Asianet Suvarna News Asianet Suvarna News

ಸಿಕ್ಕಿಂ ನಾಥುಲಾ ಪಾಸ್ ಬಳಿ ಹಿಮಾಪಾತ, 7 ಪ್ರವಾಸಿಗರ ಸಾವು

ಈಶಾನ್ಯ ರಾಜ್ಯ ಸಿಕ್ಕಿಂನ ಗ್ಯಾಂಗ್ಟಕ್‌ ಬಳಿ ಭಾರೀ ಹಿಮಪಾತ ಸಂಭವಿಸಿದ್ದು, 100ಕ್ಕೂ ಅಧಿಕ ಪ್ರವಾಸಿಗರು ಕಣ್ಮರೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗಿದ್ದು, ಏಳು ಮಂದಿ ಸಾವು ಕಂಡಿರುವ ಬಗ್ಗೆ ವರದಿಯಾಗಿದೆ.
 

avalanche hits Sikkim Nathula border area7 tourists dead san
Author
First Published Apr 6, 2023, 4:52 PM IST

ಸೃಷ್ಟಿ. ಆರ್. ಜೋಯಿಸ್
ತೃತೀಯ ಬಿಎ ವಿದ್ಯಾರ್ಥಿ, ಮಹಾಜನ ಕಾಲೇಜು, ಮೈಸೂರು

ನವದೆಹಲಿ (ಏ.6): ಭಾರತ-ಚೀನಾದ ಗಡಿ ಭಾಗದಲ್ಲಿರುವ ನಾಥು ಲಾ ಪಾಸ್ ಬಳಿ ಭಾರೀ ಹಿಮಪಾತ ಸಂಭವಿಸಿದೆ. ಇದರಿಂದಾಗಿ ಟ್ರಕ್ಕಿಂಗ್‌ ಹಾಗೂ ಪ್ರವಾಸಕ್ಕಾಗಿ ತೆರಳಿದ್ದ 150ಕ್ಕೂ ಹೆಚ್ಚು ಪ್ರವಾಸಿಗರು ನಾಪತ್ತೆಯಾಗಿದ್ದಾರೆ.  ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗಿದ್ದು, ಏಳು ಪ್ರವಾಸಿಗರು ಸಾವು ಕಂಡಿದ್ದಾರೆ. ಗಾಯಗೊಂಡಿರುವ ಹೆಚ್ಚಿನವರನ್ನು ಸ್ಥಲೀಯ ಆಸ್ಪತ್ರೆಗೆ ರವಾನಿಸಲಾಗಿದೆ. 'ಎಲ್ಲ ಪ್ರವಾಸಿಗರು ಮತ್ತು  ವಾಹನಗಳನ್ನು ಲೆಕ್ಕ ಹಾಕಲಾಗಿದೆ. ಹವಾಮಾನ ವೈಪರಿತ್ಯದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿದ್ದು, ಮತ್ತೆ ಮುಂದುವರಿಸಲಿದ್ದೇವೆ. ಗಾಯಗೊಂಡ ಕೆಲವು ಪ್ರವಾಸಿಗರು ಚೇತರಿಸಿಕೊಂಡಿದ್ದು, ವಿವರಗಳನ್ನು ಶೀಘ್ರವೇ ಹಂಚಿಕೊಳ್ಳಲಾಗುವುದು," ಎಂದು ಎನ್‌ಡಿಆರ್‌ಎಫ್‌ ತಿಳಿಸಿದೆ. ಗಡಿ ಭಾಗಗಳಲ್ಲಿ ಪ್ರತಿಕೂಲ ಹವಮಾನವಿದ್ದ ಕಾರಣ ರಕ್ಷಣಾ ಕಾರ್ಯಾಚರಣೆ ವಿಳಂಬವಾಗಿತ್ತು ಎಂದು ವರದಿಯಾಗಿದೆ.
ಭಾರತೀಯ ಸೇನೆ, ರಾಜ್ಯ ವಿಪತ್ತು ನಿರ್ವಹಣಾ ತಂಡ ಮತ್ತು ಪೊಲೀಸರು ಜಂಟಿಯಾಗಿ ನಾಪತ್ತೆಯಾದವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಿಮಪಾತವಾದ ಪ್ರದೇಶ ವಿಡಿಯೋಗಳ ಅಪಘಾತದ ಪ್ರಮಾಣವನ್ನು ಸಾರಿ ಹೇಳುವಂತಿದೆ.

ಬಾರ್ಡರ್ ರೋಡ್ ಆರ್ಗನೈಸೇಷನ್ (BRO) ಪ್ರಕಾರ, ಗ್ಯಾಂಗ್ಟಕ್‌ನಿಂದ ನಾಥುಲಾ ಪಾಸ್‌ಗೆ ಸಂಪರ್ಕಿಸುವ ಜವಾಹರಲಾಲ್ ನೆಹರು ರಸ್ತೆಯ 14ನೇ ಮೈಲಿಯಲ್ಲಿ ಈ ಹಿಮಪಾತ ಸಂಭವಿಸಿದೆ. ಘಟನೆಯಲ್ಲಿ ಸುಮಾರು 20-30 ಪ್ರವಾಸಿಗರು ಸಿಕ್ಕಿಹಾಕಿಕೊಂಡಿದ್ದು, ಐದಾರು ವಾಹನಗಳು ಹಿಮದ ಅಡಿಯಲ್ಲಿ ಸಿಕ್ಕಿ ಹಾಕಿಕೊಂಡಿರಬಹುದೆಂದು ಶಂಕಿಸಲಾಗಿದೆ. ಕೆಲವರನ್ನು ರಕ್ಷಿಸಲಾಗಿದೆ. ಸಮೀಪವೇ ಇದ್ದ ಸೇನಾ ವೈದ್ಯಕೀಯ ಸೌಲಭ್ಯವನ್ನು ತುರ್ತಾಗಿ ದುರಂತ ನಡೆದ ಸ್ಥಳಕ್ಕೆ ಕೊಂಡೊಯ್ಯಲಾಗಿದೆ. ಕೆಲವರಿಗೆ ಪ್ರಂತ ಚಿಕಿತ್ಸೆ ನೀಡಿದ ಬಳಿಕ ಗ್ಯಾಂಗ್ಟಕ್‌ಗೆ ರವಾನಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ದುರಂತದ ಕುರಿತಾಗಿ ಟ್ವೀಟ್‌ ಮಾಡಿದ್ದು, 'ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲ ನೆರವು ನೀಡಲಾಗುತ್ತಿದೆ. ದುರಂತದಲ್ಲಿ ಆದ ಸಾವಿನಿಂದ ಬಹಳ ಬೇಸರವಾಗಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಬರೆದುಕೊಂಡಿದ್ದಾರೆ.

Breaking: ಸಿಕ್ಕಿಂನಲ್ಲಿ ಭಾರೀ ಹಿಮಪಾತ, 6 ಮಂದಿ ಪ್ರವಾಸಿಗರ ಸಾವು, 150 ಜನರ ಹಿಮಸಮಾಧಿ

'ಸಿಕ್ಕಿಂನಲ್ಲಿ ಹಿಮಾಪಾತದಿಂದ ಸ್ಥಳಿಯರು ಮತ್ತು ಪ್ರವಾಸಿಗರು ಸಂಕಷ್ಟಕ್ಕೀಡಾಗಿದ್ದಾರೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪಗಳು ಮತ್ತು ಗಾಯಗೊಂಡವರು ಶೀಘ್ರದಲ್ಲೇ ಚೇತರಿಸಿಕೊಳ್ಳಲೆಂದು ಹಾರೈಸುತ್ತೇನೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುತ್ತಿದೆ. ಕೇಂದ್ರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ,' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಸಿಕ್ಕಿಂ ರಾಜ್ಯದ ಜನರು ಎಂದಿಗೂ ನೀಡಲ್ಲ Income Tax..

ನಾಥು ಲಾ ಪಾಸ್, ಸಮುದ್ರ ಮಟ್ಟದಿಂದ 4,310 ಮೀಟರ್ (14,140 ಅಡಿ) ಎತ್ತರದಲ್ಲಿದೆ. ಚೀನಾದ ಗಡಿಯಲ್ಲಿರುವ ಈ ಪ್ರಮುಖ ಪ್ರವಾಸಿ ತಾಣ ಟ್ರೆಕ್ಕಿಂಗ್ ಪ್ರಿಯರಿಗಂತೂ ಸ್ವರ್ಗ ಎನಿಸಿದೆ
 

Follow Us:
Download App:
  • android
  • ios