* ದೇಗುಲ ನಗರಿ ಅಯೋಧ್ಯೆಗೆ ರಾಷ್ಟ್ರಪತಿ ಭೇಟಿ* ರಾಮನಿಲ್ಲದೆ ಅಯೋಧ್ಯೆ ಇಲ್ಲ* ರಾಮಲಲ್ಲಾಗೆ ನಮನ

ಲಖನೌ(ಆ.30): ರಾಮನಿಲ್ಲದೆ ಅಯೋಧ್ಯೆಯೇ ಇಲ್ಲ. ರಾಮನಿದ್ದಲ್ಲಿಯೇ ಅಯೋಧ್ಯೆ ಎಂದು ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಬಣ್ಣಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉತ್ತರಪ್ರದೇಶ ಪ್ರವಾಸದ ಭಾಗವಾಗಿ ಭಾನುವಾರ ಅಯೋಧ್ಯೆಗೆ ಭೇಟಿ ನೀಡಿದ್ದ ಅವರು ರಾಮಾಯಣ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ‘ರಾಮ ಈ ನಗರದಲ್ಲಿ ಖಾಯಂ ಆಗಿ ನೆಲೆಸಿದ್ದಾನೆ. ಹೀಗಾಗಿ ನಿಜ ಅರ್ಥದಲ್ಲಿ ಇದು ಅಯೋಧ್ಯೆ ಎಂದರು. ಜೊತೆಗೆ ಶ್ರೀರಾಮ ಮತ್ತು ರಾಮ ಕಥಾ ಕುರಿತಾಗಿ ಸಾಮಾನ್ಯ ಜನರಲ್ಲಿ ಇರುವ ಗೌರವ ಮತ್ತು ಪ್ರೀತಿ ನಮ್ಮ ಕುಟುಂಬದವರಿಗೂ ಇತ್ತು. ಇದೇ ಕಾರಣಕ್ಕೆ ನನಗೆ ಈ ಹೆಸರು ಇಟ್ಟಿದ್ದಾರೆ ಎಂದೆನಿಸುತ್ತದೆ’ ಎಂದರು.

ಬಳಿಕ ಅವರು ಭವ್ಯ ದೇಗುಲ ನಿರ್ಮಾಣವಾಗುತ್ತಿರುವ ಸ್ಥಳದ ಸಮೀಪದಲ್ಲೇ ಇರುವ ಮೂಲವಿಗ್ರಹ ರಾಮ್‌ಲಲ್ಲಾ ಇಟ್ಟಿರುವ ಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.