Asianet Suvarna News Asianet Suvarna News

ಮಥುರಾ ಮಂದಿರ ಕೆಡವಿದ್ದು ಔರಂಗಜೇಬ್: ಆರ್‌ಟಿಐ ಅರ್ಜಿಗೆ ಪುರಾತತ್ವ ಇಲಾಖೆ ಉತ್ತರ

: ಶ್ರೀಕೃಷ್ಣ ಜನ್ಮಸ್ಥಾನ ಮಥುರಾ ಹಾಗೂ ಶಾಹಿ ಈದ್ಗಾ ಮಸೀದಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ. ಮೊಘಲ್ ದೊರೆ ಔರಂಗಜೇಬ ಮಥುರಾದ ಶ್ರೀಕೃಷ್ಣ ಜನ್ಮಸ್ಥಾನದಲ್ಲಿದ್ದ ಮಂದಿರವನ್ನು ಕೆಡವಿ ಮಸೀದಿ ಕಟ್ಟಿದ ಎಂದು ಪುರಾತತ್ವ ಇಲಾಖೆಯೂ ಆರ್‌ಟಿಐ ಅರ್ಜಿದಾರರೊಬ್ಬರ ಪ್ರಶ್ನಗೆ ಉತ್ತರ ನೀಡಿದೆ.

Aurangzeb destroyed Mathura Shree Krishna temple Archeology department reply to RTI application akb
Author
First Published Feb 4, 2024, 12:03 PM IST

ಮಥುರಾ: ಶ್ರೀಕೃಷ್ಣ ಜನ್ಮಸ್ಥಾನ ಮಥುರಾ ಹಾಗೂ ಶಾಹಿ ಈದ್ಗಾ ಮಸೀದಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ. ಮೊಘಲ್ ದೊರೆ ಔರಂಗಜೇಬ ಮಥುರಾದ ಶ್ರೀಕೃಷ್ಣ ಜನ್ಮಸ್ಥಾನದಲ್ಲಿದ್ದ ಮಂದಿರವನ್ನು ಕೆಡವಿ ಮಸೀದಿ ಕಟ್ಟಿದ ಎಂದು ಪುರಾತತ್ವ ಇಲಾಖೆಯೂ ಆರ್‌ಟಿಐ ಅರ್ಜಿದಾರರೊಬ್ಬರ ಪ್ರಶ್ನಗೆ ಉತ್ತರ ನೀಡಿದೆ. ದೇವಾಲಯವನ್ನು ಕೆಡವಿ ಔರಂಗಜೇಬ್ ನಿರ್ಮಿಸಿದ ಮಸೀದಿಯ ಸ್ಥಳದಲ್ಲಿ ಈಗ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಆರ್‌ಟಿಐ ಅರ್ಜಿದಾರನೋರ್ವನ ಪ್ರಶ್ನೆಗೆ ಆಗ್ರಾದ ಪುರಾತತ್ವ ಇಲಾಖೆಯು ಉತ್ತರಿಸಿದೆ. 

ದೆಹಲಿಯ ಮೈನ್‌ಪುರಿಯ ನಿವಾಸಿ ಅಜಯ್ ಪ್ರತಾಪ್ ಸಿಂಗ್  ಎಂಬುವವರು ಆರ್‌ಟಿಐ ಅಡಿಯಲ್ಲಿ ದೇಶಾದ್ಯಂತ ಇರುವ ದೇವಾಲಯಗಳ ಬಗ್ಗೆ ಪುರಾತತ್ವ ಇಲಾಖೆಯಿಂದ ಮಾಹಿತಿ ಕೇಳಿದ್ದರು. ಇದರಲ್ಲಿ ಮಥುರಾದಲ್ಲಿರುವ ಶ್ರೀಕೃಷ್ಣನ ಜನ್ಮಸ್ಥಳದ ಬಗ್ಗೆಯೂ ಮಾಹಿತಿ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ  ಭಾರತದ ಪುರಾತತ್ವ ಇಲಾಖೆಯು 1920 ರಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಪ್ರಕಟವಾದ ಗೆಜೆಟ್ ಆಧಾರದ ಮೇಲೆ ಮಥುರಾದಲ್ಲಿ ಮೊದಲು, ಮಸೀದಿ ಇದ್ದ ಜಾಗದಲ್ಲಿ ಕತ್ರಾ ಕೇಶವದೇವ ದೇವಾಲಯವಿತ್ತು ನಂತರದಲ್ಲಿ ಔರಂಗಜೇಬನ ಕಾಲಘಟ್ಟದಲ್ಲಿ ಅದನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಯಿತು ಎಂದು ಉತ್ತರಿಸಲಾಗಿದೆ. 

ಈ ವಿಚಾರಕ್ಕೆ ಸಂಬಂಧಿಸಿದಂತೆ ಕೃಷ್ಣ ಜನ್ಮಭೂಮಿ ಮುಕ್ತಿ ನ್ಯಾಸ್ ಅಧ್ಯಕ್ಷ ವಕೀಲ ಮಹೇಂದ್ರ ಪ್ರತಾಪ್ ಮಾತನಾಡಿ, 1920 ರಲ್ಲಿ ಅಲಹಾಬಾದ್‌ನಿಂದ ಪ್ರಕಟಿಸಿದ ಗೆಜೆಟ್‌ನಲ್ಲಿ ( ರಾಜ್ಯಪತ್ರ) ಬ್ರಿಟಿಷರ ಕಾಲದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಲೋಕೋಪಯೋಗಿ ಇಲಾಖೆಯು  ಉತ್ತರ ಪ್ರದೇಶದ ವಿವಿಧೆಡೆ 39 ಸ್ಮಾರಕಗಳ ಪಟ್ಟಿಯನ್ನು ನೀಡಿತ್ತು ಎಂದು ದಾಖಲಿಸಲಾಗಿದೆ.  ಈ ಪಟ್ಟಿಯಲ್ಲಿ ಕತ್ರಾ ಕೇಶವ ದೇವ್ ಭೂಮಿಯಲ್ಲಿರುವ ಶ್ರೀ ಕೃಷ್ಣ ಭೂಮಿಯನ್ನು 37 ನೇ ಸ್ಥಾನದಲ್ಲಿ ಉಲ್ಲೇಖಿಸಲಾಗಿದೆ. ಹಿಂದೆ ಕತ್ರಾ ದಿಬ್ಬದ ಮೇಲೆ ಕೇಶವ ದೇವ್ ದೇವಾಲಯವಿತ್ತು ಎಂದು ಬರೆಯಲಾಗಿದೆ. ಅದನ್ನು ಕೆಡವಲಾಯಿತು ಮತ್ತು ಆ ಸ್ಥಳವನ್ನು ಮಸೀದಿಗಾಗಿ ಬಳಸಲಾಯಿತು ಎಂದು ಈ ರಾಜ್ಯಪತ್ರದಲ್ಲಿ ಮಾಹಿತಿ ಇದೆ ಎಂದು ಮಹೇಂದ್ರ ಪ್ರತಾಪ್ ಹೇಳಿದ್ದಾರೆ. 

ಇದನ್ನೇ ಸಾಕ್ಷಿಯಾಗಿ ಕೋರ್ಟ್‌ಗೆ ಸಲ್ಲಿಕೆ

ಅಂದಿನ ರಾಜ್ಯಪತ್ರದಲ್ಲಿ ಉಲ್ಲೇಖವಾದ ಹಾಗೂ ಈಗ ಆರ್‌ಟಿಐಗೆ ಪುರಾತತ್ವ ಇಲಾಖೆ ನೀಡಿದ ಮಾಹಿತಿಯನ್ನೇ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿ ಸಾಕ್ಷ್ಯವಾಗಿ ಸೇರಿಸುತ್ತೇವೆ ಎಂದು ಕೃಷ್ಣ ಜನ್ಮಭೂಮಿ ಮುಕ್ತಿ ನ್ಯಾಸ್ ಅಧ್ಯಕ್ಷ ವಕೀಲ ಮಹೇಂದ್ರ ಪ್ರತಾಪ್ ಹೇಳಿದ್ದಾರೆ. ಇದರಲ್ಲಿ ಎಎಸ್‌ಐ (ಭಾರತೀಯ ಪುರಾತತ್ವ ಇಲಾಖೆ) ದೇವಸ್ಥಾನವನ್ನು ಕೆಡವಿ ಮಸೀದಿ ನಿರ್ಮಿಸಲಾಗಿದೆ. ಅಲ್ಲಿಯೇ ಕತ್ರಾ ಕೇಶವ್ ದೇವ್ ದೇವಸ್ಥಾನವಿತ್ತು. 1920ರ ಗಜೆಟ್‌ನಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಅಲ್ಲಿ ಉಲ್ಲೇಖಿಸಲಾದ 39 ಸ್ಮಾರಕಗಳ ಪೈಕಿ ಮಥುರಾ 37 ನೇ ಸ್ಥಾನದಲ್ಲಿದೆ. ಇದರಲ್ಲಿ ಎಲ್ಲವೂ  ತುಂಬಾ ಸ್ಪಷ್ಟವಾಗಿದೆ. ಹೀಗಾಗಿ ನ್ಯಾಯಾಲಯ ತಡೆಯಾಜ್ಞೆ ನೀಡಬೇಕು ಮತ್ತು ಇದಕ್ಕೆ ಸಂಬಂಧಿಸಿದಂತೆ ಆಯೋಗವನ್ನು ಸ್ಥಾಪಿಸಿ ಈ ಎಲ್ಲ ವಿವರಗಳನ್ನು ಸುಪ್ರೀಂಕೋರ್ಟ್‌ಗೆ ಕಳುಹಿಸಬೇಕು ಎಂದು  ಅವರು ಹೇಳಿದ್ದಾರೆ. 

ಶ್ರೀ ಕೃಷ್ಣ ಜನ್ಮಭೂಮಿ ವಿವಾದ ಏನು

ಮಥುರಾದಲ್ಲಿರುವ ಶ್ರೀಕೃಷ್ಣ ಜನ್ಮಸ್ಥಾನದ ವಿವಾದವೂ ಅಯೋಧ್ಯೆಯಂತೆಯೇ ಇದ್ದು, ಭಾರತಕ್ಕೆ ಬಂದು ಮುಸ್ಲಿಂ ದಾಳಿಕೋರ ಔರಂಗಜೇಬ್ ಮಥುರಾದಲ್ಲಿನ ದೇವಾಲಯವನ್ನು ಕೆಡವಿ ಅಲ್ಲಿ ಮಸೀದಿ ನಿರ್ಮಿಸಿದ್ದ. 1670ರಲ್ಲಿ ಮಥುರಾದ  ಕೇಸರಿ ಕೇಶವದೇವನ ದೇವಾಲಯವನ್ನು ಕೆಡವಲು ಆತ ಆದೇಶ ನೀಡಿದ್ದ, ಇದಾದ ನಂತರ ಅಲ್ಲಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗುತ್ತದೆ. 13.37 ಎಕರೆ ಜಮೀನಿನ ಮಾಲಿಕತ್ವಕ್ಕೆ ಸಂಬಂಧಿಸಿದಂತೆ ಈ ವಿವಾದ ಇದ್ದು, ಶ್ರೀ ಕೃಷ್ಣ ಜನ್ಮಸ್ಥಾನವು 10.9 ಎಕರೆ ಜಮೀನಿನ ಮಾಲೀಕತ್ವವನ್ನು ಹೊಂದಿದ್ದರೆ, ಶಾಹಿ ಈದ್ಗಾ ಮಸೀದಿಯು ಎರಡೂವರೆ ಎಕರೆ ಜಮೀನಿನ ಮಾಲೀಕತ್ವವನ್ನು ಹೊಂದಿದೆ. ಹಿಂದೂ ಸಮುದಾಯವೂ ಈ ಎರಡೂವರೆ ಎಕರೆ ಕೂಡ  ಅಕ್ರಮ ಒತ್ತುವರಿಯಿಂದ ಪಡೆದ ಜಾಗವಾಗಿದ್ದು, ಈ ಭೂಮಿ ಕೂಡ ಮಥುರಾ ಶ್ರೀಕೃಷ್ಣ ಜನ್ಮಸ್ಥಾನಕ್ಕೆ ಸೇರಿದ್ದಾಗಿದ್ದು, ಇಲ್ಲಿರುವ ಈದ್ಗಾ ಮಸೀದಿಯನ್ನು ತೆರವುಗೊಳಿಸಿ ಅಲ್ಲಿನ ಸಂಪೂರ್ಣ ಭೂಮಿಯನ್ನು ಶ್ರಿಕೃಷ್ಣ ಜನ್ಮಸ್ಥಾನಕ್ಕೆ ನೀಡಬೇಕು ಎಂಬುದು ಹಿಂದುಗಳ ಬೇಡಿಕೆಯಾಗಿದೆ. 

Follow Us:
Download App:
  • android
  • ios