ಲಸಿಕೆ ಕೊರತೆ: ಮಹಾರಾಷ್ಟ್ರದ ಕೆಲ ಲಸಿಕಾ ಕೇಂದ್ರ ಸ್ಥಗಿತ!

ಲಸಿಕೆ ಕೊರತೆ: ಮಹಾರಾಷ್ಟ್ರದ ಕೆಲ ಲಸಿಕಾ ಕೇಂದ್ರ ಸ್ಥಗಿತ| 3 ದಿನಕ್ಕೆ ಆಗುವಷ್ಟು ಮಾತ್ರ ಲಸಿಕೆ ಲಭ್ಯತೆ: ಮಹಾ ಆರೋಗ್ಯ ಸಚಿವ| ವೈಫಲ್ಯ ಮುಚ್ಚಿಕೊಳ್ಳಲು ಕೊರತೆ ಆರೋಪ: ಕೇಂದ್ರದ ತಿರುಗೇಟು

As Maharashtra Flags Vaccine Shortage Pune Satara Panvel Centres Shut pod

ಮುಂಬೈ(ಏ.08): ಕೊರೋನಾ ಪ್ರಕರಣಗಳಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರ ಹಾಗೂ ಪ್ರಕರಣಗಳ ಏರುಗತಿ ಕಾಣುತ್ತಿರುವ ಆಂಧ್ರಪ್ರದೇಶದಲ್ಲಿ ಕೋವಿಡ್‌ ಲಸಿಕೆಗಳ ಕೊರತೆಯ ಭೀತಿ ಕಾಣತೊಡಗಿದೆ. ಮಹಾರಾಷ್ಟ್ರದಲ್ಲಿ ಇನ್ನು 3 ದಿನಕ್ಕಾಗುವಷ್ಟುಮಾತ್ರ ಲಸಿಕೆ ದಾಸ್ತಾನು ಇದೆ. ಹಲವು ಲಸಿಕಾ ಕೇಂದ್ರಗಳು ಲಸಿಕೆ ನೀಡಿಕೆ ಸ್ಥಗಿತಗೊಳಿಸಿವೆ.

ಈ ಬಗ್ಗೆ ಮಾತನಾಡಿರುವ ಮಹಾರಾಷ್ಟ್ರ ಗೃಹ ಸಚಿವ ರಾಜೇಶ್‌ ಟೋಪೆ, ‘ಕೇವಲ 3 ದಿನಕ್ಕಾಗುವಷ್ಟುಮಾತ್ರ ಲಸಿಕೆ ದಾಸ್ತಾನಿದೆ. ಮುಂಬೈನಲ್ಲಿ ಕೂಡ ಇದೇ ಸ್ಥಿತಿ ಇದ್ದು, ಕೇವಲ 3 ದಿನಕ್ಕೆ ಆಗುವಷ್ಟುಲಸಿಕೆ ಲಭ್ಯವಿದೆ. ಅನೇಕ ಕಡೆ ದಾಸ್ತಾನು ಲಭ್ಯ ಇಲ್ಲದೇ ಲಸಿಕೆ ಕೇಂದ್ರಗಳು ಮುಚ್ಚಿವೆ’ ಎಂದು ಹೇಳಿದ್ದಾರೆ. ಈ ವಿಷಯವನ್ನು ಕೇಂದ್ರ ಆರೋಗ್ಯ ಸಚಿವ ಡಾ

ಹರ್ಷವರ್ಧನ್‌ ಅವರ ಗಮನಕ್ಕೆ ತಂದಿದ್ದಾಗಿಯೂ ಹೇಳಿದ್ದಾರೆ. ಮಹಾರಾಷ್ಟ್ರಕ್ಕೆ ನಿತ್ಯ 5 ಲಕ್ಷ ಡೋಸ್‌ ಬೇಕಿದ್ದು, 14 ಲಕ್ಷ ಡೋಸ್‌ ಮಾತ್ರ ಬುಧವಾರ ಲಭ್ಯವಿದ್ದವು ಎಂದು ಅವರು ಹೇಳಿದ್ದಾರೆ.

ಈ ನಡುವೆ ಮಹಾರಾಷ್ಟ್ರ ಸರ್ಕಾರದ ವಾದವನ್ನು ತಳ್ಳಿಹಾಕಿರುವ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌, ಕೊರೋನಾ ನಿಗ್ರಹದಲ್ಲಿನ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಮಹಾರಾಷ್ಟ್ರ ಸರ್ಕಾರ ಲಸಿಕೆ ಕೊರತೆ ಕುರಿತು ಸುಳ್ಳು ಮಾಹಿತಿ ನೀಡುತ್ತಿದೆ. ದೇಶದಲ್ಲಿ ಲಸಿಕೆಯ ಕೊರತೆ ಇಲ್ಲ. ಎಲ್ಲಾ ರಾಜ್ಯಗಳಿಗೂ ಅಗತ್ಯ ಪ್ರಮಾಣದ ಲಸಿಕೆ ಪೂರೈಕೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

Latest Videos
Follow Us:
Download App:
  • android
  • ios