Asianet Suvarna News Asianet Suvarna News

Breaking: ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ 6 ತಿಂಗಳ ಬಳಿಕ ಜಾಮೀನು ಮಂಜೂರು


ಮುಂದಿನ ತಿಂಗಳು ನಡೆಯಲಿರುವ ಹರ್ಯಾಣ ವಿಧಾನಸಭಾ ಚುನಾವಣೆಗೆ ಮುನ್ನ ಅರವಿಂದ್ ಕೇಜ್ರಿವಾಲ್ ಅವರು ಬಿಡುಗಡೆ ಆಗಲಿದ್ದು, ಆಪ್‌ಗೆ ಹೆಚ್ಚಿನ ಬಲ ನೀಡಿದಂತಾಗಿದೆ.

Arvind Kejriwal granted bail by Supreme Court to leave jail after 6 months san
Author
First Published Sep 13, 2024, 10:56 AM IST | Last Updated Sep 13, 2024, 11:09 AM IST

ನವದೆಹಲಿ (ಸೆ.13):  ದೆಹಲಿ ಮದ್ಯ ನೀತಿ ಹಗರಣದಲ್ಲಿ ಮೊದಲ ಬಾರಿಗೆ ಬಂಧನವಾದ ಆರು ತಿಂಗಳ ನಂತರ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಶುಕ್ರವಾರ ಸಿಬಿಐ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್, ವಿಜಯ್ ನಾಯರ್ ಮತ್ತು ಭಾರತ್ ರಾಷ್ಟ್ರ ಸಮಿತಿಯ ಕೆ ಕವಿತಾ ನಂತರ ಕೇಜ್ರಿವಾಲ್ ಜೈಲಿನಿಂದ ಹೊರಬಂದ ನಾಲ್ಕನೇ ಉನ್ನತ ನಾಯಕರಾಗಿದ್ದಾರೆ. ಕೇಜ್ರಿವಾಲ್ ಅವರ ಬಿಡುಗಡೆಯು ಹರ್ಯಾಣ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಂದಿದ್ದು, ಆಮ್‌ ಆದ್ಮಿ ಪಕ್ಷಕ್ಕೆ ಹೆಚ್ಚಿನ ಬಲ ನೀಡಲಿದೆ. ಹರಿಯಾಣದಲ್ಲಿ ಆಪ್‌ ಪಕ್ಷವು, ಬಿಜೆಪಿ ಹಾಗೂ ಇಂಡಿಯಾ ಬ್ಲಾಕ್‌ನ ಪಾಲುದಾರರಾಗಿರುವ ಕಾಂಗ್ರೆಸ್‌ಗೆ ದೊಡ್ಡ ಸವಾಲು ನೀಡುತ್ತಿದೆ.

ದೆಹಲಿ ಮುಖ್ಯಮಂತ್ರಿಯನ್ನು ಮಾರ್ಚ್ 21 ರಂದು ಮೊದಲ ಬಾರಿಗೆ ಇಡಿ ಬಂಧಿಸಿತು, ಆಪಾದಿತ ಮದ್ಯ ನೀತಿ ಹಗರಣದಿಂದ ಉಂಟಾದ ಮನಿ ಲಾಂಡರಿಂಗ್ ಪ್ರಕರಣದಲ್ಲಿ. ಜೂನ್ 26 ರಂದು ಇಡಿ ಕಸ್ಟಡಿಯಲ್ಲಿದ್ದಾಗ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಅವರನ್ನು ಬಂಧಿಸಿತ್ತು. ವಾರಗಳ ನಂತರ, ಜುಲೈ 12 ರಂದು, ಇಡಿ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತು. ಆದರೆ, ಸಿಬಿಐನಿಂದ ಬಂಧನಕ್ಕೊಳಗಾಗಿ ಅವರು ತಿಹಾರ್ ಜೈಲಿನಲ್ಲೇ ಇದ್ದರು.

ಟೈಪ್ II ಡಯಾಬಿಟಿಸ್‌ನಿಂದ ಬಳಲುತ್ತಿರುವ ಕೇಜ್ರಿವಾಲ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಸಂದರ್ಭದಲ್ಲಿ, ಇಡಿ ಪ್ರಕರಣದಲ್ಲಿ "ಬಿಡುಗಡೆಯ ತುದಿ" ಯಲ್ಲಿದ್ದಾಗ ಸಿಬಿಐ ತನ್ನನ್ನು ಬಂಧಿಸಿದೆ ಎಂದು ವಾದಿಸಿದ್ದರು. ಕೇಜ್ರಿವಾಲ್ ಅವರನ್ನು ಪ್ರತಿನಿಧಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಸಿಬಿಐನ ಕ್ರಮವು ಎಎಪಿ ಮುಖ್ಯಸ್ಥರನ್ನು ಕಂಬಿಗಳ ಹಿಂದೆ ಇರಿಸಲು ವಿನ್ಯಾಸಗೊಳಿಸಲಾದ "ಇನ್ಯಶುರೆನ್ಸ್‌ ಅರೆಸ್ಟ್‌" ಎಂದು ಬಣ್ಣಿಸಿದರು.

ದೆಹಲಿ ಸಿಎಂ ಕೇಜ್ರಿವಾಲ್‌ರನ್ನು ಜೈಲಲ್ಲಿಡಲು ಪ್ರಧಾನಿ ಮೋದಿ ಸಂಚು: ಆಪ್‌

ಬಿಕ್ಕಟ್ಟಿನ ಸಮಯದಲ್ಲಿ ವಿರೋಧ ಪಕ್ಷಗಳು ಮತ್ತು ಅವರ ನಾಯಕರ ಆಯ್ಕೆಯ ವಕೀಲರಾಗಿರುವ ಸಿಂಘ್ವಿ, ಕೇಜ್ರಿವಾಲ್ ಅವರು "ಸಾಂವಿಧಾನಿಕ ಕಾರ್ಯನಿರ್ವಾಹಕ" ಆಗಿರುವುದರಿಂದ ವಿದೇಶಕ್ಕೆ ಓಡಿಹೋಗಲು ಸಾಧ್ಯವಿಲ್ಲ ಮತ್ತು ಸಾಕ್ಷ್ಯಾಧಾರಗಳನ್ನು ತಿರುಚುವ ಅಪಾಯವಿಲ್ಲ ಎಂದು ಹೇಳಿದರು. ಮತ್ತು ಈಗಾಗಲೇ ಹಲವು ಸಾಕ್ಷ್ಯವನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದರು.

ಯೂಟ್ಯೂಬರ್ ಧ್ರುವ ರಾಠಿ ದೆಹಲಿ ಕೋರ್ಟ್‌ ಸಮನ್ಸ್

ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು ಸಿಬಿಐಅನ್ನು ಪ್ರತಿನಿಧಿಸಿದ್ದರು. ಅಬಕಾರಿ ನೀತಿಯಿಂದ ಪಡೆದ ಕಿಕ್‌ಬ್ಯಾಕ್‌ಗಳ ದೊಡ್ಡ ಭಾಗವನ್ನು ಎಎಪಿ 2022 ರಲ್ಲಿ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಳಸಿಕೊಂಡಿದೆ ಎಂದು ಪ್ರತಿಪಾದಿಸಿದರು. ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ಎಸ್‌ವಿ ರಾಜು, ಮುಖ್ಯಮಂತ್ರಿಗಳು ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯವನ್ನು ಎಂದಿಗೂ ಸಂಪರ್ಕಿಸಲಿಲ್ಲ, ಇದು ಸಾಮಾನ್ಯ ಕ್ರಮವಾಗಿದೆ. ಕೇಜ್ರಿವಾಲ್‌ಗೆ ಜಾಮೀನು ನೀಡಿದರೆ ದೆಹಲಿ ಹೈಕೋರ್ಟ್‌ನ ಮನೋಸ್ಥೈರ್ಯ ಕುಸಿಯಲಿದೆ ಎಂದು ಹೇಳಿದ್ದರು.

Latest Videos
Follow Us:
Download App:
  • android
  • ios