ಯೂಟ್ಯೂಬ್‌ನಿಂದ ಸಿಲ್ವರ್ ಬಟನ್ ಫಲಕ ಸ್ವೀಕರಿಸಿದ ಏಷ್ಯಾನೆಟ್‌ನ ಮೂರು ಸಹವರ್ತಿ ಚಾನೆಲ್‌ಗಳು!
ಯೂಟ್ಯೂಬ್‌ನಲ್ಲಿ ಸಬ್‌ಸ್ಕ್ರೈಬರ್‌ಗಳನ್ನು ಸಂಪಾದಿಸುವುದು ಸುಲಭದ ಮಾತಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಏಷ್ಯಾನೆಟ್ ನ್ಯೂಸ್ ಸಮೂಹದ ಮೂರು ಸಹವರ್ತಿ ಚಾನೆಲ್‌ಗಳ ಹಾಗೂ ವೆಬ್‌ಸೈಟ್‌ಗಳ ಯೂಟ್ಯೂಬ್ ಪೇಜ್ 1 ಲಕ್ಷ ಚಂದಾದಾರಿಕೆಯ ಗಡಿಯನ್ನು ದಾಟಿ ಮುನ್ನುಗ್ಗುತ್ತಿದೆ.

ಬೆಂಗಳೂರು (ಆ.30): ಸೋಶಿಯಲ್ ಮೀಡಿಯಾದಲ್ಲಿ ತನ್ನದೇ ಆದ ಛಾಪು ಹೊಂದಿರುವ ಹಾಗೂ ಕಮ್ಯುನಿಟಿ ಗೈಡ್‌ಲೈನ್ಸ್ ವಿಚಾರದಲ್ಲಿ ಕಟ್ಟುನಿಟ್ಟಾಗಿರುವ ಯೂಟ್ಯೂಬ್‌ನಲ್ಲಿ ಸಬ್‌ಸ್ಕ್ರೈಬರ್‌ಗಳನ್ನು ಸಂಪಾದಿಸುವುದು ಸುಲಭದ ಮಾತಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಏಷ್ಯಾನೆಟ್ ನ್ಯೂಸ್ ಸಮೂಹದ ಮೂರು ಸಹವರ್ತಿ ಚಾನೆಲ್‌ಗಳು ಮತ್ತು ವೆಬ್‌ಸೈಟ್‌ಗಳ ಯೂಟ್ಯೂಬ್ ಪೇಜ್ ಚಂದಾದಾರಿಕೆಯಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿ ಮುನ್ನುಗ್ಗುತ್ತಿರುವುದು ಮಾತ್ರವಲ್ಲ, ಸ್ವತಃ ಯೂಟ್ಯೂಬ್‌ನಿಂದ ಸಿಲ್ವರ್ ಬಟನ್ ಫಲಕವನ್ನೂ ಸಹ ಪಡೆದುಕೊಂಡಿದೆ. ಏಷ್ಯಾನೆಟ್ ನ್ಯೂಸ್ ತೆಲುಗು ಚಾನೆಲ್ ಪ್ರಸ್ತುತ ಯೂಟ್ಯೂಬ್‌ನಲ್ಲಿ 186K ಸಬ್‌ಸ್ರ್ಕೈಬರ್‌ಗಳನ್ನು ಹೊಂದಿದ್ದು ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಇನ್ನು ಏಷ್ಯಾನೆಟ್ ನ್ಯೂಸ್ ತಮಿಳು ಯೂಟ್ಯೂಬ್ ಪೇಜ್ 209K ಸಬ್‌ಸ್ಕ್ರೈಬರ್‌ಗಳನ್ನು ಸಂಪಾದನೆ ಮಾಡಿದ್ದು ಹೊಸ ಮೈಲಿಗಲ್ಲು ನಿರ್ಮಾಣ ಮಾಡಿದೆ. ಅದರೊಂದಿಗೆ ಏಷ್ಯಾನೆಟ್ ನ್ಯೂಸ್‌ನ ಇಂಗ್ಲೀಷ್ ವೆಬ್‌ಸೈಟ್ ನ್ಯೂಸ್‌ಏಬಲ್‌ನ ಯೂಟ್ಯೂಬ್ ಚಾನೆಲ್ ಕೂಡ 101K ಸಬ್‌ಸ್ಕ್ರೈಬರ್‌ಗಳನ್ನು ದಾಟಿದೆ. ಈ ಮೂರೂ ಚಾನೆಲ್‌ಗಳಿಗೆ ಇತ್ತೀಚೆಗೆ ಯೂಟ್ಯೂಬ್‌ನಿಂದ 1 ಲಕ್ಷಕ್ಕಿಂತ ಅಧಿಕ ಸಬ್‌ಸ್ಕ್ರೈಬರ್‌ಗಳ ಸಾಧನೆ ಮಾಡಿದ್ದ ಕಾರಣಕ್ಕೆ ಸಿಲ್ವರ್ ಬಟನ್ ಫಲಕ ಸಿಕ್ಕಿದೆ.
ಏಷ್ಯಾನೆಟ್ ಸುವರ್ಣ ನ್ಯೂಸ್ ಸಬ್‌ಸ್ಕ್ರೈಬರ್ಸ್ ಎಷ್ಟಿದ್ದಾರೆ: ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಏಷ್ಯಾನೆಟ್ ಮಲಯಾಳಂ ಚಾನೆಲ್‌ಗಳ ಯೂಟ್ಯೂಬ್ ಪೇಜ್‌ಗಳು ಈ ನಿಟ್ಟಿನಲ್ಲಿ ದಾಖಲೆಯ ಅಂತರ ಕಾಯ್ದುಕೊಂಡಿದೆ. ಮಲಯಾಳಂ ಚಾನೆಲ್‌ನ ಯೂಟ್ಯೂಬ್ ಪೇಜ್‌ಗೆ 8.2 ಮಿಲಿಯನ್ ಸಬ್‌ಸ್ಕ್ರೈಬರ್‌ಗಳಿದ್ದರೆ, ಏಷ್ಯಾನೆಟ್ ಸುವರ್ಣ ನ್ಯೂಸ್ 3.96 ಮಿಲಿಯನ್ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದೆ. 4 ಮಿಲಿಯನ್ ಫಾಲೋವರ್‌ಗಳ ಸನಿಹದಲ್ಲಿರುವ ಏಷ್ಯಾನೆಟ್ ಸುವರ್ಣ ನ್ಯೂಸ್ ಯೂಟ್ಯೂಬ್ ಪೇಜ್‌ನಲ್ಲಿ ಈವರೆಗೂ 136Kಗೂ ಅಧಿಕ ವಿಡಿಯೋಗಳು ಪೋಸ್ಟ್ ಆಗಿದೆ.
ಏಷ್ಯಾನೆಟ್ ಸುವರ್ಣನ್ಯೂಸ್: 3.9M ಸಬ್‌ಸ್ಕ್ರೈಬರ್‌ಗಳು
ಏಷ್ಯಾನೆಟ್ ನ್ಯೂಸ್ ಮಲಯಾಳಂ: 8.2M ಸಬ್‌ಸ್ಕ್ರೈಬರ್‌ಗಳು
ಏಷ್ಯಾನೆಟ್ ನ್ಯೂಸ್ ತಮಿಳು: 2.1L ಸಬ್‌ಸ್ಕ್ರೈಬರ್‌ಗಳು
ಏಷ್ಯಾನೆಟ್ ನ್ಯೂಸ್ ತೆಲುಗು: 1.86L ಸಬ್‌ಸ್ಕ್ರೈಬರ್‌ಗಳು
ಏಷ್ಯಾನೆಟ್ ನ್ಯೂಸ್ ನ್ಯೂಸೇಬಲ್: 1.01L ಸಬ್‌ಸ್ಕ್ರೈಬರ್‌ಗಳು
ಏಷ್ಯಾನೆಟ್ ನ್ಯೂಸ್ ಬಾಂಗ್ಲಾ: 61.5K ಸಬ್‌ಸ್ಕ್ರೈಬರ್‌ಗಳು
ಏಷ್ಯಾನೆಟ್ ನ್ಯೂಸ್ ಹಿಂದಿ: 2.62K ಸಬ್‌ಸ್ಕ್ರೈಬರ್‌ಗಳು
ಹೇಗೆ ಸಿಗುತ್ತದೆ ಯೂಟ್ಯೂಬ್ ಫಲಕಗಳು: 2005ರಲ್ಲಿ ಆರಂಭಗೊಂಡ ಯೂಟ್ಯೂಬ್ ಕೇವಲ 11 ವರ್ಷಗಳ ಹಿಂದೆಯಷ್ಟೇ ತನ್ನಲ್ಲಿನ ಕ್ರಿಯೇಟರ್‌ಗಳು ಸಬ್‌ಸ್ರೈಬರ್ ಮೈಲಿಗಲ್ಲು ದಾಟಿದರೆ ಫಲಕಗಳನ್ನು ಉಡುಗೊರೆಯಾಗಿ ನೀಡುವ ಪರಂಪರೆ ಬೆಳೆಸಿಕೊಂಡಿದೆ. ಯೂಟ್ಯೂಬ್‌ನ ಸಿಲ್ವರ್ ಪ್ಲೇ ಬಟನ್ ಎನ್ನುವುದು ಯೂಟ್ಯೂಬ್‌ನ ಕ್ರಿಯೇಟರ್ ಅವಾರ್ಡ್‌ಗಳಲ್ಲಿ ಮೊದಲನೆಯದು. ಇದಕ್ಕಾಗಿ 1 ಲಕ್ಷ ಸಬ್‌ಸ್ಕ್ರೈಬರ್ ಗುರಿಗಳನ್ನು ಮುಟ್ಟಬೇಕಿದೆ. ಸಿಲ್ವರ್ ಬಟನ್ ಫಲಕದಲ್ಲಿ ನಿಮ್ಮ ಚಾನೆಲ್‌ನ ಹೆಸರು ಹಾಗೂ ಕಂಪನಿಯ ಸಿಇಒ ಪತ್ರಗಳು ಕೂಡ ಬರುತ್ತದೆ.
ಈ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿರುವ ಗೋಲ್ಡನ್ ಪ್ಲೇ ಬಟನ್. ಇದಕ್ಕಾಗಿ ಚಾನೆಲ್ 10 ಲಕ್ಷ ಸಬ್‌ಸ್ಕ್ರೈಬರ್‌ಗಳ ಗುರಿಯನ್ನು ಮುಟ್ಟಬೇಕಿರುತ್ತದೆ. ಚಿನ್ನ ಲೇಪಿತ ಹಿತ್ತಾಳೆಯ ಫಲಕ ಇದಾಗಿರುತ್ತದೆ. 2012ರಲ್ಲಿ ಅವಾರ್ಡ್ ಕೊಡಲು ಆರಂಭ ಮಾಡಿದಾಗ, ಮೊದಲು ಇದೇ ಆರಂಭಿಕ ಅವಾರ್ಡ್ ಆಗಿತ್ತು. ಪ್ರಸ್ತುತ ಯೂಟ್ಯೂಬ್‌ನಲ್ಲಿ 29 ಸಾವಿರಕ್ಕೂ ಅಧಿಕ ಚಾನೆಲ್‌ಗಳು 10 ಲಕ್ಷಕ್ಕೂ ಅಧಿಕ ಸಬ್‌ಸ್ಕ್ರೈಬರ್‌ಗಳ ಗಡಿ ದಾಟಿದೆ.
ನಂತರ ಬರುವುದು ಡೈಮಂಡ್ ಪ್ಲೇ ಬಟನ್. 10 ಕೋಟಿಗೂ ಅಧಿಕ ಸಬ್‌ಸ್ಕ್ರೈಬರ್‌ಗಳ ಗುರಿ ಮುಟ್ಟಿದಲ್ಲಿ ಡೈಮಂಡ್ ಪ್ಲೇ ಬಟನ್ ನೀಡಲಾಗುತ್ತದೆ. 2015ರಲ್ಲಿ ಮೊದಲ ಬಾರಿಗೆ ಇದನ್ನು ನೀಡಲು ಆರಂಭ ಮಾಡಲಾಗಿದೆ. ಪ್ರಸ್ತುತ 1 ಸಾವಿರಕ್ಕೂ ಅಧಿಕ ಡೈಮಂಡ್ ಪ್ಲೇ ಬಟನ್ ಹೊಂದಿರುವ ಯೂಟ್ಯೂಬ್ ಚಾನೆಲ್‌ಗಳಿವೆ.
ಕಸ್ಟಮ್ ಕ್ರಿಯೇಟರ್ ಅವಾರ್ಡ್: 2016ರಲ್ಲಿ ನೀಡಲು ಆರಂಭವಾಗಿದ್ದು ಕಸ್ಟಮ್ ಕ್ರಿಯೇಟರ್ ಅವಾರ್ಡ್. 50 ಕೋಟಿ ಸಬ್‌ಸ್ಕ್ರೈಬರ್‌ಗಳ ಗಡಿ ಮುಟ್ಟಿದಾಗ ನೀಡಲಾಗುತ್ತದೆ. ಯಾವ ಚಾನೆಲ್ ಇದನ್ನು ಪಡೆಯುತ್ತದೆಯೂ ಅವರಿಗೆ ವಿಶೇಷವಾಗಿ ಇದನ್ನು ನಿರ್ಮಾಣ ಮಾಡಿ ಕೊಡಲಾಗುತ್ತದೆ. ಹಾಗಾಗಿ ಇದರ ಪ್ರತಿ ಅವಾರ್ಡ್ ಕೂಡ ಭಿನ್ನವಾಗಿರುತ್ತದೆ. ಪ್ರಸ್ತುತ ವಿಶ್ವದಲ್ಲಿ 17 ಚಾನೆಲ್‌ಗಳು ಮಾತ್ರವೇ ಈ ಅವಾರ್ಡ್ ಪಡೆದಿದೆ.
ರೆಡ್ ಡೈಮಂಡ್ ಪ್ಲೇ ಅವಾರ್ಡ್: 2019ರಲ್ಲಿ ಮೊದಲ ಬಾರಿಗೆ ನೀಡಲಾಗಿತ್ತು. 100 ಕೋಟಿ ಸಬ್‌ಸ್ಕ್ರೈಬರ್‌ಗಳ ಗಡಿ ಮುಟ್ಟಿದರೆ ನೀಡಲಾಗುತ್ತದೆ. ಭಾರತದ ಟಿ-ಸಿರೀಸ್ ಹಾಗೂ ಸೆಟ್ ಇಂಡಿಯಾ ಸೇರಿದಂತೆ ನಾಲ್ಕು ಚಾನೆಲ್‌ಗಳು ಮಾತ್ರವೇ ಇದನ್ನು ಪಡೆದುಕೊಂಡಿದೆ.