ಗುವ್ಹಾಟಿ(ಮಾ.04):  ಅಸ್ಸಾಂನಲ್ಲಿ ಅಧಿಕಾರಕ್ಕೇರಲು ಕಾಂಗ್ರೆಸ್ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಈ ಮೂಲಕ ನಾರ್ತ್ ಈಸ್ಟ್ ರಾಜ್ಯಗಳಲ್ಲಿ ಭದ್ರಕೋಟೆ ಮಾಡಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಹೀಗಾಗಿ ಪ್ರಿಯಾಂಕ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರ ಒಬ್ಬರ ಬೆನ್ನಲ್ಲೇ ಮತ್ತೊಬ್ಬರು ಅಸ್ಸಾಂಗೆ ಭೇಟಿ ನೀಡುತ್ತಿದ್ದಾರೆ. ಇದರ ನಡುವೆ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಅಸ್ಸಾಂ ಬಚಾವೋ ಆಂದೋಲನ ಆರಂಭಿಸಿದ್ದು ಇದೀಗ ಪೇಚಿಗೆ ಸಿಲುಕಿದೆ.

 ಟೀ ಎಸ್ಟೇಟ್‌ ಕಾರ್ಮಿಕರೊಂದಿಗೆ ಕೆಲಸ ಮಾಡಿದ ಪ್ರಿಯಾಂಕಾ ಗಾಂಧಿ!

ಅಸ್ಸಾಂ ಬಚಾವೋ ಆಂದೋಲನದ ಮೂಲಕ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಮತದಾರರನ್ನು ಸೆಳೆಯುವ ಯತ್ನದಲ್ಲಿದೆ. ಅಸ್ಸಾಂ ಚಹಾ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆ, ವೇತನ ಸೇರಿದಂತೆ ಹಲವು ಸಮಸ್ಯೆಗಳನ್ನು ಮೂಲವಾಗಿಟ್ಟುಕೊಂಡು ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಅಸ್ಸಾಂ ಬಚಾವೋ ಆಂದೋನಲ ಚುರುಕುಗೊಳಿಸಿದೆ. ಆದರೆ ಅಸ್ಸಾಂ ಬಚಾವೋ ಎಂಬ ಶೀರ್ಷಿಕೆಯಲ್ಲಿ ತೈವಾನ್ ಚಹಾ ಎಸ್ಟೇಟ್ ಫೋಟೋ ಹಾಕಿದ ಕಾಂಗ್ರೆಸ್ ಪೇಚಿಗೆ ಸಿಲುಕಿದೆ.

 

ಕಾಂಗ್ರೆಸ್ ಈ ಎಡವಟ್ಟು ಅಸ್ಸಾಂ ಹಣಕಾಸು, ಶಿಕ್ಷಣ ಹಾಗೂ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಸಾಮಾಜಿಕ ಮಾಧ್ಯಮದಲ್ಲಿ ಬಳಿಸಿರುವ ಫೋಟವನ್ನು ಟ್ವೀಟ್ ಮಾಡಿರುವ ಹಿಮಂತ ಬಿಸ್ವಾ ಶರ್ಮಾ, ಅಸ್ಸಾಂ ಬಚಾವೋ ಎಂದು ಹೇಳಿ ತೈವಾನ್ ಚಹಾ ಎಸ್ಟೇಟ್ ಫೋಟೋ ಬಳಕೆ ಮಾಡಿದೆ ಎಂದಿದ್ದಾರೆ.

ಗುಜರಾತ್ ದ್ವೇಷಿಸಿದ ರಾಹುಲ್ ಗಾಂಧಿ ವಿರುದ್ಧ ಆಕ್ರೋಶ!

ಕಾಂಗ್ರೆಸ್‌ನ ಅಧೀಕೃತ  ಅಸ್ಸಾಂ ಬಚಾವೋ  ಪೇಜ್‌ನಲ್ಲಿ, ಅಸ್ಸಾಂ ಬಚಾವೋ ಎಂದು ಹೇಳಿ, ತೈವಾನ್ ದೇಶದ ಚಹಾ ಎಸ್ಟೇಟ್ ಫೋಟೋ ಬಳಕೆ ಮಾಡಿದೆ. ಕಾಂಗ್ರೆಸ್ ನಾಯಕರಿಗೆ ಅಸ್ಸಾಂ ಗುರುತಿಸಲು ಸಾಧ್ಯವಾಗುತ್ತಿಲ್ಲ. ಇದು ಅಸ್ಸಾಂ ಚಹಾ ಕಾರ್ಮಿಕರು ಹಾಗೂ ಅಸ್ಸಾಂ ರಾಜ್ಯಕ್ಕೆ ಕಾಂಗ್ರೆಸ್ ಮಾಡಿದ ಅವಮಾನ ಎಂದು ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ.

 

ಸರಣಿ ಫೋಟೋಗಳನ್ನು ಸಾಮಾಜಕ ಮಾಧ್ಯಮದಲ್ಲಿ ಹಾಕಿರುವ ಕಾಂಗ್ರೆಸ್, ಹಲವು ಎಡವಟ್ಟು ಮಾಡಿದೆ. ಆರಂಭದಲ್ಲಿ ಕಾಂಗ್ರೆಸ್ ಅಸ್ಸಾಂ ಚಹಾ ಎಸ್ಟೇಟ್ ಗುರುತಿಸಲು ಸಾಧ್ಯವಾಗಿಲ್ಲ. ಇದೀಗ ಅಸ್ಸಾಂ ಜನತೆಯನ್ನು ಗುರುತಿಸಲು ವಿಫಲವಾಗಿದೆ. ಇದೀಗ ತೈವಾನ್ ಜನತೆ ಫೋಟೋ ಹಾಕಿ ಅಸ್ಸಾಂ ಬಚಾವೋ ಎಂದಿದೆ ಎಂದು ಹಿಮಂತ ಬಿಸ್ವಾಸ್ ಶರ್ಮಾ ಟ್ವೀಟ್ ಮಾಡಿದ್ದಾರೆ.