗಲೇ ಆಯೋಧ್ಯೆ ರಾಮ ಮಂದಿರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಪ್ರಾರಂಭವಾಗಿರುವ ಕಾರಣ ಕುಟುಂಬ ಸಮೇತ ರಾಮ ಭಕ್ತರು ಮಂದಿರಕ್ಕೆ ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ.ಉರಿ ಬಿಸಿಲಿನ ಕಾರಣ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ. ಮುಂದಿರದ ಆವರಣದಲ್ಲಿ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇನ್ನು ಭಕ್ತರು 2.5 ಕಿಲೋಮೀಟರ್ ಹೆಚ್ಚು ಕ್ಯೂನಲ್ಲಿ ನಿಲ್ಲದಂತೆ ಸೂಚಿಸಲಾಗಿದೆ. ಉರಿ ಬಿಸಿಲಿನ ಕಾರಣ ಅಸ್ವಸ್ಥಗೊಳ್ಳುವ ಅಪಾಯವಿದೆ. ಹೀಗಾಗಿ ಭಕ್ತರಿಗೆ ಸುಗಮವಾಗಿ ಶ್ರೀರಾಮನ ದರ್ಶನ ಪಡೆಯಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ.

 

ಅಯೋಧ್ಯೆ ರಾಮಮಂದಿರ ನಿರ್ಮಾಣ ಕ್ರೆಡಿಟ್ ಮೋದಿಗೆ ಮಾತ್ರವಲ್ಲ, ಯೋಗಿಗೂ ಸಲ್ಲುತ್ತೆ: ಚಕ್ರವರ್ತಿ ಸೂಲಿಬೆಲೆ
 

Follow Us:
Download App:
  • android
  • ios