ಕೇರಳದಲ್ಲಿ ಸಿಎಂ ಹಾಗೂ ಗವರ್ನರ್ ನಡುವಿನ ಜಟಾಪಟಿ ಮತ್ತೊಂದು ಹಂತ ತಲುಪಿದೆ.
ತಿರುವನಂತಪುರಂ: ಕೇರಳದಲ್ಲಿ ಸಿಎಂ ಹಾಗೂ ಗವರ್ನರ್ ನಡುವಿನ ಜಟಾಪಟಿ ಮತ್ತೊಂದು ಹಂತ ತಲುಪಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಸಿಪಿಎಂ ನ.15 ರಂದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಮಾತನಾಡಿರುವ ಖಾನ್, ‘ನೀವು ಸಾಂವಿಧಾನಿಕ ಯಂತ್ರದ ಪತನವನ್ನು ಆರಂಭಿಸಿದ್ದೀರಿ. ಮುಂದೆ ಹೋಗಿ ಇನ್ನಷ್ಟುಸಮಸ್ಯೆಗಳನ್ನು ಸೃಷ್ಟಿಸಿ. ನಿಮಗೆ ಧೈರ್ಯವಿದ್ದರೆ ರಾಜಭವನಕ್ಕೆ ನುಗ್ಗಿ, ರಸ್ತೆ ಮೇಲೆ ನನ್ನನ್ನು ಅಟ್ಯಾಕ್ ಮಾಡಿ’ ಎಂದು ಸಿಪಿಎಂ ನಾಯಕರಿಗೆ ಬಹಿರಂಗ ಸವಾಲು ಹಾಕಿದ್ದಾರೆ. ಅಲ್ಲದೇ ‘ನ.15 ರಂದು ನಾನು ರಾಜಭವನದಲ್ಲಿ ಇರುವುದಿಲ್ಲ. ನನ್ನ ಅನುಪಸ್ಥಿತಿಯಲ್ಲಿ ಪ್ರತಿಭಟನೆ ನಡೆಸಬೇಡಿ. ನಾನು ರಾಜಭವನದಲ್ಲಿದ್ದಾಗ ಪ್ರತಿಭಟನೆ ಮಾಡಿ. ನಾನೂ ಅಲ್ಲಿಗೆ ಬರುತ್ತೇನೆ. ಸಾರ್ವಜನಿಕವಾಗಿ ಚರ್ಚಿಸೋಣ’ ಎಂದಿದ್ದಾರೆ.
ವಿದೇಶದ ಕಮ್ಯುನಿಸಂನ ಒಪ್ಕೋತೀರಿ, ಆರೆಸ್ಸೆಸ್ ಸಿದ್ಧಾಂತ ಯಾಕೆ ಬೇಡ: ಕೇರಳ ರಾಜ್ಯಪಾಲ ಅರಿಫ್ ಮೊಹಮದ್ ಪ್ರಶ್ನೆ!
Kerala Governor VS CM Vijayan: ತಮ್ಮ ಹತ್ಯೆ ದಾಳಿ ವೀಡಿಯೋ ಬಹಿರಂಗಗೊಳಿಸಿದ ಅರಿಫ್ ಮೊಹಮದ್!