Asianet Suvarna News Asianet Suvarna News

ಶ್ರೀನಗರದಲ್ಲಿ -8.8 ಡಿಗ್ರಿ ಉಷ್ಣಾಂಶ: 30 ವರ್ಷದಲ್ಲೇ ಕನಿಷ್ಠ!

ಶ್ರೀನಗರದಲ್ಲಿ -8.8 ಡಿಗ್ರಿ ಉಷ್ಣಾಂಶ: 30 ವರ್ಷದಲ್ಲೇ ಕನಿಷ್ಠ| ದ್ರಾಸ್‌ನಲ್ಲಿ -26.2, ಕಾರ್ಗಿಲ್‌ನಲ್ಲಿ - 17 ಡಿ.ಸೆ

At Minus 8 8 Degrees Srinagar Records Lowest Minimum Temperature In 30 Years pod
Author
Bangalore, First Published Feb 1, 2021, 8:45 AM IST

ಶ್ರೀನಗರ(ಜ.01): ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಭಾನುವಾರ ಕಳೆದ 30 ವರ್ಷದಲ್ಲೇ ಅತಿ ಕನಿಷ್ಠ ತಾಪಮಾನ ದಾಖಲಾಗಿದ್ದು, ಉಷ್ಣಾಂಶ -8.8 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 1991ರಲ್ಲಿ ಶೀನಗರದಲ್ಲಿ -11.8 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು.

ಇದೇ ವೇಳೆ ಪಾಹಾಲ್ಗಂನಲ್ಲಿ -12 ಡಿಗ್ರಿ, ಗುಲ್ಮಾರ್ಗ್‌ನಲ್ಲಿ -8 ಡಿಗ್ರಿ, ಲಡಾಖ್‌ನಲ್ಲಿ -16.6 ಡಿಗ್ರಿ, ಕಾರ್ಗಿಲ್‌ನಲ್ಲಿ -17 ಡಿಗ್ರಿ, ದ್ರಾಸ್‌ನಲ್ಲಿ -26.2 ಡಿಗ್ರಿ ಸೆಲ್ಸಿಯಸ ಉಷ್ಣಾಂಶ ದಾಖಲಾಗಿದೆ.

ಸುದೀರ್ಘ 40 ದಿನಗಳ ಕಾಲ ಅಸ್ತಿತ್ವದಲ್ಲಿರುವ ‘ಚಿಲ್ಲೈ ಕಲಾನ್‌’ ಚಳಿಗಾಲ ಅವಧಿ ಭಾನುವಾರ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ತಾಪಮಾನ ಅಲ್ಪಮಟ್ಟಿಗೆ ಸುಧಾರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios