ಮೋದಿ ಸೇರಿದಂತೆ ಹಲವರ ಭವಿಷ್ಯ ನುಡಿದಿದ್ದ ಖ್ಯಾತ ಜ್ಯೋತಿಷಿ ಬೆಜಾನ್ ದಾರುವಾಲ್ಲ ಕೊರೋನಾಗೆ ಬಲಿ!

ಬೇಜಾನ್ ದಾರುವಾಲ್ಲ..ಈ ಹೆಸರು ಭಾರತೀಯರಿಗೆ ಚಿರಪರಿಚಿತ. ಕಾರಣ ಒಂದಿಂಚು ತಪ್ಪದೆ, ಕರಾರುವಕ್ಕಾಗಿ ಜ್ಯೋತಿಷಿ ಹೇಳುತ್ತಿದ್ದ ಬೇಜಾನ್ ದಾರುವಾಲ್ಲ ಇದೀಗ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಕೊರೋನಾ ಭವಿಷ್ಯ ನುಡಿದಿದ್ದ ಬೆಜಾನ್ ದಾರುವಾಲ್ಲಾ ಕೋಟ್ಯಾಂತರ ಬೆಂಬಲಿಗರು, ಓದುಗರನ್ನು ಅಗಲಿದ್ದಾರೆ.

Astrologer Of The Millennium bejan Daruwalla  died due to coronavirus in Ahmedabad

ಅಹಮ್ಮದಾಬಾದ್(ಮೇ.29): ಸಹಸ್ರಮಾನದ ಜ್ಯೋತಿಷಿ ಎಂದೇ ಖ್ಯಾತಿ ಗಳಿಸಿದ ಬೇಜಾನ್ ದಾರುವಾಲ್ಲ ಕೊರೋನಾ ವೈರಸ್‌ನಿಂದ ಗುಜರಾತ್‌ನ ಗಾಂಧಿನಗರದ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.  90 ವರ್ಷದ ಜ್ಯೋತಿಷಿ ಬೆಜಾನ್ ದಾರುವಾಲ್ಲ ಆರೋಗ್ಯ ಏರುಪೇರಾಗಿದ್ದ ಕಾರಣ ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೆಜಾನ್ ದಾರುವಾಲ್ಲ ನಿಧನರಾಗಿದ್ದಾರೆ.

ಕೊರೋನಾ ಮೆಟ್ಟಿದ್ದಕ್ಕೆ ಬೀಯರ್ ಓಪನ್ ಮಾಡಿ 103ರ ಅಜ್ಜಿಯ ಸಂಭ್ರಮ!.

ನ್ಯೂಮೋನಿಯಾ ಹಾಗೂ ಮೆದುಳಿನ ಸಂಬಂಧಿ ಕಾಯಿಲೆಯಿಂದ ಬಳಲಿದ ಬೆಜಾನ್ ದಾರುವಾಲ್ಲ ಅವರನ್ನು ಕುಟುಂಬ ಸದಸ್ಯರು ಕಳೆದ ವಾರ ಅಹಮ್ಮದಾಬಾದ್‌ನ ಗಾಂಧೀನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಬೆಜಾನ್ ದಾರುವಾಲ್ಲಾಗೆ ಕೊರೋನಾ ವೈರಸ್ ತಗುಲಿರುವ ವರದಿಯನ್ನು ಕುಟುಂಬ ಸದಸ್ಯರು ಅಲ್ಲಗೆಳೆದಿದ್ದರು. ಆದರೆ ಅಹಮ್ಮದಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಪ್ರಕಟಿಸಿದ ಕೊರೋನಾ ವೈರಸ್ ಪಟ್ಟಿಯಲ್ಲಿ ಬೆಜಾನ್ ದಾರುವಾಲ್ಲ ಹೆಸರು ಕೂಡ ಇತ್ತು. 

ಕರ್ನಾಟಕಕ್ಕೆ ಕೊರೋನಾಘಾತ: ಶುಕ್ರವಾರ ಒಂದೇ ದಿನ ದಾಖಲೆಯ 248 ಕೇಸ್..!

ಬೆಜಾನ್ ದಾರುವಲ್ಲಾ ಕೊರೋನಾ ವೈರಸ್‌ನಿಂದ ನಿಧನರಾಗಿದ್ದಾರೆ ಅನ್ನೋ ಸುದ್ದಿಯನ್ನು ದಾರುವಾಲ್ಲ ಪುತ್ರ ಅಲ್ಲಗೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ತಂದೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ವೈದ್ಯರು ವರದಿ ಬಂದ ಬಳಿಕ ಸ್ಪಷ್ಟ ಮಾಹಿತಿ ನೀಡುವುದಾಗಿ ಪುತ್ರ ಹೇಳಿದ್ದಾರೆ.

ಏಪ್ರಿಲ್ ತಿಂಗಳ ಆರಂಭದಲ್ಲಿ ಬೆಜಾನ್ ದಾರುವಾಲ್ಲಾ ಭಾರತದಲ್ಲಿ ಕೊರೋನಾ ವೈರಸ್ ಇರುವಿಕೆ ಭವಿಷ್ಯ ಹೇಳಿದ್ದರು. ಕೊರೋನಾ ವೈರಸ್ ಭಾರತದಲ್ಲಿ ಉದ್ಯೋಗದ ಸಮಸ್ಯೆ, ಬಡತನ ಸಮಸ್ಯೆಯನ್ನು ಹೆಚ್ಚಿಸಲಿದೆ. ಆದರೆ ಶೀಘ್ರದಲ್ಲೇ ಭಾರತ ಕೊರೋನಾ ವೈರಸ್ ವಿರುದ್ಧ ಗೆಲ್ಲಲಿದೆ. ಇಷ್ಟೇ ಅಲ್ಲ ಫೀನಿಕ್ಸ್‌ನಂತೆ ಭಾರತ ಎದ್ದು ನಿಲ್ಲಲಿದೆ. 2020 ಭಾರತಕ್ಕೆ ಉತ್ತಮ ವರ್ಷವಲ್ಲ. ಆದರೆ 2021 ಭಾರತಕ್ಕೆ ಅತ್ಯುತ್ತಮವಾಗಲಿದೆ. ವಿಶ್ವದಲ್ಲೇ ಭಾರತ ಸೂಪರ್ ಪವರ್ ದೇಶವಾಗಿ ಬೆಳೆಯಲಿದೆ ಎಂದು ಬೆಜಾನ್ ದಾರುವಾಲ್ಲ ಭವಿಷ್ಯ ನುಡಿದಿದ್ದರು.

ಗಣೇಶನ ಆಶೀರ್ವಾದಿಂದ ಕೊರೋನಾ ವೈರಸ್‌ನಿಂದ ಭಾರತ ಮುಕ್ತಿ ಹೊಂದಲಿದೆ. ಆದರೆ ಮೇ ತಿಂಗಳ ಬಳಿಕ  ಕೊರೋನಾ ವೈರಸ್ ತೀವ್ರತೆ ಕಡಿಮೆಯಾಗಲಿದೆ ಎಂದು ಭವಿಷ್ಯ ಹೇಳಿದ್ದರು. 

ಬೆಜಾನ್ ದಾರುವಾಲ್ಲ ನಿಧನ ವಾರ್ತೆ ಎಲ್ಲರಿಗೂ ಬೇಸರ ತರಿಸಿದೆ. ನಾನು ವಿಧಿವಶನಾದಾಗ ಅತ್ಯುತ್ತಮ ವಿದಾಯ ನೀಡಬೇಕು ಎಂದು ನನ್ನಲ್ಲಿ ಹಲವು ಬಾರಿ ಹೇಳಿದ್ದರು. ಆದರೆ ಕೊರೋನಾ ವೈರಸ್ ಕಾರಣ ನಿಮ್ಮ ಆಸೆ ಪೂರೈಸಲು ಸಾಧ್ಯವಾಗುತ್ತಿಲ್ಲ ಅನ್ನೋ ಕೊರಗು ಕಾಡುತ್ತಿದೆ ಎಂದು ದಾರುವಲ್ಲಾ ಆತ್ಮೀಯ ಗೆಳೆಯ ಬೆಹ್ರಮ್ ಮೆಹ್ತ ಹೇಳಿದ್ದಾರೆ.

ಗಣೇಶಾ ಸ್ಪೀಕ್ಸ್. ಕಾಂ ಮೂಲಕ ಅಸಂಖ್ಯಾತ ಓದುಗರನ್ನು ತಲುಪಿದ್ದ ಬೆಜಾನ್ ದಾರುವಲ್ಲ, ಗಣೇಶನ ಭಕ್ತರಾಗಿದ್ದರು. ಬೆಜಾನ್ ದಾರುವಲ್ಲ ನಿಧನ ವಾರ್ತೆಯನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಅವರ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗಣೇಶ್ ಸ್ಪೀಕ್ಸ್ .ಕಾಂ ಸಂಸ್ಥಾಪಕ ಹೇಮಂಗ್ ಪಂಡಿತ್ ಹೇಳಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ, ಮೊರಾರ್ಜಿ ದೇಸಾಯಿ, ನರೇಂದ್ರ ಮೋದಿ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ವರ್ಷಗಳ ಮೊದಲೇ ಭವಿಷ್ಯ ನುಡಿದಿದ್ದರು. ಇಷ್ಟೇ ಅಲ್ಲ ಸಂಜಯ್ ಗಾಂಧಿ ಅಪಘಾತ, ಇಂಧಿರಾ ಗಾಂಧಿ ಹತ್ಯೆ, ಗುಜರಾತ್ ಭೂಕಂಪ, ಅಮಿತಾಬ್ ಬಚ್ಚನ್‌ ಸಿನಿ ಕರಿಯರ್, 2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಗೆಲುವು ಸೇರಿದಂತೆ ಹಲವು ಸೆಲೆಬ್ರೆಟಿಗಳ ಭವಿಷ್ಯ ಕರಾರುವಕ್ಕಾಗಿ ನುಡಿದಿದ್ದರು. 

ಭಾರತ ನಿರ್ಮಾಣ್ ಸಹಸ್ರಮಾನದ ಜ್ಯೋತಿಷಿ ಪ್ರಶಸ್ತಿ, ಭಾರತೀಯ ಜ್ಯೋತಿಷಿ ಫೆಡರೇಶನ್‌ನಿಂದ ಮಹಾಮಹೋಪಾಧ್ಯಾಯ ಪ್ರಶಸ್ತಿ, ರಷ್ಯಾ ಅಸ್ಟ್ರಾಲಜಿ ಸೊಸೈಟಿಯಿಂದ ಅತ್ಯುತ್ತಮ ಜ್ಯೋತಿಷಿ, ಉತ್ತರಖಂಡ ಮುಖ್ಯಮಂತ್ರಿಯಿಂದ ಜೀವನಶ್ರೇಷ್ಠ ಸಾಧನೆ ಪ್ರಶಸ್ತಿ, ಬಾಬಾ ಸಾಹೇಬ್ ಅಂಬೇಡ್ಕರ್ ನೋಬೆಲ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಬೆಜಾನ್ ದಾರುವಾಲ್ಲ ಭಾಜನರಾಗಿದ್ದಾರೆ. 

Latest Videos
Follow Us:
Download App:
  • android
  • ios