AIIMS ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ; ಆಪ್ MLA ಸೋಮನಾಥ್ ಭಾರ್ತಿಗೆ 2 ವರ್ಷ ಜೈಲು!

ಏಮ್ಸ್  ಸಿಬ್ಬಂದಿ ಮೇಲೆ ಹಲ್ಲೆ ಹಾಗೂ ಸಾರ್ವಜನಿಕ ಆಸ್ತಿ ನಾಶ ಪ್ರಕರಣದಲ್ಲಿ ಆರೋಪಿ ಆಮ್ ಆದ್ಮಿ ಪಕ್ಷದ ಎಂಎಲ್ಎ ಸೋಮನಾಥ್ ಭಾರ್ತಿ ತಪ್ಪಿತಸ್ಥ ಎಂದಿರುವ ಕೋರ್ಟ್ ಇದೀಗ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ.

Assaulting AIIMS staff case Delhi court sent AAP MLA Somnath Bharti to jail for two years ckm

ನವದೆಹಲಿ(ಮಾ.23):  ಆಮ್ ಆದ್ಮಿ ಪಕ್ಷಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಆಪ್ MLA ಸೋಮನಾಥ್ ಭಾರ್ತಿಗೆ ದೆಹಲಿ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಏಮ್ಸ್ ಸಿಬ್ಬಂದಿ ಮೇಲಿನ ಹಲ್ಲೆ ಹಾಗೂ ಸಾರ್ವಜನಿಕ ಆಸ್ತಿ ನಾಶ ಮಾಡಿದ ಪ್ರಕರಣದಲ್ಲಿ ಕೋರ್ಟ್ ಈ ಶಿಕ್ಷೆ ವಿಧಿಸಿದೆ. ಕೋರ್ಟ್ ತೀರ್ಪು ಪ್ರಕಟಿಸುತ್ತಿದ್ದಂತೆ, ದೆಹಲಿ ಪೊಲೀಸರು ಸೋಮನಾಥ್ ಭಾರ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ..

ಅಧಿಕಾರಿ ಹತ್ಯೆ ಆರೋಪ , ತಾಹಿರ್ ಹುಸೇನ್ ಅಮಾನತು ಮಾಡಿದ ಆಪ್!...

2016ರಿಂದ ಸೋಮನಾಥ್ ಭಾರ್ತಿ ಏಮ್ಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಹಾಗೂ ಸಾರ್ವಜನಿಕ ಆಸ್ತಿ ನಾಶ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಪ್ರಕರಣ ವಿಚಾರಣೆ ನಡೆಸಿದ ಕೋರ್ಟ್ ಸಾಕ್ಷಿ ಆಧಾರಗಳ ಮೇಲೆ ಸೋಮನಾಥ್ ಭಾರ್ತಿ ತಪ್ಪತಸ್ಥ ಎಂದಿದೆ. ಹೀಗಾಗಿ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ.

2021ರ ಜನವರಿ ತಿಂಗಳಲ್ಲಿ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಪಾಂಡೆ, ಆಪ್ ನಾಯಕನಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿದ್ದರು. ಈ ತೀರ್ಪು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೊರೆ ಹೋದ ಭಾರ್ತಿಗೆ ಇದೀಗ ಮತ್ತೆ ಮುಖಭಂಗವಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 149 ಮತ್ತು 147  ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ತಡೆಗಟ್ಟುವ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ಸೋಮನಾಥ್ ಭಾರ್ತಿ ಅಪರಾಧವನ್ನು ನ್ಯಾಯಾಲಯ ಎತ್ತಿಹಿಡಿದಿದೆ.

Latest Videos
Follow Us:
Download App:
  • android
  • ios