Asianet Suvarna News Asianet Suvarna News

ಶ್ರೀರಾಮ ಪ್ರಸಾದ ಸ್ವೀಕರಿಸುವ ಮೂಲಕ ಪ್ರಾಣಪ್ರತಿಷ್ಠೆಗೆ ಕೈಗೊಂಡ ಉಪವಾಸ ಪೂರ್ಣಗೊಳಿಸಿದ ಮೋದಿ!

ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆಗೆ 11 ದಿನಗಳ ಕಠಿಣ ವೃತಕೈಗೊಂಡಿದ್ದ ಪ್ರಧಾನಿ ಮೋದಿ, ರಾಮಜನ್ಮಭೂಮಿಯಲ್ಲಿ ಶ್ರೀರಾಮನ ಪ್ರಸಾದ ಸ್ವೀಕರಿಸುವ ಮೂಲಕ ಉಪಾಸ ವೃತ ಪೂರ್ಣಗೊಳಿಸಿದ್ದಾರೆ.

Ayodhya ram mandir inauguration PM Modi Ends 11 days fast at Ramjanmabhoomi premise ckm
Author
First Published Jan 22, 2024, 2:04 PM IST

ಆಯೋಧ್ಯೆ(ಜ.22) ಭವ್ಯ ಶ್ರೀರಾಮ ಮಂದಿರ ಲೋಕಾರ್ಪಣೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅಮೃತ ಹಸ್ತದಿಂದ ರಾಮಲಲ್ಲಾ ಪ್ರಾಣಪ್ರತಿಷ್ಠೆ ನೆರವೇರಿಸಿದ್ದಾರೆ. ರಾಮ ಮಂದಿರ ಪ್ರಾಣಪ್ರತಿಷ್ಠೆ ಹಾಗೂ ಪೂಜಾ ವಿಧಿವಿಧಾನ ಪೂರೈಸಿದ ಪ್ರಧಾನಿ ಮೋದಿ, ರಾಮ ಮಂದಿರ ಆವರಣದಲ್ಲಿ ಆಯೋಜಿಸದ ಕಾರ್ಯಕ್ರಮದಲ್ಲಿ ತಮ್ಮ 11 ದಿನಗಳ ಕಠಿಣ ಉಪವಾಸ ವೃತ ಅಂತ್ಯಗೊಳಿಸಿದ್ದಾರೆ. ಸ್ವಾಮೀಜಿಗಳು ಪ್ರಧಾನಿ ಮೋದಿಗೆ ಶ್ರೀರಾಮನ ಪ್ರಸಾದ ನೀಡಿ ಕಠಿಣ ವೃತ ಪೂರ್ಣಗೊಳಿಸಿದರು.

ಶ್ರೀರಾಮ ಮಂದಿರದಲ್ಲಿನ ಬಾಲರಾಮನ ಪ್ರಾಣಪ್ರತಿಷ್ಠೆ ಸಮಾರಂಭದ ‘ಯಜಮಾನತ್ವ’ ವಹಿಸಿಕೊಂಡಿರುವ ಕಾರಣದಿಂದ  11 ದಿನಗಳ ಕಾಲ ಕಠಿಣ ‘ಯಮ ನಿಯಮ’ ವ್ರತಾಚಾರಣೆ ಕೈಗೊಂಡಿದ್ದರು. ನಿತ್ಯ ಗೋವಿನ ಪೂಜೆ, ಅನ್ನದಾನ ಸೇರಿ ಅನೇಕ ಆಚರಣೆಗಳನ್ನು ಮಾಡಿದ್ದಾರೆ. ವ್ರತಾಚರಣೆ ಮಾಡುತ್ತಿರುವ ಮೋದಿ, ನೆಲದ ಮೇಲೆ ಮಲಗುತ್ತಿದ್ದಾರೆ ಹಾಗೂ ಕೇವಲ ಎಳನೀರು ಮಾತ್ರ ಸೇವಿಸುತ್ತ ಕಠಿಣ ಉಪವಾಸ ಮಾಡಿದ್ದರು. ಆದರೆ ಇದರೊಂದಿಗೆ ಮೋದಿ, ಶಾಸ್ತ್ರಗಳ ಪ್ರಕಾರ ಗೋ ಪೂಜೆ, ಗೋವಿಗೆ ಆಹಾರ ನೀಡುವುದು, ಅನ್ನದಾನ ಮತ್ತು ವಸ್ತ್ರದಾನ ಸೇರಿದಂತೆ ಇತರ ಅನೇಕ ಆಚರಣೆಯನ್ನು ಮಾಡಿದ್ದಾರೆ.

ಮಂದಿರ್ ವಹೀ ಬನಾಯೇಂಗೆ, 33 ವರ್ಷಗಳ ಬಿಜೆಪಿ ಭರವಸೆ ಈಡೇರಿಸಿದ ಪ್ರಧಾನಿ ಮೋದಿ!

ಕಳೆದ 11 ದಿನಗಳಿಂದ ರಾಮ ಮಂದಿ ಪ್ರತಿಷ್ಠಾಪನೆಗಾಗಿ ಕೈಗೊಂಡ ವೃತದ ಕುರಿತು ಮಾತನಾಡಿದ ಸ್ವಾಮೀಜಿ, 20 ದಿನಗಳ ಮೊದಲು ಮೋದಿ ಪ್ರಾಣಪ್ರತಿಷ್ಠೆ ನಾನು ಕೈಗೊಳ್ಳಬೇಕಾದ ವೃತಗಳೇನು, ಸಿದ್ಧತೆಗಳೇನು ಎಂದು ಕೇಳಿದ್ದರು. ನಾನು ಪ್ರಾಣಪ್ರತಿಷ್ಠೆ ನಿಯಮಗಳನ್ನು ತಿಳಿಸಿದ್ದೆ. ಇದೇ ವೇಳೆ ಪ್ರಧಾನಿ 3 ದಿನ ಉಪವಾಸ ಮಾಡಿದರೆ ಸಾಕು ಎಂದು ಸಲಹೆ ನೀಡಿದ್ದೆ. ಆದರೆ ಪ್ರಧಾನಿ ಮೋದಿ 11 ದಿನಗಳ ಕಠಿಣ ಉಪಾಸ ಮಾಡಿದ್ದಾರೆ ಎಂದಿದ್ದಾರೆ. ಎಲ್ಲರ ಸಾಧು ಸಂತರ ಅನುಮತಿಯೊಂದಿಗೆ ಪ್ರಧಾನಿ ಮೋದಿಯ ಕಠಿಣ ಉಪವಾಸ ವೃತ್ಯವನ್ನು ಪೂರ್ಣಗೊಳಿಸುತ್ತಿದ್ದೇನೆ ಎಂದು ಶ್ರೀರಾಮನ ಪ್ರಸಾದ ನೀಡಿದರು.

11 ದಿನಗಳ ಕಠಿಣ ವೃತದಲ್ಲಿ ಪ್ರಧಾನಿ ಮೋದಿ ಶ್ರೀರಾಮ ಹಾಗೂ ರಾಮಾಯಣ ಕಾಲಕ್ಕೆ ಸಂಬಂಧಿಸಿದ ದೇವಸ್ಥಾನಕ್ಕ ಭೇಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಹಾರಾಷ್ಟ್ರದ ರಾಮಕುಂಡ, ನಾಸಿಕ್‌ನ ಕಾಳರಾಮ ದೇವಸ್ಥಾನ, ಲೇಪಾಕ್ಷಿಯ ವೀರ ಭದ್ರೇಶ್ವರ ಮಂದಿರ, ಕೇರಳದ ಗುರುವಾಯೂರು ಹಾಗೂ ಶ್ರೀ ರಾಮಸ್ವಾಮಿ ಮಂದಿರ, ರಾಮೇಶ್ವರಂ ರಂಗನಾಥ ಸ್ವಾಮಿ ದೇವಸ್ಥಾನ, ದನುಷ್ಕೋಡಿ, ರಾಮಸೇತು ಸೇರಿದಂತೆ ಹಲವು ದೇವಸ್ಥಾನ ಹಾಗೂ ಶ್ರೀರಾಮ ಭೇಟಿ ನೀಡಿದ ಸ್ಥಳಗಳಿಗೂ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.

ಪ್ರಾಣಪ್ರತಿಷ್ಠೆ ಬೆನ್ನಲ್ಲೇ ದರ್ಶನ ನೀಡಿದ ಪ್ರಭು ಶ್ರೀರಾಮ, ಎಲ್ಲೆಡೆ ಜೈಶ್ರೀರಾಮ್ ಘೋಷಣೆ !   

Latest Videos
Follow Us:
Download App:
  • android
  • ios