ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಮತ್ತೊಂದು ತಿರುವು ಕ್ರ್ಯೂಸ್ ಡ್ರಗ್ಸ್ ಕೇಸ್ ತನಿಖಾಧಿಕಾರಿ ಸ್ಥಾನದಿಂದ ಸಮೀರ್ ವಜಾ ಸಂಜಯ್ ಕುಮಾರ್ ಸಿಂಗ್ ಹೆಗಲಿದೆ ಆರ್ಯನ್ ಖಾನ್ ಕೇಸ್
ಮುಂಬೈ(ನ.05): ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ(Aryan Khan Drug Case) ಮತ್ತೊಂದು ಸ್ಫೋಟಕ ತಿರುವು ಪಡೆದುಕೊಂಡಿದೆ. ಕ್ರ್ಯೂಸ್ ಡ್ರಗ್ಸ್ ಕೇಸ್ ಪ್ರಕರಣದ ತನಿಖಾಧಿಕಾರಿದ್ದ NCB ಮುಖ್ಯಸ್ಥ ಸಮೀರ್ ವಾಂಖೆಡೆ(Sameer Wankhede) ಕೊಕ್ ನೀಡಲಾಗಿದೆ. ಬಾಂಬೆ ಹೈಕೋರ್ಟ್(Bombay High Court) ಮಹತ್ವದ ಸೂಚನೆ ನೀಡಿಧ ಬೆನ್ನಲ್ಲೇ NCB ಇದೀಗ ಆರ್ಯನ್ ಖಾನ್ ಕೇಸ್ ತನಿಖೆಯನ್ನು ಸಮೀರ್ ವಾಂಖೆಡೆಯಿಂದ ಹಿಂಪಡೆದಿದೆ. ಇದು ಆರ್ಯನ್ ಖಾನ್ ಡ್ರಗ್ಸ್ ಕೇಸ್‌ನಲ್ಲಿ ಮತ್ತೊಂದು ಸಂಚಲನ ಸೃಷ್ಟಿಯಾಗಿದೆ.
NCSC ಆಯೋಗಕ್ಕೆ ಜಾತಿ ಪ್ರಮಾಣ ಪತ್ರ ದಾಖಲೆ ಸಲ್ಲಿಸಿದ ಸಮೀರ್ ವಾಂಖೆಡೆ; ತನಿಖೆ ಚುರುಕು!
ಬಾಲಿವುಡ್(Bollywood) ಸೂಪರ್ ಸ್ಟಾರ್ ಶಾರುಖ್ ಖಾನ್(Shah rukh khan) ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣವನ್ನು ಕೇಂದ್ರ ತಂಡ ತನಿಖೆ ನಡೆಸಬೇಕು ಎಂದು ಸಮೀರ್ ವಾಂಖೆಡೆ ಬಾಂಬೆ ಹೈಕೋರ್ಟ್ ರಿಟ್ ಪಿಟೀಶನ್ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಕೇಂದ್ರ ತಂಡ ತನಿಖೆ ನಡೆಸಬೇಕು ಎಂದು ಸೂಚನೆ ನೀಡಿದೆ. ಇದೀಗ ಮುಂಬೈ NCB ತನಿಖಾಧಿಕಾರಿ ಸ್ಥಾನದಿಂದ ಸಮೀರ್ ವಾಂಖೆಡೆಯನ್ನು ವಜಾಗೊಳಿಸಿದೆ. ಇದೀಗ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣವನ್ನು ಡಿಡಿಜಿ ರ್ಯಾಂಕ್ ಆಫೀಸರ್ ಸಂಜಯ್ ಕುಮಾರ್ ಸಿಂಗ್ ಹೆಗಲಿಗೆ ವಹಿಸಲಾಗಿದೆ.
ಸಂಜಯ್ ಕುಮಾರ್ ಸಿಂಗ್ ನೇತೃತ್ವದ ಕೇಂದ್ರ ತಂಡ ಆರ್ಯನ್ ಖಾನ್ ಕೇಸ್ ತನಿಖೆ ನಡೆಸಲಿದೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ, ಸಚಿವ ನಬಾಬ್ ಮಲಿಕ್ ಪುತ್ರ ಸಮೀರ್ ಖಾನ್ ಪ್ರಕರಣ ಸೇರಿದಂತೆ 5 ಪ್ರಕರಣಗಳನ್ನ ಇದೀಗ ಸಂಜಯ್ ಕುಮಾರ್ ಸಿಂಗ್ ಅವರಿಗೆ ವರ್ಗಾಯಿಸಲಾಗಿದೆ.
Drugs Case: 4 ಗಂಟೆ ಅಫೀಸರ್ ವಾಂಖೆಡೆ ವಿಚಾರಣೆ, ಡ್ರಗ್ಸ್ ಪಾರ್ಟಿ ತನಿಖೆ ಕಥೆ ಏನು ?
ಪ್ರಕರಣ ವರ್ಗಾವಣೆ ಕುರಿತು ಪ್ರತಿಕ್ರಿಯೆ ನೀಡಿರುವ ಸಮೀರ್ ವಾಂಖೆಡೆ, ತನಿಖಾಧಿಕಾರಿ ಸ್ಥಾನದಿಂದ ವಜಾ ಮಾಡಿಲ್ಲ. ಕಾರಣ ರಿಟ್ ಪಿಟೀಶನ್ ಅರ್ಜಿ ನಾನೆ ಹಾಕಿದ್ದೇನೆ. ಅರ್ಜಿಯಲ್ಲಿ ಪ್ರಕರಣದ ತನಿಖೆಯನ್ನು ಕೇಂದ್ರ ತಂಡ ತನಿಖೆ ನಡೆಸಬೇಕು ಎಂದು ವಾಂಖೆಡೆ ರಿಟ್ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಪ್ರಕರಣವನ್ನು ಸಂಜಯ್ ಕುಮಾರ್ ಸಿಂಗ್ ಅವರಿಗೆ ವರ್ಗಾಯಿಸಿದೆ. ಹೀಗಾಗಿ ತನಿಖೆಯಿಂದ ವಜಾಗೊಳಿಸಲಾಗಿದೆ ಅನ್ನೋ ಪದ ಸೂಕ್ತವಲ್ಲ ಎಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ಸಮೀರ್ ವಾಂಖೆಡೆ ಮುಂಬೈನ NCB ಜೋನಲ್ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ. ಆರ್ಯನ್ ಖಾನ್ ಪ್ರಕರಣ ತನಿಖೆ ನಡೆಸುವುದಿಲ್ಲ. ಆದರೆ ಇತರ ಕೆಲ ಡ್ರಗ್ಸ್ ಪ್ರಕರಣ ತನಿಖೆಯನ್ನು ಸಮೀರ್ ವಾಂಖೆಡೆ ಮುಂದುವರಿಸಲಿದ್ದಾರೆ. ಬಾಂಬೆ ಹೈಕೋರ್ಟ್ ಸೂಚನೆ ಬೆನ್ನಲ್ಲೇ ನಾಳೆ(ನ.06) ದೆಹಲಿಯ ಕೇಂದ್ರ ತನಿಖಾಧಿಕಾರಿಗಳ ತಂಡ ಮುಂಬೈಗೆ ಆಗಮಿಸಲಿದೆ. ನಾಳೆಯಿಂದ ಆರ್ಯನ್ ಖಾನ್ ಕೇಸ್ ತನಿಖೆ ನಡೆಸಲಿದೆ.
ವಿವಾದದ ಮಧ್ಯೆ ಸಮೀರ್ ವಾಂಖೇಡೆ 'ನಿಖಾ' ಫೋಟೋ ಶೇರ್ ಮಾಡಿದ ಸಚಿವ ಮಲಿಕ್!
ಆರ್ಯನ್ ಖಾನ್ ಪ್ರಕರಣ:
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅಕ್ಟೋಬರ್ ಮೊದಲ ವಾರದಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಾಗಿದ್ದರು. ಮುಂಬೈನ ಕರಾವಳಿ ತೀರದಿಂದ ಗೋವಾಗೆ ಹೊರಟ್ಟಿದ್ದ ಕ್ರ್ಯೂಸ್ ಹಡಗಿನಲ್ಲಿ ಮಾದಕ ದ್ರವ್ಯಗಳು ಬಳಕೆ ಹಾಗೂ ಪೂರೈಕೆಯಾಗುತ್ತಿದೆ ಅನ್ನೋ ಮಾಹಿತಿ ಪಡೆದ ಮುಂಬೈ NCB ಅಧಿಕಾರಿಗಲು ಮುಫ್ತಿಯಲ್ಲಿ ದಾಳಿ ಮಾಡಿದ್ದರು. ಪಾರ್ಟಿ ನಡೆಯುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್, ಮುನ್ಮುನ್ ದಮೇಚಾ ಸೇರಿದಂತೆ ಹಲವರನ್ನು ಬಂಧಿಸಿದ್ದರು.
ಸತತ 27 ದಿನ ಶಾರುಖ್ ಕುಟುಂಬ ಆರ್ಯನ್ ಖಾನ್ ಜಾಮೀನಿಗಾಗಿ ಹೋರಾಟ ನಡೆಸಿದ್ದರು. ಕೊನೆಗೆ ಮಾಜಿ ಅಟಾರ್ನಿ ಜನರಲ್ ಮಕುಲು ರೋಹ್ಟಗಿ ಆರ್ಯನ್ ಖಾನ್ ಪರ ವಾದ ಮಂಡಿಸಿದ್ದರು. ಮುಂಬೈ ಸೆಷನ್ ಕೋರ್ಟ್‌ನಲ್ಲಿ ಜಾಮೀನು ಸಿಗದ ಕಾರಣ, ಬಾಂಬೆ ಹೈಕೋರ್ಟ್‌ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ರೋಹ್ಟಗಿ ವಾದ ಮಂಡನೆಯಿಂದ ಆರ್ಯನ್ ಖಾನ್ ಮುಂಬೈನ ಆರ್ಥರ್ ರೋಡ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಇದರ ನಡುವೆ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ NCB ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಸತತ ಆರೋಪಗಳನ್ನು ಮಾಡಿದ್ದರು.
