Asianet Suvarna News Asianet Suvarna News

Viral News: ಭಗತ್‌ ಸಿಂಗ್‌, ಅಂಬೇಡ್ಕರ್‌ ಅವರಿಗೆ ಸರಿಸಮ ಎನ್ನುವಂತೆ ಕೇಜ್ರಿವಾಲ್‌ ಫೋಟೋ ಹಾಕಿದ ಆಪ್‌!

ಗುರುವಾರ ದೆಹಲಿಯ ಸಿಎಂ ಅರವಿಂದ್‌ ಕೇಜ್ರಿವಾಲ್‌ ಪತ್ನಿ ಸುನೀತಾ ಕೇಜ್ರಿವಾಲ್‌, ತಿಹಾರ್‌ ಜೈಲಿನಿಂದ ಪತಿ ನೀಡಿರುವ ಸಂದೇಶವನ್ನು ಓದಿದ್ದಾರೆ. ಈ ವೇಳೆ ಸೋಶಿಯಲ್‌ ಮೀಡಿಯಾ ಮಂದಿ ಅವರ ಹಿಂದೆ ಇದ್ದ ಫೋಟೋದ ಕಡೆ ಜನರ ಗಮನಸೆಳೆದಿದ್ದಾರೆ.

Arvind Kejriwal behind bars Photo as backdrop Sunita Kejriwal shares husband message from Tihar san
Author
First Published Apr 4, 2024, 3:53 PM IST

ನವದೆಹಲಿ (ಏ.4): ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಅಕ್ರಮ ಮದ್ಯ ನೀತಿಗೆ ಸಂಬಂಧ ಪಟ್ಟಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್‌ ಏಪ್ರಿಲ್‌ 15ರವರರೆಗೆ ನ್ಯಾಯಾಂಗ ಬಂಧನಕ್ಕೆ ವಿಧಿಸಿದೆ. ಪ್ರಸ್ತುತ ಅರವಿಂದ್‌ ಕೇಜ್ರಿವಾಲ್‌ ತಿಹಾರ್‌ ಜೈಲಿನಲ್ಲಿ ದಿನ ಕಳೆಯುತ್ತಾರೆ. ಅರವಿಂದ್‌ ಕೇಜ್ರಿವಾಲ್‌ ಅವರ ಪತ್ನಿ ಸುನೀತಾ ಕೇಜ್ರಿವಾಲ್‌, ಗುರುವಾರ ಸಿಎಂ ಕಚೇರಿಯಿಂದಲೇ ಆಪ್‌ ನಾಯಕರಿಗೆ ಕರೆ ಕೊಟ್ಟಿದ್ದಾರೆ. ಮುಂದಿನ ದಿನಗಳು ಕಷ್ಟವಾಗಿರುವ ಕಾರಣದಿಂದಾಗಿ ಆಮ್‌ ಆದ್ಮಿ ಪಾರ್ಟಿಯ ಎಲ್ಲಾ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಿಗೆ ಪ್ರತಿನಿತ್ಯ ಭೇಟಿ ನೀಡಬೇಕು. ಜನರು ಯಾವುದೇ ಸಮಸ್ಯೆ ಎದುರಿದೇ ಇರುವಂತೆ ನೋಡಿಕೊಳ್ಳಬೇಕು ಎಂದಿದ್ದಾರೆ. ಈ ನಡುವೆ ಅವರ ವಿಡಿಯೋ ಭಾಷಣದಲ್ಲಿ ಕುತೂಹಲಕಾರಿ ಅಂಶ ಕಂಡಿದೆ. ಸಾಮಾನ್ಯವಾಗಿ ಅರವಿಂದ್‌ ಕೇಜ್ರಿವಾಲ್‌ ಮಾತನಾಡುವಾಗ ಅವರ ಹಿಂದೆ ಭಗತ್‌ ಸಿಂಗ್‌ ಹಾಗೂ ಬಾಬಾ ಅಂಬೇಡ್ಕರ್‌ ಅವರ ಚಿತ್ರಗಳು ಇರುತ್ತಿದ್ದವು. ಗುರುವಾರ ಈ ಎರಡೂ ಫೋಟೋಗಳ ನಡುವೆ ಇವರಿಗೆ ಸರಿಸಮಾನವಾಗಿ ಅರವಿಂದ್‌ ಕೇಜ್ರಿವಾಲ್ ಅವರ ಫೋಟೋಶಾಪ್‌ ಫೋಟೋವನ್ನು ಹಾಕಲಾಗಿದೆ. ಜೈಲಿನ ಹಿಂದೆ ಇರುವ ಅರವಿಂದ್‌ ಕೇಜ್ರಿವಾಲ್‌ ಮುಖದ ಫೋಟೋವನ್ನು ಹಾಕಲಾಗಿದೆ.

ಇದರ ಬೆನ್ನಲ್ಲಿಯೇ ಸೋಶಿಯಲ್‌ ಮೀಡಿಯಾದಲ್ಲಿ ಇದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಹಾಗೂ ಸಂವಿಧಾನ ರಚಿಸಿದ ಬಾಬಾ ಅಂಬೇಡ್ಕರ್‌ಗೆ ಸಮ ಎನ್ನುವಂತೆ ಅರವಿಂದ್ ಕೇಜ್ರಿವಾಲ್‌ ಅವರ ಚಿತ್ರವನ್ನು ಇವರಿಬ್ಬರ ನಡುವೆ ಹಾಗೂ ಇವರಿಬ್ಬರ ಸರಿಸಮಾನವಾಗಿ ಹಾಕಿರುವುದು ಆಮ್‌ ಆದ್ಮಿ ಪಕ್ಷದ ಮೊಂಡುತನವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.

'ಭಗತ್‌ ಸಿಂಗ್‌ ಹಾಗೂ ಬಿಆರ್‌ ಅಂಬೇಡ್ಕರ್‌ ನಡುವೆ ಅರವಿಂದ್‌ ಕೇಜ್ರಿವಾಲ್‌ ಅವರು ಜೈಲಿನಲ್ಲಿರುವ ಚಿತ್ರಗಳನ್ನು ಸ್ಯಾಂಡ್‌ವಿಚ್‌ ಮಾಡಲಾಗಿದೆ. ಇದು ಪರ್ಫೆಕ್ಷನ್‌. ಇದು ಸಿನಿಮಾ' ಎಂದು ಟ್ವೀಟ್‌ ಮಾಡಲಾಗಿದೆ.

ರಾಜಕಾರಣಿಗಳು ಎಷ್ಟು ಡ್ರಾಮಾ ಮಾಡ್ತಾರೆ ಅನ್ನೋದು ಇದರಿಂದ ಗೊತ್ತಾಗುತ್ತಿದೆ. ಇವರು ಎಕ್ತಾ ಕಪೂರ್‌ ಸೀರಿಯಲ್‌ಅನ್ನೂ ಬೀಟ್‌ ಮಾಡ್ತಾರೆ. ದೇಶದಲ್ಲಿ ಜನ ನ್ಯಾಯ ವ್ಯವಸ್ಥೆಯ ಬದಲಾಗಿ ಇಂಥ ಡ್ರಾಮಾಗಳನ್ನೇ ಹೆಚ್ಚು ಟ್ರಸ್ಟ್‌ ಮಾಡ್ತಾರೆ. ಇಂಥ ಡ್ರಾಮಾಗಳು ಹೆಚ್ಚು ಆಕರ್ಷಣೆ ಪಡೆದುಕೊಳ್ಳುವ ಮೂಲಕ ನಿಜ ಅನ್ನೋದು ಮೂಲೆಗೆ ಸರಿದು ಹೋಗುತ್ತದೆ ಎಂದು ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ.

'ಇದು ಎಡಿಟ್‌ ಮಾಡಿದ ಚಿತ್ರವಲ್ಲ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಹಾಗೂ ಭಗತ್‌ ಸಿಂಗ್‌ಗೆ ಸರಿಸಮಾನವಾಗಿ ಅರವಿಂದ್‌ ಕೇಜ್ರಿವಾಲ್‌ ಚಿತ್ರವನ್ನು ಆಪ್‌ ಹಾಕಿದೆ. ಇದು ಭಗತ್‌ ಸಿಂಗ್‌, ಅಂಬೇಡ್ಕರ್‌ಗೆ ಅವಮಾನವಲ್ಲವೇ? ಭಗತ್‌ ಸಿಂಗ್‌ ಹಾಗೂ ಅಂಬೇಡ್ಕರ್‌ಗಿಂತ ಕೇಜ್ರಿವಾಲ್‌ ದೊಡ್ಡವರು ಎಂದು ಬಿಂಬಿಸಲಾಗಿದೆ. ಆಪ್‌ ಮೀಡಿಯಾ ಸೆಲ್‌ ಹಾಗೂ ಸುನೀತಾ ಕೇಜ್ರಿವಾಲ್‌ರಿಂದ ಇದು ಕೆಟ್ಟ ವರ್ತನೆ' ಎಂದು ಟೀಕಿಸಿದ್ದಾರೆ.

12 ದಿನದಲ್ಲಿ ಕೇಜ್ರಿವಾಲ್‌ ತೂಕ 4.5 ಕೆ.ಜಿ ಇಳಿ: ಸಚಿವೆ ಅತಿಷಿ ಆರೋಪ

ಇತ್ತೀಚೆಗೆ ಸುನೀತಾ ಕೇಜ್ರಿವಾಲ್‌ ತಿಹಾರ್‌ ಜೈಲಿಗೆ ಯಾಕೆ ಹೋಗಿದ್ದರು ಎನ್ನುವುದು ಗೊತ್ತಾಗಿದೆ. ಈ ಫೋಟೋ ತೆಗೆದುಕೊಂಡು ಬರಲು ಹೋಗಿದ್ದರು. ಅದನ್ನೇ ಇಲ್ಲಿ ತೂಗುಹಾಕಿದ್ದಾರೆ. ಮನೆಯಿಂದ ಬರುವ ಊಟವನ್ನೂ ಮಾಡದೇ ಇದ್ದಲ್ಲಿ, ಈ ಫೋಟೋಗೆ ಮಾಲೆ ಬೀಳುವ ದಿನವೂ ದೂರವಿಲ್ಲ ಎಂದು ತಮಾಷೆ ಮಾಡಿದ್ದಾರೆ.

ಛೋಟಾ ರಾಜನ್‌, ಶಹಾಬುದ್ದೀನ್‌ ಇದ್ದ ತಿಹಾರ್‌ನ ನಂ.2 ಸೆಲ್‌ನಲ್ಲಿ ದಿನ ಕಳೆದ ಅರವಿಂದ್‌ ಕೇಜ್ರಿವಾಲ್‌!

Follow Us:
Download App:
  • android
  • ios