ಮಹಮ್ಮದ್‌ ಜುಬೇರ್‌ ಬಂಧನದಿಂದ ಪತ್ರಿಕಾ ಸ್ವಾತಂತ್ರ್ಯ ಹರಣ ಎಂದಿದ್ಧ ಜರ್ಮನಿಯ ಹೇಳಿಕೆಗೆ ಇದು ನಮ್ಮ ಆಂತರಿಕ ವಿಷಯ ಎಂದು ಭಾರತದ ವಿದೇಶಾಂಗ ಸಚಿವಾಲಯ ಖಾರವಾಗಿ ಪ್ರತಿಕ್ರಿಯಿಸಿದೆ.

ನವದೆಹಲಿ (ಜು.8): ‘ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕ ಮಹಮ್ಮದ್‌ ಜುಬೇರ್‌ ಬಂಧನದಿಂದ ಪತ್ರಿಕಾ ಸ್ವಾತಂತ್ರ್ಯ ಹರಣವಾಗಿದೆ’ ಎಂದಿದ್ದ ಜರ್ಮನಿಯ ಹೇಳಿಕೆಗೆ ಭಾರತ ವಿದೇಶಾಂಗ ಸಚಿವಾಲಯ ಖಾರವಾಗಿ ಪ್ರತಿಕ್ರಿಯಿಸಿದೆ. ಇದು ಭಾರತದ ಆಂತರಿಕ ವಿಷಯವಾಗಿದೆ. ಅಲ್ಲದೇ ಕೋರ್ಚ್‌ನಲ್ಲಿ ವಿಚಾರಣೆ ಎದುರಿಸುತ್ತಿರುವ ಪ್ರಕರಣದ ಕುರಿತು ಹೇಳಿಕೆಗಳನ್ನು ನೀಡುವುದು ಸಮಂಜಸವಲ್ಲ. ನಮ್ಮ ನ್ಯಾಯಿಕ ವ್ಯವಸ್ಥೆ ಸ್ವತಂತ್ರವಾಗಿದೆ.

ಯಾವುದೇ ಟೀಕೆಗಳು ಪರಿಣಾಮಬೀರುವುದಿಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಗ್ಚಿ ಹೇಳಿದ್ದಾರೆ. ಮುಕ್ತ ಪತ್ರಿಕೋದ್ಯಮವು ಯಾವುದೇ ದೇಶಕ್ಕೆ ಅತ್ಯಂತ ಅವಶ್ಯಕವಾದುದಾಗಿದೆ. ಇದಕ್ಕಾಗಿ ಯಾರನ್ನು ಬಂಧಿಸಬಾರದು. ದೆಹಲಿಯಲ್ಲಿರುವ ನಮ್ಮ ರಾಯಭಾರಿ ಕಚೇರಿ ಈ ಪ್ರಕರಣವನ್ನು ಗಮನಿಸುತ್ತದೆ ಎಂದು ಜರ್ಮನಿಯ ವಿದೇಶಾಂಗ ಸಚಿವಾಲಯದ ವಕ್ತಾರ ಹೇಳಿದ್ದರು.

ಆಲ್ಟ್‌ ನ್ಯೂಸ್‌ನ ಜುಬೇರ್‌ಗೆ ಪಾಕ್‌, ಸಿರಿಯಾ, ಗಲ್ಫ್‌ ರಾಷ್ಟ್ರಗಳ ದೇಣಿಗೆ!

ನನಗೆ ಜೀವ ಬೆದರಿಕೆ ಇದೆ, ಜಾಮೀನು ಕೊಡಿ: ಸುಪ್ರೀಂಗೆ ಜುಬೇರ್‌
ಟ್ವೀಟ್‌ ಮೂಲಕ ಹಿಂದೂ ಸಮುದಾಯದವರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆಲ್ಟ್‌ ನ್ಯೂಸ್‌ ಸಂಸ್ಥಾಪಕ ಮೊಹಮ್ಮದ್‌ ಜುಬೇರ್‌ ಜಾಮೀನಿಗಾಗಿ ಸುಪ್ರೀಂ ಕೋರ್ಟಿಗೆ ಮೊರೆ ಹೋಗಿದ್ದಾರೆ.

‘ಜುಬೇರ್‌ಗೆ ಜೀವ ಬೆದರಿಕೆ ಬರುತ್ತಿವೆ. ಅವರ ವೈಯಕ್ತಿಕ ಸುರಕ್ಷತೆ ಬಗ್ಗೆ ಆತಂಕಗಳಿವೆ. ಜಾಮೀನು ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು’ ಎಂದು ಜುಬೇರ್‌ ಪರ ವಕೀಲರಾದ ಕೋಲಿನ್‌ ಗೊನ್ಸಾಲ್ವಿಸ್‌ ಮನವಿ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಚ್‌ ಶುಕ್ರವಾರ ವಿಚಾರಣೆ ನಡೆಸಲು ಒಪ್ಪಿಕೊಂಡಿದೆ. ಕಳೆದ ವಾರ ದಿಲ್ಲಿ ಪೊಲೀಸರು ಜುಬೇರ್‌ನನ್ನು ಬಂಧಿಸಿದ್ದರು. ಉತ್ತರ ಪ್ರದೇಶದ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿತ್ತು.

ಮುಲ್ಲಾ ಒಮರ್‌ ಕಾರು ಉತ್ಖನನ ಮಾಡಿದ ತಾಲಿಬಾನ್‌!

ಜುಬೇರ್‌ಗೆ ಪಾಕ್‌, ಸಿರಿಯಾದಿಂದ ದೇಣಿಗೆ: ಆಲ್ಟ್‌ ನ್ಯೂಸ್‌ ಸಂಸ್ಥಾಪಕ, ಪತ್ರಕರ್ತ ಮೊಹಮ್ಮದ್‌ ಜುಬೇರ್‌ ಪಾಕಿಸ್ತಾನ, ಸಿರಿಯಾ ಹಾಗೂ ಕೊಲ್ಲಿ ರಾಷ್ಟ್ರಗಳಿಂದ ಲಕ್ಷಾಂತರ ರುಪಾಯಿ ದೇಣಿಗೆ ಸ್ವೀಕರಿಸಿದ್ದನ್ನು ದೆಹಲಿ ಪೊಲೀಸರು ಬಯಲಿಗೆಳೆದಿದ್ದರು.

ಜುಬೇರ್‌ ಅವರ ಆಲ್ಟ್‌ ನ್ಯೂಸ್‌ನ ಮಾತೃಸಂಸ್ಥೆಯಾದ ಪ್ರಾವ್ಡಾ ಮೀಡಿಯಾಗೆ ಪಾಕಿಸ್ತಾನ, ಸಿರಿಯಾ ಸೇರಿದಂತೆ ವಿದೇಶಿ ಮೂಲಗಳಿಂದ 2 ಲಕ್ಷ ರು. ದೇಣಿಗೆ ಬಂದಿದೆ. ಆದರೆ ಹಣಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ಜುಬೇರ್‌ ಅಳಿಸಿಹಾಕಿದ್ದಾರೆ. ಹೀಗಾಗಿ ಈ ಹಣದ ಮೂಲದ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದರು.

ಹೀಗಾಗಿಯೇ ಜುಬೇರ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪೊಲೀಸರು ವಿರೋಧಿಸಿದ್ದರು. ಆದ್ದರಿಂದ ದಿಲ್ಲಿ ನ್ಯಾಯಾಲಯ ಜುಬೇರ್‌ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿತ್ತು.

ಜುಬೇರ್‌ ಪಾಕಿಸ್ತಾನ, ಸಿರಿಯಾದಿಂದ ದೇಣಿಗೆ ಪಡೆದಿದ್ದು ತನಿಖೆಯ ವೇಳೆ ಬೆಳಕಿಗೆ ಬಂದಿದ್ದು, ಇದು ಕೇವಲ ಟ್ವೀಟ್‌ ಪ್ರಕರಣವಾಗಿ ಉಳಿದಿಲ್ಲ’ ಎಂದು ಪೊಲೀಸರು ಹೇಳಿದ್ದಾರೆ.