Gyanvapi Row : ಇಂದು ಕೋರ್ಟ್ ಗೆ ಸಲ್ಲಿಕೆ ಆಗುವುದಿಲ್ಲ ಸರ್ವೇ ವರದಿ!

ಸಮೀಕ್ಷಾ ವರದಿಯನ್ನು ನ್ಯಾಯಾಲಯದಲ್ಲಿ ಮಂಡಿಸಲು ಇನ್ನೂ 2 ರಿಂದ 3 ದಿನ ಕಾಲಾವಕಾಶ ಬೇಕಾಗಬಹುದು ಎಂಬುದು ಸಹಾಯಕ ನ್ಯಾಯಾಲಯದ ಕಮಿಷನರ್ ಅಜಯ್ ಪ್ರತಾಪ್ ಸಿಂಗ್ ಹೇಳಿದ್ದಾರೆ. ಇತ್ತ, ಮುಸ್ಲಿಂ ಬಾಂಧವರ ಸಮೀಕ್ಷೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ.

Assistant Court Commissioner Ajay Pratap Singh says Gyanvapi mosque survey report not ready yet will seek some days from court san

ವಾರಣಾಸಿ (ಮೇ. 17): ಗ್ಯಾನವಾಪಿ ಮಸೀದಿ ಸಮೀಕ್ಷೆ ವರದಿ (Gyanvapi mosque survey report) ಇನ್ನೂ ಪೂರ್ಣಗೊಂಡಿಲ್ಲ ಮತ್ತು ಕೇವಲ 50% ಸಿದ್ಧವಾಗಿದೆ ಎಂದು ಸಹಾಯಕ ನ್ಯಾಯಾಲಯದ ಆಯುಕ್ತ ಅಜಯ್ ಪ್ರತಾಪ್ ಸಿಂಗ್  ( Assistant Court Commissioner Ajay Pratap Singh) ಮಂಗಳವಾರ ತಿಳಿಸಿದ್ದಾರೆ. 

"ನಾವು ಇಂದು ನ್ಯಾಯಾಲಯದ ಮುಂದೆ ವರದಿಯನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ. ನಾವು ವಾರಣಾಸಿ ನ್ಯಾಯಾಲಯದಿಂದ ಮೂರು-ನಾಲ್ಕು ದಿನಗಳ ಕಾಲಾವಕಾಶವನ್ನು ಕೇಳುತ್ತೇವೆ" ಎಂದು ಅವರು ಹೇಳಿದರು. "ಮೇ 14-16 ರಿಂದ ಮೂರು ದಿನಗಳ ಕಾಲ ಸಮೀಕ್ಷೆ ನಡೆಯಿತು" ಎಂದು ಅಜಯ್ ಪ್ರತಾಪ್ ಸಿಂಗ್ ಹೇಳಿದ್ದಾರೆ.

ಮೂಲಗಳ ಪ್ರಕಾರ ಇಂದು ವರದಿ ಸಿದ್ಧವಾಗಿ ಕೋರ್ಟ್ ಗೆ ಮಂಡನೆಯಾಗಬೇಕಿತ್ತು. ಆದರೆ, ವರದಿ ಸಿದ್ಧವಾಗದಿರುವ ಹಿನ್ನಲೆಯಲ್ಲಿ ಕೋರ್ಟ್ ನಲ್ಲಿ ಇನ್ನೂ ಸ್ವಲ್ಪ ದಿನ ಕಾಲಾವಕಾಶ ಕೇಳುತ್ತೇವೆ. ಕೋರ್ಟ್ ಯಾವ ದಿನದಂದು ವರದಿ ಮಂಡನೆ ಮಾಡಲು ಹೇಳುತ್ತದೆಯೋ ಅದೇ ದಿನ ವರದಿಯನ್ನು ಮಂಡನೆ ಮಾಡಲಿದ್ದೇವೆ. ಈಗಾಗಲೇ ವಿಡಿಯೋಗ್ರಫಿ ಸರ್ವೆಯಲ್ಲಿ ಸಾವಿರಕ್ಕೂ ಅಧಿಕ ಚಿತ್ರಗಳು ಹಾಗೂ ಗಂಟೆಗಳಿಗೂ ಅಧಿಕ ಕಾಲದ ವಿಡಿಯೋವನ್ನು ಮಾಡಲಾಗಿದೆ. ಅದೆಲ್ಲವನ್ನೂ ವೀಕ್ಷಿಸಿ ವರದಿ ಸಿದ್ಧ ಮಾಡಬೇಕಿದೆ ಎಂದು ಹೇಳಿದ್ದಾರೆ.

ಕೆಳ ನ್ಯಾಯಾಲಯದಿಂದ ಸಮೀಕ್ಷಾ ವರದಿ ಮಂಡನೆಗೆ ಇನ್ನೂ ಎರಡ್ಮೂರು ದಿನ ಕಾಲಾವಕಾಶ ಬೇಕಾಗಬಹುದು ಎಂಬುದು ಸಹಾಯಕ ನ್ಯಾಯಾಲಯದ ಆಯುಕ್ತ ಅಜಯ್ ಪ್ರತಾಪ್ ಸಿಂಗ್ ಹೇಳಿಕೆಯಿಂದ ಸ್ಪಷ್ಟವಾಗಿದೆ. ಇತ್ತ, ಮುಸ್ಲಿಂ ಬಾಂಧವರ ಸಮೀಕ್ಷೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಸಮೀಕ್ಷೆಗೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ವೋಚ್ಚ ನ್ಯಾಯಾಲಯವು ಸರ್ವೆಗೆ ತಡೆಯಾಜ್ಞೆ ನೀಡಿದರೆ, ಸಮೀಕ್ಷೆಯು ಭವಿಷ್ಯ ತೂಗುಯ್ಯಾಲೆಯಲ್ಲಿ ನಿಲ್ಲಬಹುದು.

ಅದೇ ಸಮಯದಲ್ಲಿ, ಗ್ಯಾನವಾಪಿ  ಸಮೀಕ್ಷೆಯ ಕುರಿತು ನ್ಯಾಯಾಲಯದಿಂದ ನೇಮಕಗೊಂಡ ಮತ್ತೊಬ್ಬ ವಕೀಲ ವಿಶಾಲ್ ಸಿಂಗ್, 'ನಾನು ನನ್ನ ವರದಿಯನ್ನು ಸಿದ್ಧಪಡಿಸಿದ್ದೇನೆ. ಕಾಲಮಿತಿಯೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು. ವಿಳಂಬವಾದರೆ ನೋಡಲಾಗುವುದು' ಎಂದರು.

ಗ್ಯಾನವಾಪಿ ಮಸೀದಿ ಆವರಣದಲ್ಲಿರುವ ಶೃಂಗಾರ್ ಗೌರಿ ಸ್ಥಳದ ವೀಡಿಯೋಗ್ರಾಫಿ ಸಮೀಕ್ಷೆಯ ಆದೇಶವನ್ನು ಪ್ರಶ್ನಿಸಿ ಮಸೀದಿ ಸಮಿತಿಯು ಗ್ಯಾನವಾಪಿ ವೀಡಿಯೋಗ್ರಫಿ ಆದೇಶವು 1991 ರ ಪೂಜಾ ಸ್ಥಳ ಕಾಯ್ದೆಯ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ಹೇಳಿದೆ. ಇದನ್ನು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಪೀಠವು ಇಂದು ವಿಚಾರಣೆ ನಡೆಸುವ ಸಾಧ್ಯತೆಯಿದೆ.

Gyanvapi mosque survey: ಅದು ಕಾರಂಜಿ, ಶಿವಲಿಂಗವಲ್ಲ ಎಂದ ಅಸಾದುದ್ದೀನ್ ಓವೈಸಿ!

ಕಾಶೀ ವಿಶ್ವನಾಥ ಮಂದಿರದ ಭಾಗ ಕೆಡವಿ ಗ್ಯಾನವಾಪಿ ಮಸೀದಿ ನಿರ್ಮಾಣ ಮಾಡಲಾಗಿದೆ ಅನ್ನೋ ವಿವಾದಕ್ಕೆ ಅಂತ್ಯಹಾಡಲು ಜಿಲ್ಲಾ ನ್ಯಾಯಾಲಯದ ಸರ್ವೆ ಕಾರ್ಯ ಅಂತ್ಯಗೊಂಡಿದೆ. ಅಂತಿಮ ದಿನದ ಸರ್ವೆಯಲ್ಲಿ ಮಸೀದಿಯೊಳಗೆ ಶಿವಲಿಂಗ ಪತ್ತೆಯಾಗಿದೆ ಎಂದು ಅರ್ಜಿದಾರ ವಕೀಲ ವಿಷ್ಣು ಜೈನ್ ಹೇಳಿದ್ದಾರೆ. ಪರಿಣಾಮ ಸಂಪೂರ್ಣ ಆವರಣ ಕೋರ್ಟ್ ಸೀಲ್ ಮಾಡಲು ವಾರಾಣಸಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. ಹಿಂದೂಗಳಿಗೆ ಅತೀ ದೊಡ್ಡ ಗೆಲುವು ಸಿಕ್ಕಿದೆ. ಮಸೀದಿ ಆವರಣದಲ್ಲಿ ಶಿವಲಿಂಗ ಪತ್ತೆಯಾಗಿದೆ. ಲಿಂಗ ಪತ್ತೆಯಾಗಿರುವ ಕಾರಣ ಮಸೀದಿಯನ್ನು ಸಿಆರ್‌ಪಿಎಫ್ ಯೋಧರು ವಶಕ್ಕೆ ಪಡೆಯಲಿದ್ದಾರೆ ಎಂದು ಅರ್ಜಿದಾರ ವಕೀಲ ವಿಷ್ಣು ಜೈನ್ ಹೇಳಿದ್ದಾರೆ. 

Gyanvapi Mosque ಶಿವಲಿಂಗ ಪತ್ತೆಯಾದ ಗ್ಯಾನವಾಪಿ ಮಸೀದಿ ಆವರಣ ವಶಕ್ಕೆ ಪಡೆಯಲು ಕೋರ್ಟ್ ಆದೇಶ!

ಏನಿದು ಪೂಜಾ ಸ್ಥಳಗಳ ಕಾಯಿದೆ?: 1991 ರಲ್ಲಿ ಮಾಡಲಾದ ಪೂಜಾ ಸ್ಥಳಗಳ ಕಾಯಿದೆ (ವಿಶೇಷ ನಿಬಂಧನೆಗಳು) ಪ್ರಕಾರ, ಆಗಸ್ಟ್ 15, 1947 ರ ಪೂಜಾ ಸ್ಥಳಗಳ ಸ್ಥಿತಿಯು ಹಾಗೆಯೇ ಇರುತ್ತದೆ. ಅಯೋಧ್ಯೆಯ ರಾಮಜನ್ಮಭೂಮಿ ಪ್ರಕರಣಕ್ಕೆ ಮಾತ್ರ ಈ ಕಾನೂನಿನಿಂದ ವಿನಾಯಿತಿ ನೀಡಲಾಗಿದೆ. ಕಾನೂನು ಎ ಪ್ರಕಾರ, ಅಯೋಧ್ಯೆ ಪ್ರಕರಣವನ್ನು ಹೊರತುಪಡಿಸಿ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಬದಲಾಯಿಸಲು ಕೋರುವ ಪ್ರಕರಣವನ್ನು ನ್ಯಾಯಾಲಯದಲ್ಲಿ ಮುಂದುವರಿಸಲಾಗುವುದಿಲ್ಲ. ಈ ಕಾನೂನಿನ ಕಾನೂನುಬದ್ಧತೆಯನ್ನು ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದರೂ, ಅದು ವಿಚಾರಣೆಗೆ ಬರಬೇಕಿದೆ.

Latest Videos
Follow Us:
Download App:
  • android
  • ios