Asianet Suvarna News Asianet Suvarna News

ಆಯೋಧ್ಯೆ ರಾಮ ಮಂದಿರಕ್ಕೆ ಕಳೆದ 8 ದಿನದಲ್ಲಿ ಭಕ್ತರು ನೀಡಿದ ದೇಣಿಗೆ ಎಷ್ಟು?

ಆಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೊಂಡು ವಾರಗಳು ಕಳೆದಿದೆ. ಪ್ರತಿ ದಿನ ಲಕ್ಷಾಂತರ ಭಕ್ತರು ರಾಮಲಲ್ಲಾ ದರ್ಶನ ಪಡೆಯುತ್ತಿದ್ದಾರೆ. ಇದೀಗ ಕಳೆದ 8 ದಿನದಲ್ಲಿ ರಾಮ ಮಂದಿರಕ್ಕೆ ನೀಡಿದ ದೇಣಿಗೆ ಮೊತ್ತ ಬಹಿರಂಗವಾಗಿದೆ.

Ayodhya Ram mandir Devotees donate average rs 3 lakh per day in last 8 days says report ckm
Author
First Published Jan 30, 2024, 8:11 PM IST

ಆಯೋಧ್ಯೆ(ಜ.30) ಶ್ರೀರಾಮನ ದರ್ಶನ ಪಡೆಯಲು ದೇಶದ ಮೂಲೆ ಮೂಲೆಯಿಂದ ವಿದೇಶಗಳಿಂದ ಆಯೋಧ್ಯೆಗೆ ಭಕ್ತರು ಧಾವಿಸುತ್ತಿದ್ದಾರೆ. ಪ್ರತಿ ದಿನ ಲಕ್ಷಾಂತರ ಭಕ್ತರು ಆಗಮಿಸಿ ಬಾಲಕ ರಾಮನ ದರ್ಶನ ಪಡೆಯುತ್ತಿದ್ದಾರೆ. ಇದೇ ವೇಳೆ ಹನುಮಾನ್ ಗುಡಿ ಸೇರಿದಂತೆ ಆಯೋಧ್ಯೆಯ ಇತರ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ರಾಮ ಮಂದಿರ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾದ ಬಳಿಕ ದಾಖಲೆ ಪ್ರಮಾಣದಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇದೀಗ ಕಳೆದ 8 ದಿನಗಳಲ್ಲಿ ರಾಮ ಮಂದಿರಕ್ಕೆ ಬಂದಿರುವ ದೇಣಿಕೆ ಮೊತ್ತವನ್ನೂ ಟ್ರಸ್ಟ್ ಬಹಿರಂಗಪಡಿಸಿದೆ.

ಜನವರಿ 22;  6 ಲಕ್ಷ ರೂಪಾಯಿ ನಗದು, 2 ಲಕ್ಷ ರೂಪಾಯಿ ಮೌಲ್ಯದ ಚೆಕ್
ಜನವರಿ 23 ; 27 ಲಕ್ಷ ರೂಪಾಯಿ ನಗದು, 2.62 ಕೋಟಿ ರೂಪಾಯಿ ಮೌಲ್ಯದ ಚೆಕ್
ಜನವರಿ 24 ; 15 ಲಕ್ಷ ರೂಪಾಯಿ ನಗದು, 15 ಲಕ್ಷ ರೂಪಾಯಿ ಮೌಲ್ಯದ ಚೆಕ್
ಜನವರಿ 25 ; 8 ಲಕ್ಷ ರೂಪಾಯಿ ನಗದು, 40,000 ರೂಪಾಯಿ ಮೌಲ್ಯದ ಚೆಕ್
ಜನವರಿ 26 ; 5.5 ಲಕ್ಷ ರೂಪಾಯಿ ನಗದು, 1,04,60,000 ರೂಪಾಯಿ ಮೌಲ್ಯದ ಚೆಕ್
ಜನವರಿ 27 ; 8 ಲಕ್ಷ ರೂಪಾಯಿ ನಗದು, 13 ಲಕ್ಷ ರೂಪಾಯಿ ಮೌಲ್ಯದ ಚೆಕ್
ಜನವರಿ 28 ; 12 ಲಕ್ಷ ರೂಪಾಯಿ ನಗದು, 12 ಲಕ್ಷ ರೂಪಾಯಿ ಮೌಲ್ಯದ ಚೆಕ್
ಜನವರಿ 29 ; 5 ಲಕ್ಷ ರೂಪಾಯಿ ನಗದು, 7  ಲಕ್ಷ ರೂಪಾಯಿ ಮೌಲ್ಯದ ಚೆಕ್

 

ಕೇವಲ 6 ದಿನದಲ್ಲಿ 19 ಲಕ್ಷ ಭಕ್ತರು ಆಯೋಧ್ಯೆ ರಾಮ ಮಂದಿರ ದರ್ಶನ, ಕೊರೆವ ಚಳಿಯಲ್ಲೂ ದಾಖಲೆ!

ಇದರ ಜೊತೆಗೆ ಚಿನ್ನ, ಬೆಳ್ಳಿ, ವಜ್ರ ಸೇರಿದಂತೆ ಹಲವು ದುಬಾರಿ ವಸ್ತುಗಳು ದೇಣಿಗೆಯಾಗಿ ಭಕ್ತರು ನೀಡಿದ್ದಾರೆ. ದೇವಸ್ಥಾನದಲ್ಲಿ 6 ದೇಣಿಕೆ ಕೌಂಟರ್ ಹಾಗೂ 4 ಡೇಣಿಗೆ ಬಾಕ್ಸ್‌ಗಳನ್ನು ಇಡಲಾಗಿದೆ. ಸರಾಸರಿ ಪ್ರಕಾರ ಪ್ರತಿ ದಿನ 3 ಲಕ್ಷ ರೂಪಾಯಿ ನಗದು ಹಣ ದೇಣಿಗೆ ರೂಪದಲ್ಲಿ ಭಕ್ತರಿಂದ ಸಂಗ್ರಹವಾಗುತ್ತಿದೆ.

ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ಮಾಡುವ ಮೂಲಕ ಮಂದಿರವನ್ನು ಲೋಕಾರ್ಪಣೆಗೊಳಿಸಿದ್ದರು. ಪ್ರಾಣಪ್ರತಿಷ್ಠೆ ದಿನ ಆಹ್ವಾನಿತ ಗಣ್ಯರಿಗೆ ರಾಮ ಮಂದಿರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಜನವರಿ 23ರಿಂದ ರಾಮ ಮಂದಿರ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿತ್ತು.  ಉದ್ಘಾಟನೆಗೊಂಡ ಅಯೋಧ್ಯಾ ರಾಮ ಮಂದಿರದಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಆರಂಭಿಕ 6 ದಿನದಲ್ಲಿ 19 ಲಕ್ಷ ಭಕ್ತರು ಬಾಲಕ ರಾಮನ ದರ್ಶನ ಪಡೆದಿದ್ದಾರೆ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.

 

ಅಯೋಧ್ಯೆಗೆ ಹರಿದು ಬರುತ್ತಿರುವ ಜನಸಾಗರ : ಉತ್ತರಪ್ರದೇಶ ಬೊಕ್ಕಸಕ್ಕೆ ಹೆಚ್ಚುವರಿ 1 ಲಕ್ಷ ಕೋಟಿ ರು. ಆದಾಯ

ಮಂಗಳವಾರದಿಂದ (ಜ.23ರಿಂದ) ಆರಂಭವಾದ ಸಾರ್ವಜನಿಕ ದರ್ಶನದಲ್ಲಿ ಮೊದಲ ದಿನ ಬರೋಬ್ಬರಿ 5 ಲಕ್ಷ ಭಕ್ತರು ದರ್ಶನ ಪಡೆದಿದ್ದರು. ಇದರ ಮುಂದುವರಿದ ಭಾಗವಾಗಿ ಭಾನುವಾರದವರೆಗೆ 15 ಲಕ್ಷ ಭಕ್ತರು ಸ್ವಾಮಿಯ ದರ್ಶನ ಪಡೆದಿದ್ದಾರೆ. ಈಗ ಒಟ್ಟು 19 ಲಕ್ಷ ಭಕ್ತರು ಆಗಮಿಸಿ ಬಾಲಕ ರಾಮನ ದರ್ಶನ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

Follow Us:
Download App:
  • android
  • ios