Asianet Suvarna News Asianet Suvarna News

Rajasthan ರಾಜಕೀಯ ಗುದ್ದಾಟ : ಸಚಿವ ಸಂಪುಟ ಪುನಾರಚನೆ ಮಾಡ್ತಾರಾ ಗೆಹ್ಲೋಟ್?

*2020ರಲ್ಲಿ ಬಂಡಾಯವೆದ್ದಿದ್ದ ಪೈಲಟ್‌ ಬಣ
*ಹೈಕಮಾಂಡ್‌ ಮಧ್ಯಸ್ತಿಕೆಯಿಂದ ಸಂದಾನ!
*ಕ್ಯಾಬಿನೆಟ್‌ ವಿಸ್ತರಣೆಗೆ  ಅಶೋಕ್ ಗೆಹ್ಲೋಟ್ ಹಿಂದೇಟು?
*ಪೈಲಟ್‌ ಬೆಂಬಲಿಗರಿಗೆ ಸಿಗುತ್ತಾ ಮಂತ್ರಿ ಸ್ಥಾನ?
*ಸಂಪುಟ ವಿಸ್ತರಣೆಗೆ ಸಾಕ್ಷಿಯಾಗಲಿದೆ ರಾಜಸ್ತಾನ?
 

Ashok Gehlot to reshuffle or expand cabinet in Rajasthan Soon mnj
Author
Bengaluru, First Published Nov 17, 2021, 1:32 PM IST
  • Facebook
  • Twitter
  • Whatsapp

ರಾಜಸ್ಥಾನ(ನ.17): ಕಳೆದ ಕೆಲವು ದಿನಗಳಿಂದ ರಾಜಸ್ಥಾನ (Rajasthan) ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಮತ್ತು ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ (Sachin Pilot) ನವದೆಹಲಿಯಲ್ಲಿ ಪಕ್ಷದ ಉನ್ನತ ನಾಯಕರನ್ನು ಭೇಟಿಯಾಗುತ್ತಿದ್ದಾರೆ. ರಾಜಸ್ಥಾನದಲ್ಲಿ ಹೆಚ್ಚು ವಿಳಂಬವಾಗಿರುವ ಸಚಿವ ಸಂಪುಟ ವಿಸ್ತರಣೆಗೆ (Cabinet Expansion) ಮುನ್ನ ಇಬ್ಬರೂ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ.ರಾಜಸ್ಥಾನದಲ್ಲಿ ಕ್ಯಾಬಿನೆಟ್ ವಿಸ್ತರಣೆಗಳು ಅಥವಾ ಪುನರ್ರಚನೆಗಳ ಬಗ್ಗೆ ಹಲವು ದಿನಗಳಿಂದ ಕೇಳುತ್ತಿದ್ದೇವೆ.  

ಕ್ಯಾಬಿನೆಟ್ ವಿಸ್ತರಣೆಯು ಈಗ ಒಂದು ವರ್ಷದಿಂದ ಸುದ್ದಿ ಮಾಡುತ್ತಿದೆ. ಈ ಬಾರಿ ವಿಸ್ತರಣೆ ನಿಜವಾಗಿಯೂ  ಆಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ ಆದರೆ ಈ ಬಗ್ಗೆ ಇನ್ನೂ ಯಾರೂ  ದಿನಾಂಕವನ್ನು ನೀಡಲು ಸಿದ್ಧರಿಲ್ಲ. ರಾಜಸ್ಥಾನ 200 ವಿಧಾನಸಭೆ ಸ್ಥಾನಗಳನ್ನು ಹೊಂದಿರುವುದರಿಂದ ಗೆಹ್ಲೋಟ್ ಗರಿಷ್ಠ 30 ಸಚಿವರನ್ನು ಹೊಂದಬಹುದು. ಸದ್ಯ ಸಿಎಂ ಹೊರತಾಗಿ ಹತ್ತು ಕ್ಯಾಬಿನೆಟ್ ಸಚಿವರು ಹಾಗೂ ಹತ್ತು ಮಂದಿ ರಾಜ್ಯ ಸಚಿವರಿದ್ದು, ಒಂಬತ್ತು ಸ್ಥಾನಗಳು ಖಾಲಿ ಇವೆ.

ಶುಕ್ರವಾರ (ನ.12) ಶಾಸಕ ಹಾಗೂ ಯುವ ನಾಯಕ ಸಚಿನ್‌ ಪೈಲಟ್‌ (Sachin Pilot) ಶುಕ್ರವಾರ ದೆಹಲಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿದ ಬಳಿಕ ಆಡಿದ ಮಾತು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌  ಬದಲಾವಣೆಯ ಊಹಾಪೋಹಕ್ಕೆ ನಾಂದಿ ಹಾಡಿವೆ. ಭೇಟಿ ಬಳಿಕ ಮಾತನಾಡಿದ ಸಚಿನ್‌ ಪೈಲಟ್‌, ‘ಭೇಟಿ ವೇಳೆ ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಯಿತು. ಏನಾದರೂ ‘ಬದಲಾವಣೆ’ ಅಗತ್ಯವಿದ್ದರೆ ಅದನ್ನು ಮಾಡಲೇಬೇಕು’ ಎಂದರು. ಇದು ಕುತೂಹಲ ಕೆರಳಿಸಿದೆ.

ರಾಜಸ್ಥಾನದಲ್ಲಿ ಸಚಿವ ಸಂಪುಟ ಪುನಾರಚನೆ ಏಕೆ ನಿರೀಕ್ಷಿಸಲಾಗಿದೆ?

ಕಳೆದ ವರ್ಷ ರಾಜಸ್ಥಾನದ ಉಪಮುಖ್ಯಮಂತ್ರಿಯಾಗಿದ್ದ ಸಚಿನ್ ಪೈಲಟ್ ಅವರೂ ಸೇರಿದಂತೆ 19 ಕಾಂಗ್ರೆಸ್ (Congress) ಶಾಸಕರ ಬಂಡಾಯದ ನೇತೃತ್ವ ವಹಿಸಿದ್ದರು. ಪಕ್ಷವು ಪೈಲಟ್ ಅವರನ್ನು ಉಪ ಮುಖ್ಯಮಂತ್ರಿ ಮತ್ತು ಪಂಚಾಯತ್ ರಾಜ್ ಸಚಿವ ಸ್ಥಾನದಿಂದ ತೆಗೆದುಹಾಕಿದರೆ, ಅವರ ನಿಷ್ಠಾವಂತ ವಿಶ್ವೇಂದ್ರ ಸಿಂಗ್ (Vishvendra Singh) ಅವರನ್ನು ಪ್ರವಾಸೋದ್ಯಮ ಸಚಿವ ಸ್ಥಾನದಿಂದ ಮತ್ತು ರಮೇಶ್ ಮೀನಾ (Ramesh Meena) ಅವರನ್ನು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಸ್ಥಾನದಿಂದ ತೆಗೆದುಹಾಕಿತ್ತು.

ರಾಜಸ್ಥಾನದಲ್ಲಿ ಸರ್ಕಾರ ಉಳಿಸಲು ಪ್ರಿಯಾಂಕಾ ವಾದ್ರಾ ರಂಗಪ್ರವೇಶ

ರಾಜ್ಯದಲ್ಲಿ ಈ ರಾಜಕೀಯದಾಟ ಸುಮಾರು ಒಂದು ತಿಂಗಳಿಗಿಂತ ಹೆಚ್ಚು ಕಾಲ ನಡೆಯಿತು ಮತ್ತು ಪಕ್ಷದ ಹೈಕಮಾಂಡ್ ಎರಡು ಬಣಗಳ ನಡುವೆ ಸಂದಾನ ಮಾಡಲು ಬರಬೇಕಾಯಿತು. ಹೈಕಮಾಂಡ್ ಹಸ್ತಕ್ಷೇಪದ ನಂತರ 2020ರ ಆಗಸ್ಟ್‌ನಲ್ಲಿ ಇಬ್ಬರೂ ಹಸ್ತಲಾಘವ ಮಾಡಿದ್ದರು. ಈ ಬೆನ್ನಲ್ಲೇ ಪೈಲಟ್‌ರ ಬೆಂಬಲಿಗರನ್ನು ಗೆಹ್ಲೋಟ್‌ರ ಕ್ಯಾಬಿನೆಟ್‌ನಲ್ಲಿ ಸೇರಿಸಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ 15 ತಿಂಗಳಿನಿಂದ, ಗೆಹ್ಲೋಟ್ ತಮ್ಮ ಸಂಪುಟ ವಿಸ್ತರಣೆಗೆ ಹಿಂದೇಟು ಹಾಕುತ್ತಿದ್ದಾರೆ.

ರಾಜಸ್ಥಾನದಲ್ಲಿ ಕೆಲವು ವಾರಗಳಲ್ಲಿ ಅಥವಾ ತಿಂಗಳುಗಳಲ್ಲಿ ವಿಸ್ತರಣೆಯು 'ಶೀಘ್ರದಲ್ಲೇ' ಸಂಭವಿಸಬಹುದು, ವಿಶೇಷವಾಗಿ ಸ್ಥಳೀಯ ಸಂಸ್ಥೆ ಚುನಾವಣೆಗಳು ಅಥವಾ ಅಸೆಂಬ್ಲಿ ಉಪಚುನಾವಣೆಗಳು ಮುಗಿದಾಗ ಅಥವಾ ಎರಡನೇ ಕೋವಿಡ್ ಅಲೆಯ ನಂತರ ಅಥವಾ ಗೆಹ್ಲೋಟ್ ಅವರ ಆರೋಗ್ಯ ಸುಧಾರಿಸಿದ ನಂತರ ಎಂಬ ಉತ್ತರಗಳನ್ನು ನೀಡುವ ಮೂಲಕ ಪಕ್ಷದ ರಾಜ್ಯ ಉಸ್ತುವಾರಿ ಅಜಯ್ ಮಾಕೆನ್ (Ajay Maken) ಈವರೆಗೂ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಸಂಪುಟ ವಿಸ್ತರಣೆಗೆ ಗೆಹ್ಲೋಟ್ ವಿಳಂಬ!

ಕ್ಯಾಬಿನೆಟ್ ವಿಸ್ತರಣೆಯನ್ನು "ಶೀಘ್ರದಲ್ಲೇ" ನಿರೀಕ್ಷಿಸಲಾಗಿದೆ ಎಂದು ಪೈಲಟ್ ಸ್ವತಃ ಹಲವಾರು ಸಂದರ್ಭಗಳಲ್ಲಿ ಹೇಳಿದ್ದಾರೆ.  ಪೈಲಟ್‌ನ ನಿಷ್ಠಾವಂತರಿಂದ ಕೂಡ ಗೆಹ್ಲೋಟ್ ಮೇಲೆ ಒತ್ತಡ ಇತ್ತು, ಅವರು ಸಾರ್ವಜನಿಕವಾಗಿ ಗೆಹ್ಲೋಟ್ ಸರ್ಕಾರದ ಮೇಲೆ ದಾಳಿ ಮಾಡಿದ್ದರು. ಆದರೆ ಗೆಹ್ಲೋಟ್ ವಿಸ್ತರಣೆಯನ್ನು ವಿಳಂಬಗೊಳಿಸುವುದನ್ನು ಮುಂದುವರೆಸಿ  ಅಧಿಕಾರವು ತಮ್ಮ ಬಳಿಯೇ ಇದೆ ಮತ್ತು ಪೈಲಟ್ ಬಣದಿಂದ ಅವರ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ ಎಂಬುದನ್ನು ಸಾಧಿಸುತ್ತಿದ್ದಾರೆ.

Rajasthan Congress| ರಾಜಸ್ಥಾನ ಸರ್ಕಾರ: ಮತ್ತೆ ಗೆಹ್ಲೋಟ್‌ ಬದಲಾವಣೆ ಗುಸುಗುಸು!

ಈಗ, ಕೆಲವು ಸಚಿವರು ಉಭಯ ಜವಾಬ್ದಾರಿಗಳನ್ನು ಹೊಂದಿದ್ದು ಮತ್ತು ರಾಜ್ಯ ಚುನಾವಣೆಗಳು ಕೇವಲ ಎರಡು ವರ್ಷಗಳ ಅಂತರದಲ್ಲಿವೆ. ಹಾಗಾಗಿ ವಿಸ್ತರಣೆಯನ್ನು ಇನ್ನು ಮುಂದೆ ವಿಳಂಬ ಮಾಡಲಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಸಚಿನ್ ಪೈಲಟ್ ಬಣವು 2023 ರ ಕೊನೆಯಲ್ಲಿ ರಾಜ್ಯ ವಿಧಾನಸಭೆ ಚುನಾವಣೆಗೆ ಹೋಗುವ ಮುಂಚೆಯೇ ಪೈಲಟ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಆಶಿಸುತ್ತಿತ್ತು. ಅವರ ಬಣದ ಕೆಲವರು ಮತದಾನಕ್ಕೆ ಕನಿಷ್ಠ ಎರಡು ವರ್ಷಗಳ ಮೊದಲು ಇದು ಆಗಬೇಕೆಂದು ಬಯಸಿದ್ದರು. 

ಕ್ಯಾಬಿನೆಟ್‌ ವಿಸ್ತರಿಸುವುದು ಸುಲಭದ ಕೆಲಸವಲ್ಲ!

ಆದರೆ ಕ್ಯಾಬಿನೆಟ್‌ ವಿಸ್ತರಿಸುವುದು ಗೆಹ್ಲೋಟ್‌ಗೆ ಸುಲಭದ ಕೆಲಸವಲ್ಲ. ಏಕೆಂದರೆ ಕಾಂಗ್ರೆಸ್ ಶಾಸಕರು, ಸ್ವತಂತ್ರರು, ಮುಂತಾದವರು ಗೆಹ್ಲೋಟ್ ಅವರೊಂದಿಗೆ ಒಂದು ತಿಂಗಳ ಕಾಲ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳಲ್ಲಿ ತಂಗಿದ್ದರಿಂದ, ಅವರ ತಾಳ್ಮೆ ಮತ್ತು ನಿಷ್ಠೆಗೆ ಸೂಕ್ತ ಪ್ರತಿಫಲ ನೀಡಲಾಗುವುದು ಎಂದು ಗೆಹ್ಲೋಟ್ ಭರವಸೆ ನೀಡಿದ್ದರು. ಇನ್ನೊಂದೆಡೆ ಸಂಪುಟ ಪುನಾರಚನೆ ವೇಳೆ ಜಾತಿ ಮತ್ತು ಪ್ರದೇಶ ಆಧಾರಿತ ಬೇಡಿಕರಗಳನ್ನು  ಗೆಹ್ಲೋಟ್‌ ಪರಿಗಣಿಸಬೇಕಿದೆ. ಹಾಗಾಗಿ ಗೆಹ್ಲೋಟ್‌ ಯಾವ ತಂತ್ರ ಬಳಸಿ ಸಂಪುಟ ಪುನಾರಚನೆ ಮಾಡುತ್ತಾರೆ ಎಂಬುದನ್ನು ನೋಡಬೇಕಿದೆ. ಸದ್ಯದ ಮಟ್ಟಿಗೆ ಸಂಪುಟ ಪುನಾರಚನೆ ಬಗ್ಗೆ ಯಾವ ನಾಯಕರು ನಿಖರ ಮಾಹಿತಿ ನೀಡಿಲ್ಲವಾದರೂ ಸಂಪುಟ ರಚನೆಯ ಸದ್ದು ರಾಜಸ್ತಾನ ಸರ್ಕಾರದಲ್ಲಿ ಕೇಳಿಬರುತ್ತಿದೆ.
 

Follow Us:
Download App:
  • android
  • ios