Asianet Suvarna News Asianet Suvarna News

1 ಗ್ರಾಮದ 20 ಜನಕ್ಕೆ ಬೇರೆ ಬೇರೆ ಡೋಸ್‌ ಲಸಿಕೆ ನೀಡಿ ಎಡವಟ್ಟು!

* ವೈದ್ಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಉತ್ತರ ಪ್ರದೇಶ ಸಿದ್ಧಾರ್ಥನಗರ ಜಿಲ್ಲೆಯ ಗ್ರಾಮದಲ್ಲಿ ಎಡವಟ್ಟು

* 1 ಗ್ರಾಮದ 20 ಜನಕ್ಕೆ 1ನೇ ಡೋಸ್‌ ಕೋವಿಶೀಲ್ಡ್‌, 2ನೇ ಡೋಸ್‌ ಕೋವ್ಯಾಕ್ಸಿನ್‌

* ಲಸಿಕೆ ಪಡೆದ ಎಲ್ಲರೂ ಆರೋಗ್ಯವಾಗಿದ್ದಾರೆ

At least 20 villagers given mixed doses of Covid vaccines in UP Siddharthnagar pod
Author
Bangalore, First Published May 27, 2021, 11:03 AM IST

ಲಖನೌ(ಮೇ.27): ವೈದ್ಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಉತ್ತರ ಪ್ರದೇಶ ಸಿದ್ಧಾರ್ಥನಗರ ಜಿಲ್ಲೆಯ ಗ್ರಾಮದ 20 ಜನರಿಗೆ ಮೊದಲ ಮತ್ತು 2ನೇ ಡೋಸ್‌ ವೇಳೆ ಬೇರೆ ಬೇರೆ ಕಂಪನಿಗಳ ಲಸಿಕೆ ನೀಡಿರುವುದು ಬೆಳಕಿಗೆ ಬಂದಿದೆ.

ಇಲ್ಲಿನ ಬದಿನಿ ಪ್ರಾಥಮಿಕ ಕೇಂದ್ರದಲ್ಲಿ ಏ.1ರಂದು ಮೊದಲ ಡೋಸ್‌ ಆಗಿ ಕೋವಿಶೀಲ್ಡ್‌ ಪಡೆದ 20 ಜನರಿಗೆ ಮೇ 14ರಂದು 2ನೇ ಡೋಸ್‌ ವೇಳೆ ಕೋವ್ಯಾಕ್ಸಿನ್‌ ನೀಡಲಾಗಿದೆ.

ಸದ್ಯಕ್ಕೆ ಲಸಿಕೆ ಪಡೆದ ಎಲ್ಲರೂ ಆರೋಗ್ಯವಾಗಿದ್ದಾರೆ. ಆದಾಗ್ಯೂ ಪ್ರಮಾದ ಸಂಬಂಧ ಜಿಲ್ಲಾ ಮುಖ್ಯಮಂತ್ರಿಗಳ ಕಚೇರಿ ತನಿಖೆಗೆ ಆದೇಶಿಸಿದೆ.

'ಕೊರೋನಾ ಗೆಲ್ಲಲು ಇನ್ನೆರಡು ವರ್ಷ : ಜೈವಿಕ ಲಸಿಕೆ ಜತೆ ಸಾಮಾಜಿಕ ಲಸಿಕೆ ಬೇಕು'

ದೆಹಲಿಗೆ ಶೀಘ್ರವೇ ಸ್ಪುಟ್ನಿಕ್‌-5 ಲಸಿಕೆ:ಸಿಎಂ ಕೇಜ್ರಿವಾಲ್‌

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೋವಿಡ್‌ ಲಸಿಕೆ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ ರಷ್ಯಾದ ಸ್ಪುಟ್ನಿಕ್‌-5 ಲಸಿಕೆ ಕಂಪನಿ ನಗರಕ್ಕೆ ಲಸಿಕೆ ಪೂರೈಸಲಿದೆ. ಆದರೆ ಎಷ್ಟುಪ್ರಮಾಣದ ಲಸಿಕೆ ಎಂದು ಇನ್ನೂ ನಿರ್ಧಾರವಾಗಿಲ್ಲ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಬುಧವಾರ ತಿಳಿಸಿದ್ದಾರೆ. ಇದೇ ವೇಳೆ ರಾಜ್ಯಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಲಸಿಕೆ ಸಂಗ್ರಹ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಸೂಚಿಸಿದೆ.

ಆದರೆ ಈವರೆಗೂ ಯಾವುದೇ ರಾಜ್ಯಗಳಿಗೂ ಕೊಂಡುಕೊಳ್ಳಲು ಆಗಿಲ್ಲ. ಕೋವಿಡ್‌ ನಿರ್ವಹಣೆ ಕೇಂದ್ರ ಮತ್ತು ರಾಜ್ಯಗಳ ಜವಾಬ್ದಾರಿ. ಆದರೆ ಕೇಂದ್ರ ತನ್ನ ಹೊಣೆಗಾರಿಕೆಯನ್ನು ರಾಜ್ಯಗಳ ಮೇಲೆ ಹಾಕುತ್ತಿರುವುದು ತಪ್ಪು. ಹಾಗಾಗಿ ಕೇಂದ್ರ ಸರ್ಕಾರ ಲಸಿಕೆಯ ತುರ್ತು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios