ಸುಪ್ರೀಂ ತೀರ್ಪಿನ ಬಳಿಕ ಹೇಗಿದೆ ಅಯೋಧ್ಯೆ ಜನಜೀವನ
ಅಯೋಧ್ಯೆಯ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಇಲ್ಲಿನ ಜನಜೀವನ ಸಹಜ ಸ್ಥಿತಿಯಲ್ಲಿ ನಡೆದುಕೊಂಡು ಹೋಗುತ್ತಿದೆ. ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಎಲ್ಲರೂ ತುಂಬು ಹೃದಯದಿಂದಲೇ ಸ್ವಾಗತ ಮಾಡಿದ್ದಾರೆ.
ಅಯೋಧ್ಯೆ [ನ.11] : ಶತಮಾನಗಳ ಇತಿಹಾಸ ಹೊಂದಿದ್ದ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ ಕುರಿತು ಸುಪ್ರೀಂಕೋರ್ಟ್‌ನ ಐತಿಹಾಸಿಕ ತೀರ್ಪು ಹೊರಬಿದ್ದ ಮಾರನೇ ದಿನವಾದ ಭಾನುವಾರ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಸಾಮಾನ್ಯ ಸ್ಥಿತಿ ನೆಲೆಸಿತ್ತು. ಭಾನುವಾರ ರಜಾದಿನವಾದ ಕಾರಣ, ಮುಂಜಾನೆ ವೇಳೆ ರಸ್ತೆಗಳಲ್ಲಿ ವಾಹನ, ಜನ ಸಂಚಾರ ಕಡಿಮೆ ಇತ್ತಾದರೂ, ಬಳಿಕ ಜನರು ತಮ್ಮ ಎಂದಿನ ಚಟುವಟಿಕೆಗಳಲ್ಲಿ ತೊಡಗಿದರು.
ಇಡೀ ದೇಶವನ್ನೇ ತುದಿಗಾಲಲ್ಲಿ ನಿಲ್ಲಿ ಸಿದ್ದ, ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ತೀರ್ಪು ಶನಿವಾರ ಪ್ರಕಟವಾದರೂ, ತೀರ್ಪಿ ನ ಪರವಾಗಿ ಅಥವಾ ವಿರುದ್ಧವಾಗಿ ಯಾವುದೇ ಬಹಿರಂಗ ಹೇಳಿಕೆಗಳು, ಆಚರಣೆ ಗಳನ್ನು ನಡೆಸುವುದರಿಂದ ದೂರವೇ ಉಳಿಯುವ ಮೂಲಕ ಸ್ಥಳೀಯ ಹಿಂದೂ- ಮುಸ್ಲಿಂ ಸಮುದಾಯದ ಜನತೆ ಅಪರೂಪದ ಕೋಮು ಸೌಹಾರ್ದತೆ ಮೆರೆದರು.
ಇನ್ನು ಭಾರೀ ಪ್ರಮಾಣದ ಭಕ್ತಾದಿಗಳು ನಗರದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದರು. ಹನುಮಾನ್‌ಗಢಿ, ನಯಾ ಘಾಟ್ ಪ್ರದೇಶಗಳಲ್ಲಿ ಜನರು ಮುಂಜಾನೆ ಯಿಂದಲೇ ರಾಮ ಮತ್ತು ಹನುಮಂತನ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ- ಪ್ರಾರ್ಥನೆ ಸಲ್ಲಿಸಿದರು.
ನಗರದ ರಿಕಬ್‌ಗಂಜ್ ಪ್ರದೇಶದಲ್ಲಿ ಬೆಳಗ್ಗೆ ಜನರು ದಿನಪತ್ರಿಕೆಗಳನ್ನು ಓದುವುದರಲ್ಲಿ ಆಸಕ್ತರಾಗಿದ್ದರು. ಅಯೋಧ್ಯೆ ತೀರ್ಪಿನ ಬಗ್ಗೆ ಪತ್ರಿಕೆಗಳು ಏನು ವಿಶ್ಲೇಷಣೆ ಮಾಡಿವೆ ಎಂದು ಕುತೂಹಲದಿಂದ ಓದುತ್ತಿದ್ದರು.
ಈ ಉಸಾಬರಿ ಬೇಕಿತ್ತಾ?: ಅಯೋಧ್ಯೆ ತೀರ್ಪು ವ್ಯಾಖ್ಯಾನಿಸಿ ಬೈಸಿಕೊಂಡ ಪಾಕಿಸ್ತಾನ!...
ಹಿಂದೂಗಳು ಮತ್ತು ಮುಸ್ಲಿಮರು ಹೆಚ್ಚಿರುವ ಸ್ಥಳಗಳಲ್ಲಿ ವ್ಯಾಪಾರ ವಹಿವಾಟು ಎಂದಿನಂತೆ ನಡೆದಿತ್ತು. ಬಹುತೇಕ ಕಡೆ ಅಯೋಧ್ಯೆ ತೀರ್ಪಿನ ಬಗ್ಗೆ ವಿಶ್ಲೇಷಣೆಗಳು ನಡೆಯು ತ್ತಿದ್ದದ್ದು ಸಾಮಾನ್ಯವಾಗಿತ್ತು. ಅಯೋಧ್ಯೆಯ ಹೋಟೆಲ್ ಒಂದರ ಮ್ಯಾನೇಜರ್ ಸಂದೀಪ್ ಸಿಂಗ್ ಅವರು, ‘ಅಯೋಧ್ಯಾವಾಸಿಗಳಿಗೆ ಇದೊಂದು ಅಪರೂಪದ ಭಾನುವಾರ. ಸೂರ್ಯ ಮತ್ತು ಪವನದೇವ (ಹನುಮಂತ) ನಮ್ಮ ಮೇಲೆ ದಯೆ ತೋರಿದ್ದಾರೆ.
ಅಯೋಧ್ಯೆ ವಿವಾದ ಶಾಶ್ವತವಾಗಿ ಶಮನಗೊಂಡಿದೆ’ ಎಂದು ಹರ್ಷಿಸಿದರು. ‘ಅಯೋಧ್ಯೆಗೆ ಇನ್ನು ಸುವರ್ಣ ಯುಗ’ ಎಂದು ಸನೂಪ್ ಸೈನಿ ಎಂಬ ಸಿಹಿತಿಂಡಿ ವ್ಯಾಪಾರಿ ಖುಷಿಪಟ್ಟರು. ಇದೇ ವೇಳೆ, ಕೆಲವು ಭಕ್ತರು ತಾವು ಸುಪ್ರೀಂ ಕೋರ್ಟ್ ತೀರ್ಪು ಬಂದಾಗಲೇ ಅಯೋಧ್ಯೆ ಯಲ್ಲಿದ್ದುದಕ್ಕೆ ಹರ್ಷ ವ್ಯಕ್ತಪಡಿಸಿದರು.
ಅಯೋಧ್ಯೆ ಅಂತಿಮ ತೀರ್ಪು ಪ್ರಕಟವಾಗಲಿದೆ ಎಂಬ ವಿಷಯ ಗೊತ್ತಾದಾಗಿನಿಂದಲೇ ನಗರದಲ್ಲಿ ನಿಷೇಧಾಜ್ಞೆ ವಿಧಿಸಲಾಗಿತ್ತು. ಭಾರೀ ಭದ್ರತೆ ಹಾಕಲಾಗಿತ್ತು.