ಒಂದೇ ಒಂದು ಪ್ರಕರಣ ಪತ್ತೆ, ಆಸ್ಟ್ರೇಲಿಯಾ ರಾಜಧಾನಿ ಲಾಕ್ ಸಂಪೂರ್ಣ ವೈರಸ್‌ ಮುಕ್ತವಾಗೋ ತನಕ ಲಾಕ್‌ಡೌನ್ ಕಂಟಿನ್ಯೂ

ಕ್ಯಾನ್‌ಬೆರಾ(ಆ.14): ಇತ್ತೀಚೆಗಷ್ಟೇ ಓರ್ವ ವ್ಯಕ್ತಿ ಕೊರೋನಾ ಸೋಂಕಿಗೆ ತುತ್ತಾದ ಹಿನ್ನೆಲೆಯಲ್ಲಿ ಆಸ್ಪ್ರೇಲಿಯಾದ ರಾಜಧಾನಿ ಕ್ಯಾನ್‌ಬೆರಾ ಹಾಗೂ ಎರಡು ಗ್ರಾಮಗಳನ್ನೇ ಲಾಕ್‌ಡೌನ್‌ ಮಾಡಲಾಗಿದೆ.

ರಾಜಧಾನಿ ವ್ಯಾಪ್ತಿಯ ಭಾಗದಲ್ಲಿ ಕೊರೋನಾ ಕೇಸ್‌ಗಳ ಸಂಖ್ಯೆ ಶೂನ್ಯಕ್ಕೆ ತಲುಪುವವರೆಗೆ ಕ್ಯಾನ್‌ಬೆರಾ ಲಾಕ್‌ ಆಗಿರಲಿದ್ದು, ಅಲ್ಲಿಯವರೆಗೆ ಅನ್‌ಲಾಕ್‌ ಮಾಡುವುದಿಲ್ಲ ಎಂದು ಆಸ್ಪ್ರೇಲಿಯಾ ಸರ್ಕಾರ ಹೇಳಿದೆ.

2 ಲಸಿಕೆ ಪಡೆದರೆ ಸೋಂಕು ತಗಲುವ ಸಾಧ್ಯತೆ ಅರ್ಧಕ್ಕರ್ಧ ಇಳಿಕೆ

ಹೊಸ 1 ಕೇಸು ಪತ್ತೆ ಆಗುವುದರೊಂದಿಗೆ ಕ್ಯಾನ್‌ಬೆರಾ ಹಾಗೂ ಪಕ್ಕದ ಗ್ರಾಮಗಳ ವ್ಯಾಪ್ತಿಯಲ್ಲಿ ಒಟ್ಟಾರೆ ಕೊರೋನಾ ಕೇಸ್‌ಗಳ ಸಂಖ್ಯೆ 6ಕ್ಕೆ ಏರಿದ್ದು, ಇವರ ಜತೆ 1800ಕ್ಕೂ ಹೆಚ್ಚು ಮಂದಿ ಸಂಪರ್ಕಕ್ಕೆ ಬಂದಿದ್ದಾರೆ. ಈ ಎಲ್ಲರನ್ನೂ ಪರೀಕ್ಷೆಗೊಳಪಡಿಸಲಾಗಿದೆ. ಇವರಿಂದ ಸಮುದಾಯ ಹಂತಕ್ಕೆ ಸೋಂಕು ತಡೆಗಾಗಿ ಕೇಸ್‌ ಸಂಖ್ಯೆ ಶೂನ್ಯಕ್ಕೆ ತಲುಪುವವರೆಗೆ ಅನ್‌ಲಾಕ್‌ ಮಾಡಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ಕೊರೋನಾ ಪ್ರಕರಣಗಳ ಸಂಖ್ಯೆ ಆರಕ್ಕೆ ಏರಿದ್ದು, ಇವರ ಕಾಂಟ್ಯಾಕ್ಟ್‌ನಲ್ಲಿ 1800 ಜನ ಇದ್ದರು ಎನ್ನಲಾಗಿದೆ. ನಮಗೆ ಸಾಮೂಹಿಕ ಹರಡುವಿಕೆ ತಡೆಯಬೇಕಿದೆ. ನಾವು ಮತ್ತೆ ಝೀರೋ ಕೇಸ್‌ಗಳ ದಿನಕ್ಕೆ ಹಿಂದಿರುಗಬೇಕು ಎಂದು ರಾಜಧಾನಿಯ ಸಿಎಂ ಆಂಡ್ರ್ಯೂ ಬಾರ್ ತಿಳಿಸಿದ್ದಾರೆ.