ಅಯೋಧ್ಯೆ ರಾಮಮಂದಿರ ನಿರ್ಮಾಣ ಕ್ರೆಡಿಟ್ ಮೋದಿಗೆ ಮಾತ್ರವಲ್ಲ, ಯೋಗಿಗೂ ಸಲ್ಲುತ್ತೆ: ಚಕ್ರವರ್ತಿ ಸೂಲಿಬೆಲೆ

ಅಯೋದ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಆಗಿದೆ. ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಇರೋದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಮಮಂದಿರ ನಿರ್ಮಾಣ ಮಾಡಲು ಸಾಧ್ಯವಾಯಿತು. ಹೀಗಾಗಿ ರಾಮ ಮಂದಿರದ ಕ್ರೆಡಿಟ್ ಮೋದಿಗೆ ಮಾತ್ರವಲ್ಲ, ಯೋಗಿಗೂ ಸೇರುತ್ತೆ ಎಂದು ಅಭಿಪ್ರಾಯಪಟ್ಟರು.

Chakravarthy Sulibele speech about Ayodhya Ram Mandir struggle at raichur ravs

ರಾಯಚೂರು (ಫೆ.24): ಅಯೋದ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಆಗಿದೆ. ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಇರೋದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಮಮಂದಿರ ನಿರ್ಮಾಣ ಮಾಡಲು ಸಾಧ್ಯವಾಯಿತು. ಹೀಗಾಗಿ ರಾಮ ಮಂದಿರದ ಕ್ರೆಡಿಟ್ ಮೋದಿಗೆ ಮಾತ್ರವಲ್ಲ, ಯೋಗಿಗೂ ಸೇರುತ್ತೆ ಎಂದು ಅಭಿಪ್ರಾಯಪಟ್ಟರು.

ರಾಯಚೂರಿನ ಜವಾಹರನಗರ ಶಾಖಾ ಮಠದದಲ್ಲಿ ನಡೆದ ಮಂತ್ರಾಲಯ ಶ್ರೀಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಮಮಂದಿರ ಹೋರಾಟದ ಇತಿಹಾಸ, ಈ ಹಿಂದೆ ಯುಪಿ‌ ಸಿಎಂ ಮುಲಾಯಂ ಸಿಂಗ್ ಯಾದವ್ ರಾಮಮಂದಿರ ಹೋರಾಟಕ್ಕೆ ಅಡ್ಡಗಾಲು ಹಾಕಿ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟರು.

ಜಾತಿ-ಜಾತಿಯನ್ನು ಒಡೆದು ಅಧಿಕಾರ ನಡೆಸಬೇಕು ಎಂಬುದೇ ಕಾಂಗ್ರೆಸ್‌ ಉದ್ದೇಶ: ಚಕ್ರವರ್ತಿ ಸೂಲಿಬೆಲೆ

ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿದಾಗ ಕೆಲವರು ರಾಮಮಂದಿರದ ಬದಲು ಆಸ್ಪತ್ರೆ, ಶಾಲೆ ಕಟ್ಟಬಹುದಿತ್ತು ಎಂದರು. ಆದರೆ ಒಂದು ತಿಳಿದುಕೊಳ್ಳಿ ಇಂಥ ವಿಚಾರವನ್ನು ಕೇವಲ ನಮಗೆ ಅಂದರೆ ಹಿಂದೂ ಧರ್ಮಕ್ಕೆ ಮಾತ್ರ ಹೇಳ್ತಾರೆ. ರಾಮಮಂದಿರ ವಿಚಾರವಷ್ಟೇ ಅಲ್ಲ, ಅಂತಾರೆ, ಯುಗಾದಿ ಹಬ್ಬದಂದು ಬಣ್ಣ, ನಾಗಪಂಚಮಿಯಂದು ಹಾಲು ಹಾಕಬೇಡಿ ಅಂತಾರೆ. ದೀಪಾವಳಿ ಹಬ್ಬದಂದು ಪಟಾಕಿ ಸಿಡಿಸಿದರೆ ನಾಯಿಗಳಿಗೆ ಹಾರ್ಟ್ ಅಟ್ಯಾಕ್ ಆಗುತ್ತೆ ಅಂತ ಒಬ್ಬ ಕ್ರಿಕೆಟರ್ ಹೇಳ್ತಾನೆ. ಆದರೆ ಆತ ಸೆಂಚುರಿ ಹೊಡೆದಾಗ, ಟೀಂ ಗೆದ್ದಾಗ ತಾಸಾನುಗಟ್ಟಲೇ ಪಟಾಕಿ ಸಿಡಿಸ್ತಾರಲ್ಲ, ಆಗ ಆಗದೇ ಇರೋದು ದೀಪಾವಳಿ ವೇಳೆ ಆಗುತ್ತಾ?  ಅಯೋಧ್ಯೆಯಲ್ಲಿ ರಾಮಮಂದಿರ ಬದಲು ಆಸ್ಪತ್ರೆ ಕಟ್ಟಬಹುದಿತ್ತು ಅಂದರು. ರಾಯಚೂರಿನವರು ಅಯೋಧ್ಯೆ ಆಸ್ಪತ್ರೆಗೆ ಹೋಗೋಕಾಗುತ್ತಾ? ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿ ಜನರ ಹೃದಯಗಳನ್ನೇ ಹ್ಯಾಕ್ ಮಾಡಿದ್ದಾರೆ -ಚಕ್ರವರ್ತಿ ಸೂಲಿಬೆಲೆ

ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಇರೋದ್ರಿಂದಲೇ ರಾಮಮಂದಿರ ನಿರ್ಮಾಣ ಆಯ್ತು. ನರೇಂದ್ರ ಮೋದಿ ಪಿಎಂ ಆದ ವೇಳೆಯೇ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಬಂದ್ರು. ಇಬ್ಬರು ಇಲ್ಲದಿದ್ರೆ ರಾಮಮಂದಿರ ಆಗ್ತಿರಲಿಲ್ಲ. ಯುಪಿ ಸರ್ಕಾರ ಸ್ವಲ್ಪ ಸುಮ್ಮನಾಗಿದ್ರೂ ಅಲ್ಲಿ ಮಂದಿರ ಕಟ್ಟಲು ಆಗ್ತಿರಲಿಲ್ಲ ಎಂದರು. ಆಪ್‌ ಬೆಂಬಲಿಸಿ ಮತ ಹಾಕಿದ ಪಂಜಾಬ್ ರೈತರ ಪರಿಸ್ಥಿತಿ ಏನಾಗಿದೆ ನೋಡಿ. ಅಲ್ಲಿನ ಸರ್ಕಾರ ಕೃಷಿ ರೈತರ ಅಭಿವೃದ್ಧಿ ಮಾಡಲಾಗದೆ ಕೇಂದ್ರದ ವಿರುದ್ಧ ಹೋರಾಟಕ್ಕಿಳಿಸಿದೆ. ಪಂಜಾಬ್ ಸರ್ಕಾರ ಆಟವಾಡುತ್ತಿರುವುದರಿಂದ ಫೇಕ್ ಫಾರ್ಮರ್ಸ್ ದೆಹಲಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಪಂಜಾಬ್ ರಾಜ್ಯ ಹಿಂದುಳಿದಂತೆ ಇಲ್ಲಿ ಆಗಬಾರದು. ಸರಿಯಾದ ನಿರ್ಧಾರ ತೆಗೆದುಕೊಳ್ಳುಬೇಕು. ಕೇಂದ್ರದೊಂದಿಗೆ ಕೈಜೋಡಿಸಲು ರಾಜ್ಯದಲ್ಲೂ ಯೋಗಿಯಂಥವರ ಸಹಕಾರ ಬೇಕು ಹೀಗಾಗಿ ಈ ಬಾರಿ ಲೋಕಸಭಾ ಚುನಾವಣೆಗೆ ಎಚ್ಚೆತ್ತುಕೊಳ್ಳಬೇಕು. ಸ್ವಲ್ಪ ಯಾಮಾರಿದ್ರೆ ಮತ್ತೆ ಹಿಂದೆ ಹೋಗುತ್ತೇವೆ. ಒಳ್ಳೆಯ ನಿರ್ಧಾರ ತೆಗೆದುಕೊಳ್ಳಿ ಎಂದು ಜನರಿಗೆ ಕರೆ ನೀಡಿದರು.

Latest Videos
Follow Us:
Download App:
  • android
  • ios