ನವದೆಹಲಿ[ನ.16]: ತೀವ್ರ ವಾಯುಮಾಲಿನ್ಯದಿಂದ ತತ್ತರಿಸುತ್ತಿರುವ ದಿಲ್ಲಿಯಲ್ಲಿ ಶುದ್ಧಗಾಳಿ ಸಿಗುವುದೇ ಅಪರೂಪವಾಗಿಬಿಟ್ಟಿದೆ. ಅದಕ್ಕೆಂದೇ ಈಗ ‘ಆಕ್ಸಿಜನ್‌ ಬಾರ್‌’ಗಳು (ಆಮ್ಲಜನಕ ಸೇವಿಸುವ ಘಟಕ) ತಲೆಯೆತ್ತಿವೆ! ಅಚ್ಚರಿ ಎನ್ನಿಸಿದರೂ ಇದು ನಿಜ. ‘ಆಕ್ಸಿ ಪ್ಯೂರ್‌’ ಎಂಬ ಆಮ್ಲಜನಕ ಬಾರ್‌ ದಿಲ್ಲಿಯ ಸಾಕೇತ್‌ ಪ್ರದೇಶದಲ್ಲಿ ಕಳೆದ ಮೇನಲ್ಲೇ ಕಾರ್ಯಾರಂಭ ಮಾಡಿದೆ. ಆರ್ಯವೀರ ಕುಮಾರ್‌ ಎಂಬುವರು ಇದರ ಸ್ಥಾಪಕರು.

ವಾಯುಮಾಲಿನ್ಯ: ರಾಷ್ಟ್ರ ರಾಜಧಾನಿ ದೆಹಲಿ ವಿಶ್ವಕ್ಕೆ ನಂ. 1!

299 ರುಪಾಯಿ ಶುಲ್ಕ ಕೊಟ್ಟು ಇಲ್ಲಿ ಆಮ್ಲಜನಕ ಪೈಪನ್ನು ಮೂಗಿಗೆ ಹಾಕಿಕೊಂಡು 15 ನಿಮಿಷ ಆಕ್ಸಿಜನ್‌ ಸೇವಿಸಬಹುದು. 7 ವಿವಿಧ ಸುಗಂಧಗಳಲ್ಲಿ ಆಮ್ಲಜನಕ ಲಭ್ಯವಿದೆ. ಪುದಿನಾ, ಪೆಪ್ಪರ್‌ಮಿಂಟ್‌, ಲವಂಗ, ಕಿತ್ತಳೆ, ನಿಂಬೆ, ನೀಲಗಿರಿ ಹಾಗೂ ಲ್ಯಾವೆಂಡರ್‌- ಸುಗಂಧವುಳ್ಳ ಆಕ್ಸಿಜನ್‌ ಇಲ್ಲಿ ಲಭ್ಯ. ಗ್ರಾಹಕರು ತಮಗಿಷ್ಟವಾದ ಸುಗಂಧ ಆಯ್ಕೆ ಮಾಡಿಕೊಂಡು ಆ ಸುಗಂಧಭರಿತ ಆಮ್ಲಜನಕ ಸೇವಿಸಬಹುದು. ಒಬ್ಬ ವ್ಯಕ್ತಿಗೆ ದಿನಕ್ಕೆ ಒಂದು ಸಲ ಮಾತ್ರ ಆಮ್ಲಜನಕ ಸೇವನೆಗೆ ಅವಕಾಶ ನೀಡಲಾಗುತ್ತದೆ.

ಮೀಟಿಂಗ್‌ಗೆ ಚಕ್ಕರ್, ಕಮೆಂಟರಿಗೆ ಹಾಜರ್; ಗಂಭೀರ್ ಕಾಲೆಳೆದ ಫ್ಯಾನ್ಸ್!

ಈ ಶುದ್ಧ ಆಮ್ಲಜನಕ ಸೇವನೆಯಿಂದ ಕೆಟ್ಟಹವೆಯಿಂದ ಸಮಸ್ಯೆ ಎದುರಿಸುತ್ತಿರುವವರಿಗೆ ಸಮಾಧಾನವಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ತಲೆನೋವು ಸೇರಿದಂತೆ ವಾಯುಮಾಲಿನ್ಯದಿಂದ ಉಂಟಾಗುವ ರೋಗಗಳ ಹರಡುವಿಕೆಯನ್ನು ತಡೆಗಟ್ಟಲು ಇದರಿಂದ ಸಾಧ್ಯ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ. ಅಂದಹಾಗೆ ದಿಲ್ಲಿ ವಿಮಾನ ನಿಲ್ದಾಣ ಸಮೀಪ ದಿಲ್ಲಿಯ 2ನೇ ಆಮ್ಲಜನಕ ಬಾರ್‌ ಡಿಸೆಂಬರ್‌ನಲ್ಲಿ ಆರಂಭವಾಗುವ ಸಾಧ್ಯತೆ ಇದೆ.

ವಾಯುಮಾಲಿನ್ಯದಿಂದ 5ಲಕ್ಷ ಜನ ಸಾವು!

ಬೆಳೆ ತ್ಯಾಜ್ಯ ಸುಡುವಿಕೆ ಏರಿಕೆ: ದಿಲ್ಲಿ ಮಾಲಿನ್ಯ ಮತ್ತೆ ಗಂಭೀರ