Asianet Suvarna News Asianet Suvarna News

ಗೂಗಲ್ ಪೇ, ಪೇಟಿಎಂ ಹಳೇ ಮಾತು ಕ್ರಿಪ್ಟೋಕರೆನ್ಸಿ ಸ್ವೀಕಾರ ಎಂದ ಆಟೋ ಚಾಲಕ; ಫೋಟೋ ವೈರಲ್!

  • ಡಿಜಿಟಲ್ ಯುಗದಲ್ಲಿ ಜನರನ್ನೇ ಚಕಿತಗೊಳಿಸಿದ ಆಟೋಚಾಲಕ
  • ಆಟೋ ಪ್ರಯಾಣ ಶುಲ್ಕವಾಗಿ ಕ್ರಿಪ್ಟೋಕರೆನ್ಸಿ ಸ್ವೀಕರಿಸಲಾಗುತ್ತದೆ; ಚಾಲಕನ ಬೋರ್ಡ್ ವೈರಲ್!
  • ಕ್ರಿಪ್ಟೋಕರೆನ್ಸಿ ಮೂಲಕ ದೇಶದಲ್ಲಿ ಮನೆಮಾತಾದ ಆಟೋ ಚಾಲಕ
Auto rickshaw accept payments in cryptocurrencies photo rounds on social media  gone viral ckm
Author
Bengaluru, First Published Aug 12, 2021, 6:02 PM IST

ಚೆನ್ನೈ(ಆ.12): ಆಟೋ ಪ್ರಯಾಣ, ಟ್ಯಾಕ್ಸಿ ಪ್ರಯಾಣದ ಶುಲ್ಕ ಪಾವತಿಗೆ ಈಗ ಗೂಗಲ್ ಪೇ, ಫೋನ್ ಪೇ ಸೇರಿದಂತೆ ಹಲವು ಡಿಜಿಟಲ್ ಪಾವತಿ ವ್ಯವಸ್ಥೆಗಳು ಚಾಲ್ತಿಯಲ್ಲಿದೆ. ಈ ಮೂಲಕ ಪಾವತಿಗೆ ಈಗಷ್ಟೇ ಜನ ಒಗ್ಗಿಕೊಳ್ಳುತ್ತಿದ್ದಾರೆ. ಇದರ ನಡುವೆ ಆಟೋಚಾಲಕ ಪ್ರಯಾಣ ಶುಲ್ಕ ಪಾವತಿಗೆ ಕ್ರಿಪ್ಟೋಕರೆನ್ಸಿ ಸ್ವೀಕರಿಸಲಾಗುತ್ತದೆ ಎಂದು ಭಾರತದ ಗಮನಸೆಳೆದಿದ್ದಾನೆ.

ಫೇಸ್ ಬುಕ್ ಡಿಜಿಟಲ್ ಕರೆನ್ಸಿ ಲಿಬ್ರಾಗೆ ಅಧಿಕೃತ ಚಾಲನೆ

ಕ್ರಿಪ್ಟೋಕರೆನ್ಸಿ ಭಾರತ ಹೆಚ್ಚು ಪ್ರಚಲಿತಕ್ಕೆ ಬರುವ ಮುನ್ನವೆ ಆಟೋಚಾಲಕ ಕ್ರಿಪ್ಟೋ ಕರೆನ್ಸಿ ಸ್ವೀಕರಿಸಲಾಗುತ್ತದೆ ಎಂದಿದ್ದಾನೆ. ಬಹುತೇಕರಿಗೆ ಕ್ರಿಪ್ಟೋಕರೆನ್ಸಿ ಎಂದರೇನು ಅನ್ನೋದು ಗೊತ್ತಿಲ್ಲ. ಆದರೆ ಆಟೋಚಾಲಕ ತನ್ನು ಆಟೋದಲ್ಲಿ ಕ್ರಿಪ್ಟೋಕರೆನ್ಸಿ ಸ್ವೀಕರಿಲಸಾಗುತ್ತದೆ ಎಂದು ಬೋರ್ಡ್ ಹಾಕಿದ್ದಾನೆ.

 

ಇಲ್ಲಿ ಗಗೂಲ್ ಪೇ, ಪೇಟಿಂ ಪಾವತಿ ಮಾಡಲು ಸಾಧ್ಯವಿದೆ ಅನ್ನೋ ಬೋರ್ಡ್‌ಗಳು ಸಾಮಾನ್ಯವಾಗಿ ಎಲ್ಲಾ ಅಂಗಡಿ, ಆಟೋಗಳಲ್ಲಿ ಕಾಣಸಿಗುತ್ತದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿ ಮಾಡಲು ವ್ಯವಸ್ಥೆ ಮಾಡಿರುತ್ತಾರೆ. ಆದರೆ ಈ ಆಟೋಚಾಲಕ ಮತ್ತೂ ಮುಂದೆ ಹೋಗಿ, ಕ್ರಿಪ್ಟೋರೆನ್ಸಿ ಸ್ವೀಕರಿಸಲಾಗುತ್ತದೆ ಎಂದು ಬೋರ್ಡ್ ಹಾಕಿದ್ದಾನೆ.

ಆಟೋಚಾಲಕನ ಬೋರ್ಡ್ ವೈರಲ್ ಆಗುತ್ತಿದ್ದಂತೆ, ಈತ ಯಾರು ಅನ್ನೋ ಹುಡುಕಾಟ ನಡೆದಿದೆ. ಈ ರೀತಿ ಕ್ರಿಪ್ಟೋಕರೆನ್ಸಿ ಬೋರ್ಡ್ ಮೂಲಕ ಭಾರತದಲ್ಲಿ ಭಾರಿ ಸಂಚಲನ ಮೂಡಿಸಿದ ಆಟೋಚಾಲಕ, ತಮಿಳುನಾಡಿನ ವಿನೋದ್ ಕುಮಾರ್. ಚೆನ್ನೈನಲ್ಲಿ ಆಟೋಚಾಲಕನಾಗಿರುವ ವಿನೋದ್, ಕ್ರಿಪ್ಟೋಕರೆನ್ಸಿ ಸ್ವೀಕರಿಸಲಾಗುತ್ತದೆ ಎಂದು ಬೋರ್ಡ್ ಹಾಕಿದ್ದಾನೆ.

ವಿನೋದ್ ಇದಕ್ಕೆ ಕಾರಣವನ್ನೂ ನೀಡಿದ್ದಾನೆ. ಹೂಡಿಕೆ ಮಾಡುವು ಉದ್ದೇಶದಿಂದ ವಿನೋದ್ ಕುಮಾರ್ ಕ್ರಿಪ್ಟೋಕರೆನ್ಸಿ ಬೋರ್ಡ್ ಹಾಕಿದ್ದಾನೆ. ಇನ್ನಾ ವಾಜಿರಿX ಕ್ರಿಪ್ಟೋಕರೆನ್ಸಿ ಸಂಸ್ತೆಯಲ್ಲಿ ಟ್ರೆಡಿಂಗ್‌ನಲ್ಲಿ ತೊಡಗಿಸಿಕೊಂಡಿರುವ ಚಾಲಕ, ಇದೇ ಕಾರಣಕ್ಕೆ ತನ್ನು ಆಟೋದಲ್ಲಿ ಕ್ರಿಪ್ಟೋಕರೆನ್ಸಿ ಸ್ವೀಕರಿಸಲಾಗುತ್ತದೆ ಎಂದಿದ್ದಾನೆ.

ಕ್ರಿಪ್ಟೋ ಕರೆನ್ಸಿ ಬೋರ್ಡ್ ಹಾಕಿದ ಬಳಿಕ ಇದುವರೆಗೆ ಯಾವ ಪ್ರಯಾಣಿಕನೂ ಕ್ರಿಪ್ಟೋಕರೆನ್ಸಿ ನೀಡಿಲ್ಲ. ಆದರೆ ಹಲವು ಪ್ರಯಾಣಿಕರು ಈ ಕುರಿತು ಚರ್ಚೆ ನಡೆಸಿದ್ದಾರೆ. ಕೆಲವೇ ಕೆಲವು ಪ್ರಯಾಣಿಕರು ಕ್ರಿಪ್ಟೋ ಕರೆನ್ಸಿ ಕುರಿತು ತಿಳಿದಿದ್ದಾರೆ ಎಂದು ವಿನೋದ್ ಹೇಳಿದ್ದಾನೆ. 2019ರಿಂದ ಚೆನ್ನನಲ್ಲಿ ಆಟೋ ಚಲಾಯಿಸುತ್ತಿರುವ ವಿನೋದ್ 

ಕ್ರಿಪ್ಟೋಕರೆನ್ಸಿ ಕೂಡ ಹಣವೇ. ಆದರೆ ಡಿಜಿಟಲ್ ರೂಪದ ಹಣ. ಡಿಜಿಟಲ್ ಹಣದ ರೂಪದಲ್ಲಿ ಉಳಿತಾಯ ಖಾತೆಗಳಲ್ಲಿ ಇಡಲಾಗುತ್ತದೆ. ಖಾಸಗಿ ಸಂಸ್ಥೆಗಳು ಕ್ರಿಪ್ಟೋ ಕರೆನ್ಸಿ ನೀಡುತ್ತಾರೆ. ಸರಕು ಮತ್ತು ಸೇವೆಗಳಿಗಾಗಿ ಆನ್‌ಲೈನ್ ಮೂಲಕ ಪಾವತಿ ಮಾಡುವ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದೆ. ಇದರ ಸುರಕ್ಷತೆಗಾಗಿ ಬ್ಲಾಕ್ ಚೈನ್ ಅನ್ನೋ ತಂತ್ರಜ್ಞಾನ ಬಳಸಲಾಗುತ್ತದೆ. ಭಾರತದಲ್ಲಿ ವಾಜಿರ್X ಸಂಸ್ಥೆ ಕ್ರಿಪ್ಟೋ ಕರೆನ್ಸಿ ವಿತರಿಸುತ್ತದೆ. ಸರ್ಕಾರ ಕ್ರಿಪ್ಟೋ ಕರೆನ್ಸಿ ವಿತರಣೆ ಅಥವಾ ಯಾವುದೇ ವ್ಯವಹಾರ ಮಾಡುವುದಿಲ್ಲ. 


 

Follow Us:
Download App:
  • android
  • ios