ದೇಶದ ಅತ್ಯಂತ ಕಿರಿಯ ಮಹಾಪೌರೆ ಆಗಲು ಸಿದ್ಧತೆ | ಬಿಎಸ್‌ಸಿ 2ನೇ ವರ್ಷದ ವಿದ್ಯಾರ್ಥಿನಿ ಆರ್ಯಾ | ಎಲ್‌ಡಿಎಫ್‌ನಿಂದ ಮೂಡವನಮುಗಲ್‌ ವಾರ್ಡ್‌ನಿಂದ ಸ್ಪರ್ಧಿಸಿ ಗೆಲುವು | ಈಕೆಗೆ ಮಹತ್ವದ ಹುದ್ದೆ ನೀಡಲು ಪಕ್ಷ ಸಿದ್ಧತೆ

ತಿರುವನಂತಪುರಂ(ಡಿ.26): ಕೇರಳದ ರಾಜಧಾನಿ ತಿರುವನಂತಪುರಂ ಮೇಯರ್‌ ಆಗಿ 21 ವರ್ಷದ ಮಹಿಳೆ ಆರ್ಯಾ ರಾಜೇಂದ್ರನ್‌ ಅವರು ಆಯ್ಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಇವರು ಭಾರತದ ಅತಿ ಕಿರಿಯ ಮೇಯರ್‌ ಎನ್ನಿಸಿಕೊಳ್ಳಲಿದ್ದಾರೆ.

ಇತ್ತೀಚಿನ ಮಹಾನಗರಪಾಲಿಕೆ ಚುನಾವಣೆಯಲ್ಲಿ ಮೂಡವನಮುಗಲ್‌ ವಾರ್ಡ್‌ ಸದಸ್ಯೆಯಾಗಿ ಆರ್ಯಾ ಆಯ್ಕೆಯಾಗಿದ್ದರು. ತಿರುವನಂತಪುರ ಪಾಲಿಕೆಯಲ್ಲಿ ಎಲ್‌ಡಿಎಫ್‌ಗೆ ಬಹುಮತ ದೊರೆತಿದ್ದು, ಆರ್ಯಾ ಅವರನ್ನು ಮೇಯರ್‌ ಆಗಿ ಚುನಾಯಿಸಲು ಸಿಪಿಎಂ ಜಿಲ್ಲಾ ಘಟಕ ನಿರ್ಣಯ ತೆಗೆದುಕೊಂಡಿದೆ. ಇದಕ್ಕೆ ರಾಜ್ಯ ಸಮಿತಿ ಅಂತಿಮ ಒಪ್ಪಿಗೆ ನೀಡಿದ ಬಳಿಕ ಅಧಿಕೃತ ಘೋಷಣೆ ಹೊರಬೀಳಲಿದೆ.

ಬಿಜೆಪಿ ಬಿರುಗಾಳಿಗೆ ಬೆಚ್ಚಿಬಿದ್ದ ಕಮಲ್ ಹಸನ್; MNM ಪಕ್ಷದ ಪ್ರಮುಖ ವಿಕೆಟ್ ಪತನ!

ಆರ್ಯಾ ರಾಜೇಂದ್ರನ್‌ ಅವರು ತಿರುವನಂತಪುರದ ಅಲ್‌ ಸೈಂಟ್ಸ್‌ ಕಾಲೇಜಿನಲ್ಲಿ ಬಿ.ಎಸ್‌ಸಿ 2ನೇ ವರ್ಷ(ಗಣಿತ) ದ ವಿದ್ಯಾರ್ಥಿನಿಯಾಗಿದ್ದಾರೆ. ತಂದೆ ರಾಜೇಂದ್ರನ್‌ ಎಲೆಕ್ಟ್ರೀಷಿಯನ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಶ್ರೀಲತಾ ಎಲ್‌ಐಸಿ ಏಜೆಂಟ್‌ ಆಗಿದ್ದಾರೆ. ಮಧ್ಯಮವರ್ಗ ಕುಟುಂಬದಿಂದ ಬಂದಿರುವ ಆರ್ಯಾ ಅವರು ಸಿಪಿಎಂನ ವಿದ್ಯಾರ್ಥಿ ಘಟಕದಲ್ಲಿ ಸಕ್ರಿಯರಾಗಿದ್ದಾರೆ. ಪಕ್ಷದ ಮಕ್ಕಳ ಘಟಕದಲ್ಲೂ ಕಾರ್ಯನಿರ್ವಹಿಸಿದ್ದರು.

ಮೇಯರ್‌ ಆಗಲಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ ಅವರು, ‘ಅತ್ಯಂತ ಸಂತಸದಿಂದ ಈ ಹುದ್ದೆ ಸ್ವೀಕರಿಸಲಿದ್ದೇವೆ. ಶಿಕ್ಷಣವನ್ನೂ ಮುಂದುವರಿಸುವೆ. ರಾಜಕೀಯ ರಂಗದಲ್ಲೂ ಮುನ್ನಡೆಯಲಿದ್ದೇನೆ’ ಎಂದರು.

ಕೃಷಿ ಕಾಯ್ದೆಗಳಿಂದ ರೈತರ ಜಮೀನು ಖಾಸಗಿ ಪಾಲಾಗಲ್ಲ

ನಮ್ಮ ಪಕ್ಷವು ಈ ದೊಡ್ಡ ಜವಾಬ್ದಾರಿಯನ್ನು ನೀಡಿದರೆ ಅತ್ಯಂತ ಸಂತಸದಿಂದ ಸ್ವೀಕರಿಸುತ್ತೇನೆ. ನಾನು ಶಿಕ್ಷಣವನ್ನೂ ಮುಂದುವರಿಸುವೆ. ರಾಜಕೀಯ ರಂಗದಲ್ಲೂ ಮುನ್ನಡೆಯುವೆ ಎಂದಿದ್ದಾರೆ ಆರ್ಯಾ ರಾಜೇಂದ್ರನ್‌.