ನವದೆಹಲಿ(ಫೆ.08): ದೆಹಲಿ ವಿಧಾನಸಭೆ ಚುನಾವಣೆ ಮುನ್ನಾದಿನ ದೆಹಲಿ ಮತದಾರರಿಗೆ ಸಿಎಂ ಅರವಿಂದ್ ಕೇಜ್ರಿವಾಲ್ ಮಾಡಿರುವ ಟ್ವೀಟ್ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಮತದಾನಕ್ಕೂ ಮೊದಲು ಟ್ವೀಟ್ ಮಾಡಿದ್ದ ಕೇಜ್ರಿ, ಮನೆಯ ಹೆಂಗಸರು ತಪ್ಪದೇ ಮತದಾನ ಮಾಡಬೇಕು ಅಲ್ಲದೇ ಮನೆಯ ಗಂಡಸರಿಗೂ ಮತದಾನ ಮಾಡುವಂತೆ ಪ್ರೆರೇಪಿಸಬೇಕು ಎಂದು ಮನವಿ ಮಾಡಿದ್ದರು.

ಈ ಟ್ವೀಟ್’ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ, ಕೇಜ್ರಿವಾಲ್ ಮಹಿಳಾ ವಿರೋಧಿ ಎಂದು ಹರಿಹಾಯ್ದಿದೆ.  ಮಹಿಳೆಯರನ್ನು ಕೇವಲ ಗಂಡಸರ ಅಧೀನ ಎಂದು ಕೇಜ್ರಿವಾಲ್ ಭಾವಿಸದಂತಿದೆ ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.

ಆಪ್ ಕಾರ್ಯಕರ್ತನ ಕೆನ್ನೆಗೆ ರಪ್ ಅಂತಾ ಬಾರಿಸಲೆತ್ನಿಸಿದ ಅಲ್ಕಾ: ಮತಗಟ್ಟೆ ಬಳಿ ಹೋಯ್ಕ ಬಡ್ಕಾ!

ನಿಮ್ಮ ಮನೆಯನ್ನು ಹೇಗೆ ಕಾಳಜಿಯಿಂದ ನಿಭಾಯಿಸುತ್ತೀರೋ ಹಾಗೆಯೇ ದೆಹಲಿಯ ಕಾಳಜಿವಹಿಸುವ ಜವಾಬ್ದಾರಿ ನಿಮ್ಮ ಮೇಲಿದ್ದು, ನೀವೂ ವೋಟ್ ಮಾಡಿ ಮನೆಯ ಗಂಡಸರನ್ನೂ ವೋಟ್ ಮಾಡುವಂತೆ ಪ್ರೆರೇಪಿಸಿ ಎಂದು ಮಹಿಳಾ ಮತದಾರರಲ್ಲಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದರು.

ಕೇಜ್ರಿ ಟ್ವೀಟ್’ಗೆ ವಿರೋಧ ವ್ಯಕ್ತಪಡಿಸಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಮಹಿಳೆಯರು ಮನೆಗಷ್ಟೇ ಸಿಮೀತ ಎಂಬರ್ಥದಲ್ಲಿ ಹೇಳಿರುವ ಕೇಜ್ರಿವಾಲ್ ಮಹಿಳಾ ವಿರೋಧಿ ಎಂದು ಹರಿಹಾಯ್ದಿದ್ದಾರೆ.

ಇನ್ನು ಕೇಜ್ರಿವಾಲ್ ಹೇಳಿಕೆಯನ್ನು ವಿರೋಧಿಸಿರುವ ಮತ್ತೋರ್ವ ಬಿಜೆಪಿ ನಾಯಕಿ ನುಪುರ್ ಶರ್ಮಾ, ಆಧುನಿಕ ಮಹಿಳೆ ಗಂಡಸಿನ ಅಧೀನ ಎಂದು ಹೇಳಿರುವ ಕೇಜ್ರಿವಾಲ್ ಮಹಿಳಾ ಸಮುದಾಯದ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.