ಅಸ್ಸಾ ವಿಧಾನಸಭಾ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯ ಆರಂಭಿಸಿರುವ ಕಾಂಗ್ರೆಸ್ ಒಂದರ ಮೇಲೊಂದರಂತೆ ಎಡವಟ್ಟು ಮಾಡುತ್ತಿದೆ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಅಸ್ಸಾಂ ಎಂದು ತೈವಾನ್ ದೇಶದ ಫೋಟೋ ಬಳಸಿತ್ತು. ಇದೀಗ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ವಿಡಿಯೋ ಹಾಕಿ ಪೇಚಿಗೆ ಸಿಲುಕಿದೆ.
ಗುವ್ಹಾಟಿ(ಮಾ.07): ಅಸ್ಸಾಂನಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರ ಕೆಡವಲು ಕಾಂಗ್ರೆಸ್ ಎಲ್ಲಾ ಪ್ರಯತ್ನ ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದೆ. ಆದರೆ ಅಷ್ಟೇ ಎಡವಟ್ಟು ಮಾಡೋ ಮೂಲಕ ನಗೆಪಾಟಲಿಗೀಡಾಗಿದೆ. ಇತ್ತೀಚೆಗೆ ಅಸ್ಸಾಂ ಕಾಂಗ್ರೆಸ್ ತೈವಾನ್ ಫೋಟೋ ಬಳಕೆ ಮಾಡಿ ಪೇಚಿಗೆ ಸಿಲುಕಿತ್ತು. ಇದೀಗ ಜಾರ್ಖಂಡ್ ವಿಡಿಯೋ ಬಳಕೆ ಮಾಡಿ ಮತ್ತೊಮ್ಮೆ ಎಡವಿದೆ.
ತೈವಾನ್ ಫೋಟೋ ಹಾಕಿ ಅಸ್ಸಾಂ ಬಚಾವೋ ಎಂದು ಪೇಚಿಗೆ ಸಿಲುಕಿದ ಕಾಂಗ್ರೆಸ್!.
ಅಸ್ಸಾಂ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ 2.47 ನಿಮಿಷದ ವಿಡಿಯೋ ಪೋಸ್ಟ್ ಮಾಡಿದೆ. ಬಳಿಕ ಬಿಜೆಪಿ ಸರ್ಕಾರ ಅಸ್ಸಾಂ ಜನತಗೆ ಸಿಕ್ಕಿರುವುದು ಇದೆ ಎಂದಿದ್ದಾರೆ. ಸಿಎಎ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡಿನ ದಾಳಿ ಮಾಡಿದ್ದಾರೆ. ಇದು ಬಿಜೆಪಿ ಅಸ್ಸಾಂ ಜನತಗೆ ನೀಡಿದ ಕೊಡುಗೆ ಎಂದಿದ್ದಾರೆ.
ಈ ವಿಡಿಯೋದಲ್ಲಿ ಪೊಲೀಸರು ಫೈರಿಂಗ್ ಮಾಡುತ್ತಿರುವ ದೃಶ್ಯವಿದೆ. ನಿಜ. ಆದರೆ ಇದು ಪೊಲೀಸರ ಅಣುಕು ಪ್ರದರ್ಶನದ ವಿಡಿಯೋ. ಜಾರ್ಖಂಡ್‌ನಲ್ಲಿ ಪೊಲೀಸರು ಅಣುಕು ಪ್ರದರ್ಶನದ ವಿಡಿಯೋವನ್ನು ಅಸ್ಸಾಂ ಕಾಂಗ್ರೆಸ್, ಸಿಎಎ ವಿರುದ್ಧ ಅಸ್ಸಾಂ ಜನತೆ ಪ್ರತಿಭಟನೆ ವೇಳೆ ಬಿಜೆಪಿ ಸರ್ಕಾರ ಗೋಲಿಬಾರ್ ಮಾಡಿದೆ ಎಂದು ಬಿಂಬಿಸುವ ಪ್ರಯತ್ನ ಮಾಡಿತ್ತು. ಆದರೆ ಮತ್ತೆ ಅಸ್ಸಾಂ ಕಾಂಗ್ರೆಸ್ ಪೇಚಿಗೆ ಸಿಲುಕಿತು.
ಅಸ್ಸಾಂ ಚುನಾವಣೆ: 70 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ!
2019ರಲ್ಲಿ ಜಾರ್ಖಂಡ್‌ನಲ್ಲಿ ಪೊಲಿಸರು ನಡೆಸಿದ ಅಣಕು ಪ್ರದರ್ಶನದ ಇದೇ ವಿಡಿಯೋವನ್ನು ಕಾಶ್ಮೀರದಲ್ಲಿ ಪೊಲೀಸ ಗೋಲಿಬಾರ್ ಎಂದು ಬಳಸಲಾಗಿತ್ತು. ಈ ಮೂಲಕ ಕೆಲ ಗುಂಪುಗಳು ಕೇಂದ್ರ ಸರ್ಕಾರದ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಸಿತ್ತು. ಬಳಿಕ ಇದು ಅಣುಕು ಪ್ರದರ್ಶನದ ವಿಡಿಯೋ ಎಂದು ಬಹಿರಂಗವಾಗಿತ್ತು. ಇದೀಗ ಅದೇ ವಿಡಿಯೋವನ್ನು ಅಸ್ಸಾಂ ಕಾಂಗ್ರೆಸ್ ಬಳಸಿ ಮತ್ತೆ ನಗೆಪಾಟಲೀಗೀಡಾಗಿದೆ.
ಅಸ್ಸಾಂ ಚಹಾ ಕಾರ್ಮಿಕರು, ಅಸ್ಸಾಂ ಪ್ರದೇಶಗಳ ಫೋಟೋ ಎಂದು ತೈವಾನ್ ದೇಶದ ಫೋಟವನ್ನು ಕಾಂಗ್ರೆಸ್ ಇತ್ತೀಚೆಗೆ ಪೋಸ್ಟ್ ಮಾಡಿತ್ತು. ಇದು ಅಸ್ಸಾಂ ಕಾಂಗ್ರೆಸ್ ಭಾರಿ ಹಿನ್ನಡೆ ತಂದಿತ್ತು.
