Asianet Suvarna News Asianet Suvarna News

UP Elections: ನಾಮಪತ್ರ ಸಲ್ಲಿಸಲು ಹೊರಟಿದ್ದ ಯೋಗಿ ಸಂಪುಟ ಸಚಿವ ಸಿದ್ಧಾರ್ಥನಾಥ್ ಸಿಂಗ್ ಮೇಲೆ ದಾಳಿ!

* ಉತ್ತರ ಪ್ರದೇಶ ಚುನಾವಣೆಗೆ ದಿನಗಣನೆ

* ನಾಮಪತ್ರ ಸಲ್ಲಿಕೆ ಆರಂಭ

* ನಾಮಪತ್ರ ಸಲ್ಲಿಸಲು ಹೊರಟಿದ್ದ ಯೋಗಿ ಸಂಪುಟ ಸಚಿವ ಸಿದ್ಧಾರ್ಥನಾಥ್ ಸಿಂಗ್ ಮೇಲೆ ದಾಳಿ

 

Attempt to attack Uttar Pradesh Minister Siddharth Nath Singh pod
Author
Bangalore, First Published Feb 3, 2022, 4:29 PM IST | Last Updated Feb 3, 2022, 4:41 PM IST

ಲಕ್ನೋ(ಫೆ.03): ಯುಪಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಹೊರಟಿದ್ದ ಯೋಗಿ ಸಂಪುಟ ಸಚಿವ ಸಿದ್ಧಾರ್ಥನಾಥ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಆತನ ಮೇಲೆ ನಡೆದ ಈ ದಾಳಿಯ ನಂತರ ಕೋಲಾಹಲ ಉಂಟಾಯಿತು. ದಾಳಿಕೋರನನ್ನು ಪೊಲೀಸರು ಬಂಧಿಸಿದ್ದು, ಆತನಿಂದ ಬ್ಲೇಡ್ ವಶಪಡಿಸಿಕೊಂಡಿದ್ದಾರೆ.

ಸಿದ್ಧಾರ್ಥನಾಥ್ ಸಿಂಗ್ ಗುರುವಾರ ನಾಮನಿರ್ದೇಶನಕ್ಕೆ ತೆರಳುತ್ತಿದ್ದರೆಂಬುವುದು ಉಲ್ಲೇಖನೀಯ. ಅಷ್ಟರಲ್ಲಿ ಯುವಕನೊಬ್ಬ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸಿದ ಯುವಕ ಬಿಜೆಪಿಯ ಹಿರಿಯ ಕಾರ್ಯಕರ್ತ ಎನ್ನಲಾಗಿದೆ. ಜನರ ಸಮಯಪ್ರಜ್ಞೆಯಿಂದ ದಾಳಿಕೋರ ತಕ್ಷಣ ಸಿಕ್ಕಿಬಿದ್ದ. ಜನರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಿಕ್ಕಿರುವ ಮಾಹಿತಿಯ ಪ್ರಕಾರ ಅದೃಷ್ಟವಶಾತ್ ಆರೋಪಿ ಯುವಕ ಸಿದ್ಧಾರ್ಥ್ ನಾಥ್ ಸಿಂಗ್ ಅವರ ಬಳಿ ತಲುಪಲು ಸಾಧ್ಯವಾಗಿಲ್ಲ. ಸದ್ಯ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಸಿದ್ಧಾರ್ಥನಾಥ್ ಸಿಂಗ್ ಅಲಹಾಬಾದ್ ಪಶ್ಚಿಮ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಬುವುದು ಉಲ್ಲೇಖನೀಯ. 2017ರಲ್ಲೂ ಇಲ್ಲಿಂದ ಸ್ಪರ್ಧಿಸಿ ಚುನಾವಣೆಯಲ್ಲಿ ಗೆದ್ದಿದ್ದರು. ಅಲ್ಲದೇ ರಾಜ್ಯ ಸರ್ಕಾರದ ವಕ್ತಾರರೂ ಆಗಿದ್ದಾರೆ. ಗುರುವಾರ ನಾಮಪತ್ರ ಸಲ್ಲಿಕೆಗೆ ತೆರಳಿದ್ದ ವೇಳೆ ದಾಳಿ ನಡೆದಿರುವುದು ಬೆಳಕಿಗೆ ಬಂದಿದೆ. ಸದ್ಯ ದಾಳಿಕೋರ ಪೊಲೀಸರ ವಶದಲ್ಲಿದ್ದಾನೆ.

ಪಕ್ಷ ತೊರೆದ ಬಿಜೆಪಿ ಶಾಸಕ

ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯ ಮೀಸಲು ವಿಧಾನಸಭಾ ಕ್ಷೇತ್ರ ಬಾರಾ ಬಿಜೆಪಿ ಶಾಸಕರು ಅಜಯ್ ಕುಮಾರ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ಕ್ಷೇತ್ರವನ್ನು ಮಿತ್ರ ಪಕ್ಷದ ಅಭ್ಯರ್ಥಿಗೆ ಬಿಟ್ಟುಕೊಡುವ ಉದ್ದೇಶದ ಬಗ್ಗೆ ತಮಗೆ ಯಾವುದೇ ಮಾಹಿತಿ ನೀಡದಿರುವುದನ್ನು ಖಂಡಿಸಿ ಬುಧವಾರ ಬಿಜೆಪಿ ತೊರೆದಿದ್ದಾರೆ.

ನಾನು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ತಮ್ಮ ಈ ಕಠಿಣ ನಿರ್ಧಾರಕ್ಕೆ ಕಾರಣವನ್ನು ವಿವರಿಸಿದ ಡಾ. ಅಜಯ್ ಕುಮಾರ್ ಅವರು, ಮಿತ್ರ ಪಕ್ಷ ಅಪ್ನಾ ದಳ(ಎಸ್) ಅಭ್ಯರ್ಥಿಗೆ ಬಾರಾ ಸ್ಥಾನವನ್ನು ಬಿಟ್ಟುಕೊಡುವ ಬಿಜೆಪಿ ನಾಯಕತ್ವದ ಉದ್ದೇಶದ ಬಗ್ಗೆ ನನಗೆ ಯಾವುದೇ ಮಾಹಿತಿ ನೀಡಿಲ್ಲ ಎಂದರು.

"ಕ್ಷೇತ್ರ ಬಿಟ್ಟುಕೊಡುವ ಬಗ್ಗೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ. ಆದರೆ ಅವರ ನಡೆಯಿಂದ ನನಗೆ ನೋವಾಗಿದೆ. ಪಕ್ಷದ ಯಾವುದೇ ಉನ್ನತ ನಾಯಕರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅದರ ಬಗ್ಗೆ ಮಾಹಿತಿ ನೀಡಲಿಲ್ಲ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಇದರಿಂದ ನನಗೆ ತುಂಬಾ ನೋವಾಗಿದೆ ಮತ್ತು ನಾನು ಭಾರವಾದ ಹೃದಯದಿಂದ ಬಿಜೆಪಿಯನ್ನು ತೊರೆಯುತ್ತಿದ್ದೇನೆ. ನಾನು ಬಿಜೆಪಿ ಕಾರ್ಯಕರ್ತ ಮತ್ತು ಶಾಸಕನಾಗಿ ನನಗೆ ವಹಿಸಲಾದ ಎಲ್ಲಾ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ ಅಜಯ್ ಕುಮಾರ್ ಹೇಳಿದ್ದಾರೆ.

ಡಾ ಕುಮಾರ್ ಅವರು 2012 ಮತ್ತು 2017ರ ವಿಧಾನಸಭಾ ಚುನಾವಣೆಯಲ್ಲಿ ಬಾರಾ ಕ್ಷೇತ್ರದಿಂದ ಗೆದ್ದಿದ್ದರು. ಮೊದಲು ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಮತ್ತು ನಂತರ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

Latest Videos
Follow Us:
Download App:
  • android
  • ios