Asianet Suvarna News Asianet Suvarna News

ಮಿತಿಮೀರಿದ ವಾಯುಮಾಲಿನ್ಯ, ದೆಹಲಿಯಲ್ಲಿ 5 ಜನರಲ್ಲಿ ನಾಲ್ವರಿಗೆ ಆರೋಗ್ಯ ಸಮಸ್ಯೆ!

* ರಾಷ್ಟ್ರ ರಾಜಧಾನಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ

* ದೆಹಲಿ: 5 ಜನರಲ್ಲಿ ನಾಲ್ವರಿಗೆ ಆರೋಗ್ಯ ಸಮಸ್ಯೆ

As pollutant levels spike in Delhi survey reveals 4 in 5 families suffer ailments due to air pollution pod
Author
Bangalore, First Published Nov 9, 2021, 8:53 AM IST
  • Facebook
  • Twitter
  • Whatsapp

ನವದೆಹಲಿ(ನ.09): ರಾಷ್ಟ್ರ ರಾಜಧಾನಿ (Capital City Of India)  ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಯುಮಾಲಿನ್ಯದ (Air Pollution) ಮಟ್ಟಹೆಚ್ಚಳಗೊಂಡಿದ್ದು, ಕಲುಷಿತ ಗಾಳಿಯಿಂದ ಪ್ರತಿ ಐವರಲ್ಲಿ ನಾಲ್ವರು ನಾನಾ ಸಮಸ್ಯೆಗಳಿಗೆ ತುತ್ತಾಗುತ್ತಿರುವುದು ಸಮೀಕ್ಷೆಯಲ್ಲಿ ಬಯಲಾಗಿದೆ. ಲೋಕಲ್‌ ಸರ್ಕಲ್‌ (Local Circle) ಎಂಬ ಸಂಸ್ಥೆ ಆನ್‌ಲೈನ್‌ ಮೂಲಕ ನಡೆಸಿದ ಆನ್‌ಲೈನ್‌ ಸಮೀಕ್ಷೆಯಲ್ಲಿ (Online Survey) 34000 ಜನರು ಭಾಗಿಯಾಗಿದ್ದರು. ಇದರಲ್ಲಲಿ ಶೇ.66ರಷ್ಟುಪುರುಷರು ಮತ್ತು ಶೇ.34ರಷ್ಟುಮಹಿಳೆಯರು

ಕಳೆದ 1 ವಾರದಿಂದ ಅವರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಕೇಳಿದಾಗ ಶೇ.16ರಷ್ಟು ಮಂದಿ ಕೆಮ್ಮು ಮತ್ತು ಗಂಟಲು ನೋವು, ಇನ್ನು ಶೇ.16ರಷ್ಟುಮಂದಿಯಲ್ಲಿ ಮೂಗು ಸೋರುವಿಕೆ, ಕಣ್ಣುರಿ ಮತ್ತು ಶೇ.16ರಷ್ಟುಮಂದಿ ಉಸಿರಾಟದ ಸಮಸ್ಯೆ ಎದುರಿಸುತ್ತಿರುವುದು ತಿಳಿದುಬಂದಿದೆ. ಇನ್ನು ಶೇ.24ರಷ್ಟುಮಂದಿ ಈ ಎಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ತಿಳಿಸಿದ್ದಾರೆ. ಕೇವಲ ಶೇ.20ರಷ್ಟುಮಂದಿ ಮಾತ್ರ ಯಾವುದೇ ತೊಂದರೆಯಾಗಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಶೇ.22ರಷ್ಟುಜನ ವಾಯುಮಾಲಿನ್ಯದಿಂದ ಆಸ್ಪತ್ರೆಗೆ ಹೋಗುವಂತಾಯ್ತು ಎಂದು ಪ್ರತಿಕ್ರಿಯಿಸಿದರೆ, ಶೇ.28ರಷ್ಟುಜನ ಗಾಳಿ ಶುದ್ಧೀಕರಣ ಘಟಕಗಳನ್ನೂ, ಶೇ.61ರಷ್ಟುಜನತೆ ವಾಯುಮಾಲಿನ್ಯದಿಂದ ತಪ್ಪಿಸಿಕೊಳ್ಳಲು ಮಾಸ್ಕ್‌ ಬಳಸುತ್ತಿರುವುದಾಗಿ ತಿಳಿಸಿದ್ದಾರೆ.

ಶ್ವಾಸಕೋಶ ಸಮಸ್ಯೆ ಶೇ.20ರಷ್ಟುಹೆಚ್ಚಳ

ನವದೆಹಲಿ: ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ದೀಪಾವಳಿ ನಂತರ ಮತ್ತು ಬೆಳೆ ತ್ಯಾಜ್ಯ ಸುಡುವುದರಿಂದ ಗಾಳಿಯ ಗುಣಮಟ್ಟಹದಗೆಟ್ಟಿದ್ದು, ಉಸಿರಾಟ ಸಂಬಂಧಿತ ಸಮಸ್ಯೆಗಳು ಶೇ.20ರಷ್ಟುಹೆಚ್ಚಳಗೊಂಡಿವೆ ಎಂದು ವೈದ್ಯರು ತಿಳಿಸಿದಾರೆ. ಅದರಲ್ಲೂ ಈ ವಾಯುಮಾಲಿನ್ಯದಿಂದ ಕೋವಿಡ್‌ನಿಂದ ಗುಣಮುಖರಾದವರಿಗೂ ಅಪಾಯ ಕಟ್ಟಿಟ್ಟಬುತ್ತಿ ಎಂದು ವೈದ್ಯರು ಎಚ್ಚರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬಿಎಲ್‌ಕೆ-ಮ್ಯಾಕ್ಸ್‌ ಆಸ್ಪತ್ರೆ ವೈಧ್ಯ ಡಾ.ಸಂದೀಪ್‌ ನಾಯರ್‌, ಕಳೆದ 15 ರಿಂದ 20 ದಿನಗಳ ಹಿಂದಿನದಕ್ಕೆ ಹೋಲಿಸಿದರೆ ಸದ್ಯ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿರುವವರ ಪ್ರಮಾಣ ಶೇ.20ರಷ್ಟುಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ. ಬೆಳೆ ತ್ಯಾಜ್ಯ ಸುಡುವುದು, ದೀಪಾವಳಿ ಪಟಾಕಿ ಮತ್ತು ಹವಾಮಾನ ಬದಲಾವಣೆಯಿಂದಾಗಿ ಕಳೆದ ಎರಡು ದಿನಗಳಲ್ಲೇ ರೋಗಿಗಳ ಸಂಖ್ಯೆ ಶೇ.10ರಷ್ಟುಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ದೀಪಾವಳಿ (Diwali 2021) ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಿದ್ದು, ಇದರಿಂದಾಗಿ ಜನರ ಆರೋಗ್ಯದ ಕಾಳಜಿಯೂ ಹೆಚ್ಚಾಗಿದೆ. ಈಗಾಗಲೇ ಉಸಿರಾಟದ ಕಾಯಿಲೆ ಇರುವವರು ಹೆಚ್ಚು ಜಾಗರೂಕತೆಯಿಂದ ಇರುವಂತೆ ತಜ್ಞರು ಎಚ್ಚರಿಸಿದ್ದಾರೆ. ಈ ನಡುವೆ ಏಮ್ಸ್ ಮುಖ್ಯಸ್ಥ ರಣದೀಪ್ ಗುಲೇರಿಯಾ (9AIIMS Director Dr Randeep Guleria) ಕೂಡ ದೆಹಲಿ-ಎನ್‌ಸಿಆರ್‌ನಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕೊರೋನಾ ವೈರಸ್ (Coronavirus) ಮಾಲಿನ್ಯದಲ್ಲಿ ಹೆಚ್ಚು ಕಾಲ ಬದುಕುವ ಕ್ಷಮತೆ ಹೊಂದಿದೆ ಎಂದು ಗುಲೇರಿಯಾ ಶುಕ್ರವಾರ ಹೇಳಿದ್ದಾರೆ.

ಕೆಲವು ಅಂಕಿ ಅಂಶಗಳ ಪ್ರಕಾರ, ಕೊರೋನಾ ವೈರಸ್ ದೀರ್ಘಕಾಲದವರೆಗೆ ಮಾಲಿನ್ಯದಲ್ಲಿ (Air Pollution) ಬದುಕುತ್ತದೆ ಎಂದು ಗುಲೇರಿಯಾ ಹೇಳಿದ್ದಾರೆ. ಹೆಚ್ಚು ಮಾಲಿನ್ಯ ಇರುವ ಪ್ರದೇಶಗಳಲ್ಲಿ ಕೊರೋನಾ ಪರಿಸ್ಥಿತಿ ಗಂಭೀರವಾಗಬಹುದು ಎಂದೂ ವಾರ್ನ್ ಮಾಡಿದ್ದಾರೆ. ದೆಹಲಿ ವಾಯು ಮಾಲಿನ್ಯವು ಉಸಿರಾಟದ ಕಾಯಿಲೆಗಳು ವಿಶೇಷವಾಗಿ ಶ್ವಾಸಕೋಶದ ಕಾಯಿಲೆಗಳು, ಅಸ್ತಮಾದಿಂದ ಬಳಲುತ್ತಿರುವ ಜನರ ಮೇಲೆ ಭಾರಿ ಪರಿಣಾಮ ಬೀರುತ್ತಿದೆ ಎಂದೂ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿದ್ದಾರೆ.

हमने एक अध्ययन किया उसमें हमने देखा कि जब भी प्रदूषण का स्तर ज़्यादा होता है तो उसके कुछ दिन बाद बच्चों और व्यस्कों में सांस की समस्या की इमरजेंसी विजिट बढ़ जाती हैं। ये तय है कि प्रदूषण से सांस की समस्या बढ़ जाती है: डॉ.रणदीप गुलेरिया, एम्स के निदेशक

— ANI_HindiNews (@AHindinews) November 5, 2021

ಮಾಲಿನ್ಯದಿಂದಾಗಿ ಕೊರೋನಾ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡು, ವಿಷಮ ಸ್ಥಿತಿಗೆ ಕಾರಣವಾಗಬಹುದು ಎಂದು ಏಮ್ಸ್ (AIIMS) ಮುಖ್ಯಸ್ಥರು ಹೇಳಿದ್ದಾರೆ. ಇದಕ್ಕಾಗಿ ಜನರು ತಪ್ಪದೇ ಮಾಸ್ಕ್ ಧರಿಸುವುದು ಅವಶ್ಯಕ. ಮಾಸ್ಕ್‌ಗಳು ಕೊರೋನಾ ಮತ್ತು ಮಾಲಿನ್ಯ ಎರಡರಿಂದಲೂ ರಕ್ಷಿಸಲು ಸಹಾಯ ಮಾಡುತ್ತದೆ ಎಂದೂ ತಿಳಿಸಿದ್ದಾರೆ. ಅದೇ ಸಮಯದಲ್ಲಿ, ಹೆಚ್ಚುತ್ತಿರುವ ಮಾಲಿನ್ಯವು ವಯಸ್ಸಾದವರಿಗೆ ಮತ್ತು ಶ್ವಾಸಕೋಶ-ಹೃದಯ ಸಮಸ್ಯೆಗಳಿರುವ ಜನರಿಗೆ ವಿಶೇಷವಾಗಿ ಅಪಾಯಕಾರಿ ಎಂದು ಇತರ ವೈದ್ಯರು ಉಲ್ಲೇಖಿಸಿದ್ದಾರೆ.

Follow Us:
Download App:
  • android
  • ios