Asianet Suvarna News Asianet Suvarna News

ಮತದಾರರ ಪಟ್ಟಿಯಲ್ಲಿ 90 ಮಂದಿ ಹೆಸರು ; ಆದ್ರೆ ಮತ ಚಲಾಯಿಸಿದ್ದು 171 ಜನ!

ಆಸ್ಸಾಂನ ಚುನಾವಣಾ ಬೂತ್‌ ಒಂದರಲ್ಲಿ ಮತದಾರರ ಪಟ್ಟಿಯಲ್ಲಿದ್ದಿದ್ದು 90 ಜನರ ಹೆಸರು, ಆದರೆ ಮತ ಚಲಾಯಿಸಿದ್ದು 171 ಜನ. ಘಟನೆ ಬೆಳಕಿಗೆ ಬರುತ್ತಿದ್ದಂತೆ 5 ಚುನಾವಣಾ ಸಿಬ್ಬಂದಿಗಳು ಅಮಾನತಾಗಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ..

Assam Election Only 90 people were eligible but 171 votes were cast in a booth ckm
Author
Bengaluru, First Published Apr 5, 2021, 5:35 PM IST

ಅಸ್ಸಾಂ(ಎ.05): ಮತದಾರರ ಪಟ್ಟಿಯಲ್ಲಿರುವುದು 90 ಮಂದಿ ಹೆಸರು ಮಾತ್ರ. ಬೆಳಗ್ಗೆಯಿಂದ ಸಂಜೆಯವರಗೆ ನಡೆದ ಮತದಾನದಲ್ಲಿ ಬರೋಬ್ಬರಿ 171 ಮಂದಿ ಮತ ಚಲಾಯಿಸಿದ್ದಾರೆ. ಮತದಾನ ಅವಧಿ ಮುಗಿದರೂ ಜನರು ಸಾಲಗುಟ್ಟಿ ನಿಂತಿರುವ ದೃಶ್ಯ ಅಚ್ಚರಿ ಮೂಡಿಸುವಂತಿತ್ತು.  ಡಿಜಿಟಲೀಕರಣಗೊಂಡಿರುವ ಈಗಿನ ಭಾರತದಲ್ಲಿ ಈ ರೀತಿ ಅಕ್ರಮಗಳು ಸಾಧ್ಯ ಅನ್ನೋದಕ್ಕೆ ಇದೇ ಉತ್ತಮ ಊದಾಹರಣೆ.  ಇದು ಅಸ್ಸಾಂ ಚುನಾವಣೆ ಮತಗಟ್ಟೆಯೊಂದರಲ್ಲಿ ನಡೆದ ಘಟನೆ. 

ತೈವಾನ್ ಫೋಟೋ ಹಾಕಿ ಅಸ್ಸಾಂ ಬಚಾವೋ ಎಂದು ಪೇಚಿಗೆ ಸಿಲುಕಿದ ಕಾಂಗ್ರೆಸ್!

ಆಸ್ಸಾಂನ ದಿಮಾ ಹಸಾವೋ ಹಫ್ಲೋಂಗ್ ಚುನಾವಣಾ ಕ್ಷೇತ್ರದ ಬೂತ್ವೊಂದರಲ್ಲಿ ಕೇವಲ 90 ಜನ ಮತದಾನ ಮಾಡಲು ಅರ್ಹರಿರುವ ಪಟ್ಟಿ ನಿಗದಿಯಾಗಿತ್ತು. ಆದರೆ ಮತದಾನ ಮಾಡಿದ್ದು ಮಾತ್ರ 171 ಜನ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಚುನಾವಾಣಾಧಿಕಾರಿ 5 ಜನ ಮತಗಟ್ಟೆ ಸಿಬ್ಬಂದಿಳನ್ನು ಅಮಾನತು ಮಾಡಿದ್ದಾರೆ. ಜೊತೆಗೆ ಮರುಚುನಾವಣೆಗೆ  ಆದೇಶ ಹೊರಡಿಸಿದ್ದಾರೆ. ಚುನಾವಣೆ ನಡೆದ ಮರುದಿನವೆ ಅಂದರೆ ಏಪ್ರಿಲ್ 2ರಂದು ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿಗಳು ಚುನಾವಣಾ ಸಿಬ್ಬಂದಿಗಳನ್ನು ಅಮಾನತು ಮಾಡುವಂತೆ ಆದೇಶ ಹೊರಡಿಸಿದ್ದರು.   ಆದರೆ ಪ್ರಕರಣ ಏಪ್ರಿಲ್4 ರಂದು  ಬೆಳಕಿಗೆ ಬಂದಿದೆ. 

ಬಿಜಿಪಿ ಅಭ್ಯರ್ಥಿ ಕಾರಿನಲ್ಲಿ ಸಿಕ್ತು EVM ಯಂತ್ರ: ವಿಡೀಯೋ ವೈರಲ್

ಕರ್ತವ್ಯ ಲೋಪದಡಿ   ಐವರು ಮತಗಟ್ಟೆ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಪ್ರತಿ ಬೂತ್, ಪ್ರತಿ ಮತಗಟ್ಟೆಗಳಿಗೆ ಚುನಾವಣಾ ಆಯೋಗ ಮತದಾರರ ಪಟ್ಟಿ ನೀಡುತ್ತದೆ. ಆದರೆ ಇಲ್ಲಿ ಗ್ರಾಮದ ಮುಖ್ಯಸ್ಥ ತಂದಿರುವ ಪಟ್ಟಿಯ ಪ್ರಕಾರ ಚುನಾವಣೆ ನಡೆದಿದೆ. ಆದರೆ ಚುನಾವಣಾ ಆಯೋಗ ನೀಡುವ ಪಟ್ಟಿ ಹೊರತು ಪಡಿಸಿ, ಮುಖ್ಯಮಂತ್ರಿಯೇ ಪಟ್ಟಿ ನೀಡಿದರೂ ಒಪ್ಪಿಕೊಳ್ಳುವಂತಿಲ್ಲ. ಹೀಗಿರುವಾಗ ಗ್ರಾಮದ ಮುಖ್ಯಸ್ಥ ನೀಡಿದ ಪಟ್ಟಿಯನ್ನು ಮತಗಟ್ಟೆ ಅಧಿಕಾರಿಗಳು ಒಪ್ಪಿಕೊಂಡಿರುವುದೇಕೆ? ಅನ್ನೋದು ಸ್ಪಷ್ಟವಾಗಿಲ್ಲ. ಚುನಾವಣಾ ಬೂತ್ ಬಳಿ ಭದ್ರತಾ ಸಿಬ್ಬಂದಿ ಹಾಜರಿದ್ದ ಬಗ್ಗೆಯೂ ಕೂಡ ಸ್ಪಷ್ಟ ಮಾಹಿತಿಯಿಲ್ಲ. ಮೇಲ್ನೋಟಕ್ಕೆ ಭಾರಿ ಅಕ್ರಮದ ವಾಸನೆ ಕಾಣುತ್ತಿದೆ.

ಆಸ್ಸಾಂ ರಾಜ್ಯದಲ್ಲಿ ಈಗಾಗಲೇ ಎರಡನೇ ಹಂತದ ಮತದಾನ ಮುಗಿದಿದ್ದು ಮೂರನೇ ಹಂತದ ಮತದಾನಕ್ಕೆ ಏಪ್ರಿಲ್ 6 ನಿಗದಿಯಾಗಿದೆ. ಮಾರ್ಚ್ 27 ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ 79.93 ರಷ್ಟು ಮತದಾನವಾಗಿತ್ತು.ಎರಡನೇ ಹಂತದ ಚುನಾವಣೆ ಏಪ್ರಿಲ್ 1 ರಂದು ನಡೆದಿದ್ದು ಶೇ 80.96 ರಷ್ಟು ಮತದಾನವಾಗಿದೆ. 

ಆಸ್ಸಾಂನ ಎರಡನೆ ಹಂತದ ಮತದಾನದಲ್ಲಿ 37,34,537 ಪುರುಷರಲ್ಲಿ ಶೇ 80.96ರಷ್ಟು, 36,09,959 ಮಹಿಳೆಯರಲ್ಲಿ ಶೇ 80.94 ರಷ್ಟು ಮತ್ತು 135 ತೃತೀಯ ಲಿಂಗಿಗಳಲ್ಲಿ 5.9ರಷ್ಟು ಜನ ಮತದಾನ ಮಾಡಿದ್ದಾರೆ. ಮೊದಲನೇ ಹಂತದ ಮತದಾನದಲ್ಲಿ 79.93 ರಷ್ಟು ಮತದಾನವಾಗಿದ್ದು ಏರಡನೇ ಹಂತದಲ್ಲಿ ಶೇ 1.03ರಷ್ಟು ಹೆಚ್ಚಿನ ಮತದಾನವಾಗಿದೆ. ಆಸಾಂನಲ್ಲಿ ಏಪ್ರಿಲ್ 6ರಂದು 3ನೇ ಹಂತದ ಮತದಾನ ನಡೆಯಲಿದೆ.

Follow Us:
Download App:
  • android
  • ios