ದೇಗುಲ ಪ್ರಸಾದ, RSS ಕಚೇರಿಯಲ್ಲಿ ರಿಸಿನ್ ವಿಷ ಬೆರೆಸಲು ಸಂಚು ರೂಪಿಸಿದ ಉಗ್ರರು ಅರೆಸ್ಟ್, ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್ ಅತೀ ದೊಡ್ಡ ಉಗ್ರರ ಪ್ಲಾನ್ ವಿಫಲಗೊಳಿಸಿದೆ. ಅಮಾಯಕರ ಜೀವ ಉಳಿಸಿದ್ದು ಮಾತ್ರವಲ್ಲ, ಘನಘೋರ ದುರಂತವನ್ನೇ ತಪ್ಪಿಸಿದೆ.

ಲಖನೌ (ನ.14) ದೆಹಲಿ ಬಾಂಬ್ ಸ್ಫೋಟ ಪ್ರಕರಣ, ಫರೀದಾಬಾದ್‌ನಲ್ಲಿ ವೈದ್ಯರು ಮನೆಗಳಿಂದ ಸಿಕ್ಕ ಸ್ಫೋಟಕ ವಶ, ಘಟನೆ ಸಂಬಂಧ ಹಲವು ಶಂಕಿತ ಉಗ್ರರ ಬಂಧನ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ಆದರೆ ಗುಜರಾತ್ ಹಾಗೂ ಉತ್ತರ ಪ್ರದೇಶ ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್ (ಎಟಿಎಸ್) ನಡೆಸಿದ ಕಾರ್ಯಾಚರಣೆಯಿಂದ ದೇಶದ ಜನರು ಮನೆಯಿಂದ ಹೊರಬರಲು ಆತಂಕ ಪಡುವ ಪರಿಸ್ಥಿತಿ ಎದುರಾಗಿದೆ. ಕಾರಣ ಉಗ್ರರ ಮಹಾ ಸಂಚನ್ನು ಎಟಿಎಸ್ ವಿಫಲಗೊಲಿಸಿದೆ. ಬಯೋಕೆಮಿಕಲ್ ಟೆರರ್ (ರಿಸಿನ್ ವಿಷ) ಬೆರಸಿ ಹತ್ಯೆ ಮಾಡುವ ಅತೀ ದೊಡ್ಡ ಸಂಚು ಬಯಲಾಗಿದೆ. ಈ ಸಂಬಂಧ ಮೂವರು ಉಗ್ರರನ್ನು ಎಟಿಎಸ್ ಬಂಧಿಸಿದೆ.

ದೇಗುಲ ಪ್ರಸಾದಲ್ಲಿ ಬೆರೆಸಲು ಉಗ್ರರ ಸಂಚು

ಬಂಧಿತರಿಂದ ರಿಸಿನ್ ವಿಷ, ಅದಕ್ಕೆ ಬೆರೆಸಲು ಬೇಕಾದ ರಾಸಾಯನಿಕಗಳನ್ನು ಎಟಿಎಸ್ ವಶಪಡಿಸಿಕೊಂಡಿದೆ. ಅಚ್ಚರಿ ಎಂದರೆ ಈ ಉಗ್ರರು , ರಿಸಿನ್ ವಿಷವನ್ನು ದೇಗುಲದ ಪ್ರಸಾದ, ಆರ್‌ಎಸ್ಎಸ್ ಕಚೇರಿಯಲ್ಲಿ ರಿಸಿನ್ ವಿಷ ಬೆರೆಸೆಲು ಭಾರಿ ಷಡ್ಯಂತ್ರ ರೂಪಿಸಲಾಗಿತ್ತು. ಬಂಧಿತ ಉಗ್ರರನ್ನು ಅಜಾದ್ ಸುಲೇಮಾನ್ ಶೇಕ್, ಮೊಹಮ್ಮದ್ ಸುಹೈಲ್ ಸಲೀಮ್ ಖಾನ್, ಅಹಮ್ಮದ್ ಮೊಯುದ್ದೀನ್ ಸಯಿದ್ದೀನ್ ಬಂಧಿತ ಉಗ್ರರು. ಇದರಲ್ಲಿ ಅಹಮ್ಮದ್ ಮೊಯುದ್ದೀನ್ ಸಿದ್ದೀನ್ ಹೈದರಾಬಾದ್ ಮೂಲದ ವೈದ್ಯ, ಚೀನಾದಲ್ಲಿ ಎಂಬಿಬಿಎಸ್ ಪದವಿ ಮುಗಿಸಿದ್ದಾನೆ.

ಯುಪಿ ಎಟಿಎಸ್‌ ಗುಜರಾತ್‌ಗೆ ತೆರಳಿ ತನಿಖೆ

ಉತ್ತರ ಪ್ರದೇಶದ ಎಟಿಎಸ್ ಗುಜರಾತ್‌ಗೆ ತೆರಳಿ ಕಾರ್ಯಾಚರಣೆ ನಡೆಸಿತ್ತು. ಸಿಕ್ಕ ಮಾಹಿತಿ ಆಧರಾಗಳಲ್ಲಿ ಭಾರಿ ರಹಸ್ಯ ಕಾರ್ಯಾಚರಣೆ ವೇಳೆ ಈ ಮೂವರು ಉಗ್ರರನ್ನು ಎಟಿಎಸ್ ಬಂಧಿಸಿದೆ. ವೈದ್ಯ ಅಹಮ್ಮದ್ ಮೊಯುದ್ದಿನ್ ಸೇರಿದಂತೆ ಇನ್ನಿಬ್ಬರು ರಿಸಿನ್ ವಿಷವನ್ನು ಇತರ ರಾಸಾಯನಿಕ ಜೊತೆ ಬೆರೆಸಿದ್ದರು. ಇದೇ ವೇಳೆ ದಾಳಿ ಮಾಡಿದ ಎಟಿಎಸ್ ಮೂವರು ಅರೆಸ್ಟ್ ಮಾಡಿದ್ದಾರೆ. ಈ ರಿಸಿನ್ ವಿಷವನ್ನು ದೇಗುಲದ ಪ್ರಸಾದ ಹಾಗೂ ಆರ್‌ಎಸ್‌ಸ್ ಕಚೇರಿಯ ಆಹಾರ, ಅಥವಾ ಇನ್ಯಾವುದೇ ರೂಪದಲ್ಲಿ ಬೆರೆಸಲು ಪ್ಲಾನ್ ಮಾಡಿದ್ದರು. ಲಖನೌ ಹಾಗೂ ದೆಹಲಿಯ ದೇವಸ್ಥಾನಗಳಲ್ಲಿ ಮೊದಲ ಹಂತದಲ್ಲಿ ಪ್ರಯೋಗಿಸಲು ಪ್ಲಾನ್ ಮಾಡಲಾಗಿತ್ತು. ಬಳಿಕ ಇಲ್ಲಿನ ಆರ್‌ಎಸ್‌ಎಸ್ ಕಚೇರಿಗಳಲ್ಲಿ ಈ ವಿಷ ಬೆರೆಸಲು ಪ್ಲಾನ್ ಮಾಡಲಾಗಿತ್ತು ಅನ್ನೋದು ತನಿಖೆಯಲ್ಲಿ ಬಯಲಾಗಿದೆ.

ಅಜಾದ್ ಹಾಗೂ ಮೊಹಮ್ಮದ್ ಸುಹೈಲ್‌ಗೆ ಆನ್‌ಲೈನ್ ಆ್ಯಪ್ ಮೂಲಕ, ಆನ್‌ಲೈನ್ ವಿಡಿಯೋ ಮೂಲಕ ತರಬೇತಿ ನೀಡಲಾಗಿದೆ. ಈ ಪೈಕಿ ಅಜಾದ್ ಪಾಕಿಸ್ತಾನದಿಂದ ಡ್ರೋನ್ ಮೂಲಕ ಶಸ್ತ್ರಾಸ್ತ್ರ ಪಡೆದುಕೊಂಡಿದ್ದ. ಆಫ್ಘಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ ಕೊರೊಸಾನ್ ಪ್ರಾವಿನ್ಸ್ ನಾಯಕನ ಸೂಚನೆಯಂತೆ ಆಜಾದ್ ಕಾರ್ಯನಿರ್ವಹಿಸುತ್ತಿದ್ದ.

ವೈದ್ಯನಿಂದ ಭಾರಿ ಶಸ್ತ್ರಾಸ್ತ್ರ ವಶ

ವೈದ್ಯ ಅಹಮ್ಮದ್ ಮೊಯುದ್ದೀನ್ ಸೈಯದ್‌ನನ್ನು ಅಹಮ್ಮದಾಬಾದ್ ಮಹೆಸಾನ ರಸ್ತೆಯ ಟೋಲ್ ಬಳಿ ಅರೆಸ್ಟ್ ಮಾಡಲಾಗಿದೆ. ಈತನಿಂದ ಗ್ಲಾಕ್, ಬ್ರೆಟ್ಟಾ ಪಿಸ್ತೂಲ್, 30 ಜೀವಂತ ಗುಂಡು, ನಾಲ್ಕು ಲೀಟರ್ ಕ್ಯಾಸ್ಟರ್ ಆಯಿಲ್ ಇತೆರ ಕೆಲ ರಾಸಾಯನಿಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ಭಾರತದಲ್ಲಿ ಸದ್ದಿಲ್ಲದೆ ನಡೆಯುತ್ತಿದೆ ರಿಸಿನ್ ಭಯೋತ್ಪಾದನೆ

ಫರೀದಾಬಾದ್ ಸ್ಫೋಟಕ ವಶ ಪ್ರಕರಣದ ಬೆನ್ನಲ್ಲೇ ಗುಜರಾತ್ ಪೊಲೀಸರು ಬಂಧಿಸಿದ ಶಂಕಿತ ಉಗ್ರರಿಂದ ರಿಸಿನ್ ಭಯೋತ್ಪಾದನೆ ಮಾಹಿತಿ ಬಯಲಾಗಿತ್ತು. ಇದೀಗ ಯುಪಿ ಎಟಿಎಸ್ ಬಂಧಿಸಿದ ಉಗ್ರರು ರಿಸಿನ್ ವಿಷ ಭಯೋತ್ಪಾದನೆ ಸದ್ದಿಲ್ಲದೆ ತಯಾರಿ ಮಾಡುತ್ತಿರುವುದು ಪತ್ತೆಯಾಗಿದೆ. ಇದೀಗ ಭಾರತದ ದೇಗುಲಗಳು ಪ್ರಸಾದ್ ಎಷ್ಟು ಸುರಕ್ಷಿತ ಅನ್ನೋ ಆತಂಕ ಎದುರಾಗಿದೆ. ಕಾರಣ ಈ ಪ್ರಸಾದದ ಸಾಮಾಗ್ರಿ ಪೂರೈಕೆ ಟೆಂಡರ್ ಮೂಲಕ ನಡೆಯುತ್ತದೆ. ವಿಷ ಬೆರೆಸಿ ಪ್ರಸಾದ ಸಾಮಾಗ್ರಿ ಪೂರೈಸಿದರೆ ದುರಂತಕ್ಕೆ ಹೊಣೆ ಯಾರು?