ಅಸ್ಸಾಂನ ಉಡಾಲ್‌ಗುರಿ ಜಿಲ್ಲೆಯ ಭೈರಾಗೂರಿಯಲ್ಲಿ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷನಾಗಿದ್ದ ಬೋಡೋಲ್ಯಾಂಡ್ ಪಕ್ಷದ ನಾಯಕ ಬೆಂಜಮಿನ್ ಬಸುಮಾತಾರಿ ಈ ರೀತಿ 500 ರು. ನೋಟಿನ ಮೇಲೆ ಮಲಗಿದ್ದಾನೆ. ಆತನ ಫೋಟೋ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡಿದೆ. ಈತ ಗ್ರಾಮದಲ್ಲಿ ಹಲವು ಸರ್ಕಾರಿ ಯೋಜನೆಗೆ ಫಲಾನುಭವಿಗಳಿಂದ ಲಂಚ ಪಡೆಯುತ್ತಿರುವ ಕುರಿತು ಆರೋಪವಿದೆ.

ಗುವಾಹಟಿ(ಮಾ.28): ಸುಖದ ಸುಪ್ಪತ್ತಿಗೆಯಲ್ಲಿ ಮಲಗುವುದು ಎಲ್ಲರ ಕನಸಾಗಿರುತ್ತದೆ. ಹಾಗೆಯೇ ಇಲ್ಲೊಬ್ಬ ಭ್ರಷ್ಟರಾಜಕಾರಣಿಕಾಂಚಾಣದಿಂದ ಆವೃತವಾಗಿರುವ ಹಾಸಿಗೆಯಲ್ಲಿ ಮಲಗಿರುವ ದೃಶ್ಯ ವೈರಲ್ ಆಗಿದೆ. ಅಸ್ಸಾಂನ ಉಡಾಲ್‌ಗುರಿ ಜಿಲ್ಲೆಯ ಭೈರಾಗೂರಿಯಲ್ಲಿ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷನಾಗಿದ್ದ ಬೋಡೋಲ್ಯಾಂಡ್ ಪಕ್ಷದ ನಾಯಕ ಬೆಂಜಮಿನ್ ಬಸುಮಾತಾರಿ ಈ ರೀತಿ 500 ರು. ನೋಟಿನ ಮೇಲೆ ಮಲಗಿದ್ದಾನೆ. ಆತನ ಫೋಟೋ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡಿದೆ. ಈತ ಗ್ರಾಮದಲ್ಲಿ ಹಲವು ಸರ್ಕಾರಿ ಯೋಜನೆಗೆ ಫಲಾನುಭವಿಗಳಿಂದ ಲಂಚ ಪಡೆಯುತ್ತಿರುವ ಕುರಿತು ಆರೋಪವಿದೆ.

ಪಕ್ಷದಿಂದ ವಜಾ: 

ವಿಡಿಯೋ ವೈರಲ್ ಬೆನ್ನಲ್ಲೇ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬೋಡೋ ಲ್ಯಾಂಡ್ ಪಕ್ಷ, ಕಳೆದ ಜ.10ರಂದೇ ತನ್ನ ಪ್ರಾಥಮಿಕ ಸದಸ್ಯತ್ವದಿಂದ ಕಿತ್ತು ಹಾಕಿರುವುದಾಗಿ ತಿಳಿಸಿದೆ.

ಹಿಂದಿನ ಸರ್ಕಾರ ದೇಗುಲಗಳ ಮಹತ್ವ ಅರಿಯಲಿಲ್ಲ, ತಮ್ಮ ಸಂಸ್ಕೃತಿ ಬಗ್ಗೆ ತಾವೇ ನಾಚಿಕೆ ಪಡುತ್ತಿದ್ದರು: ಮೋದಿ

ವಾಷಿಂಗ್‌ ಮಷಿನ್‌ನಲ್ಲಿ ₹2.54 ಕೋಟಿ!

ನವದೆಹಲಿ: ಭ್ರಷ್ಟರು ಹಣವನ್ನು ಪೈಪ್‌ಗಳಲ್ಲಿ, ಹಾಸಿಗೆಗಳ ಕೆಳಗೆ ಬಚ್ಚಿಟ್ಟಿದ್ದನ್ನು ನೋಡಿದ್ದೇವೆ. ಆದರೆ ವಿದೇಶಿ ನೇರ ನಗದು ವರ್ಗಾವಣೆಯಲ್ಲಿ ಅಕ್ರಮ ನಡೆಸಿರುವ ಕಂಪನಿಯೊಂದರ ಮೇಲೆ ದಾಳಿ ಮಾಡುವ ವೇಳೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳಿಗೆ ವಾಷಿಂಗ್‌ ಮಷಿನ್‌ನಲ್ಲಿ ಅಡಗಿಸಿಟ್ಟಿದ್ದ 2.54 ಕೋಟಿ ರು. ಹಣ ಸಿಕ್ಕಿದೆ. ವಿಜಯ್ ಕುಮಾರ್ ಶುಕ್ಲಾ ಮತ್ತು ಸಂಜಯ್ ಗೋಸ್ವಾಮಿ ಅವರಿಗೆ ಸೇರಿದ ಲಾಜಿಸ್ಟಿಕ್ಸ್ ಕಂಪನಿ ಯೊಂದು 1800 ಕೋಟಿ ರು. ಮೌಲ್ಯದ ಹಣವನ್ನು ವಿದೇಶಿ ನೇರ ನಗದು ವರ್ಗಾವಣೆ ನಿಯಮ ಉಲ್ಲಂಘಿಸಿ ರವಾನೆ ಮಾಡಿದೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಅದಕ್ಕೆ ಸಂಬಂಧಿಸಿದ ಹಲವು ಊರುಗಳಲ್ಲಿ ದಾಳಿ ಇ.ಡಿ. ಮಂಗಳವಾರ ದಾಳಿ ಮಾಡಿದೆ ಹಾಗೂ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಈ ವೇಳೆ ವಾಷಿಂಗ್ ಮಷಿನ್‌ನಲ್ಲಿ 2.54 ಕೋಟಿ ರು.ಗಳನ್ನು ಅಡಗಿಸಿ ಇಟ್ಟಿದ್ದು ಅಚ್ಚರಿ ಮೂಡಿಸಿದೆ.